BREAKING NEWS
Search

ಚೀನಾಕ್ಕೆ ಮತ್ತೊಂದು ಶಾಕ್! ಕೇಂದ್ರ ಸರ್ಕಾರದಿಂದ 43 ಚೀನಾ ಆ್ಯಪ್ ಗೆ ನಿಷೇಧ.

1045

ನವದೆಹಲಿ: 43 ಚೀನಾ ಆ್ಯಪ್‍ಗಳನ್ನು ಭಾರತದಲ್ಲಿ ನಿಷೇಧ ಮಾಡಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಇಂದು ಆದೇಶ ಹೊರಡಿಸಿದೆ.

ಈ ಸಂಬಂಧ ಪತ್ರಿಕಾ ಹೇಳಿಯನ್ನು ಬಿಡುಗಡೆ ಮಾಡಿರುವ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ರ ಸಾರ್ವಭೌಮ ರಾಷ್ಟ್ರಕ್ಕೆ ಇರುವ ಅಧಿಕಾರಗಳ ಅಡಿ ಕೇಂದ್ರ ಸರ್ಕಾರ 43 ಆ್ಯಪ್‍ಗಳನ್ನು ನಿಷೇಧ ಮಾಡಿದೆ. ಜೊತೆಗೆ ಈ ಆ್ಯಪ್‍ಗಳು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆಗೆ ಧಕ್ಕೆ ತರುವ ಮಾಹಿತಿ ಇರುವುದರಿಂದ ಬ್ಯಾನ್ ಮಾಡಿದ್ದೇವೆ ಎಂದು ಕಾರಣ ತಿಳಿಸಿದೆ.

ಬ್ಯಾನ್ ಆದ ಆ್ಯಪ್ ಗಳ ವಿವರ ಈ ಕೆಳಗಿನಂತಿದೆ:-

ಈ ಹಿಂದೆ ಭದ್ರತಾ ದೃಷ್ಠಿಯಿಂದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು ಈ 43 ಆ್ಯಪ್‍ಗಳನ್ನು ನಿಷೇಧ ಮಾಡುವಂತೆ ಗೃಹ ಸಚಿವಾಲಯಕ್ಕೆ ವರದಿ ನೀಡಿತ್ತು. ಈ ವರದಿಯನ್ನು ಆಧರಿಸಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ 43 ಆ್ಯಪ್‍ಗಳನ್ನು ನಿಷೇಧ ಮಾಡಿದೆ ಎಂದು ತಿಳಿಸಿದೆ.

ಈ ಹಿಂದೆಯೂ ಕೂಡ ಭಾರತ ಸರ್ಕಾರ ಟಿಕ್‍ಟಾಕ್ ಸೇರಿದಂತೆ ಸುಮಾರು 118 ಚೀನಾ ಆ್ಯಪ್‍ಗಳನ್ನು ಬ್ಯಾನ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!