ಶಿರಸಿ:ಆರು ವರ್ಷದ ಬಾಲಕಿಗೆ ಅತ್ಯಾಚಾರ ಮಾಡಿದವನಿಗೆ 11 ವರ್ಷ ಜೈಲು ಶಿಕ್ಷೆ.

1428

ಕಾರವಾರ:- ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಹುಲೇಕಲ್ ಗ್ರಾಮದ ರಾಮನಗರ ನಿವಾಸಿ ರವರ ಮಗಳಾದ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಹಾಗೂ ಹಲವು ಬಾರಿ ಅತ್ಯಾಚಾರಕ್ಕೆ ಪ್ರಯತ್ನ ಪಟ್ಟ ಬಗ್ಗೆ ದಿನಾಂಕ 13-12-2014 ರಂದು ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಯಲ್ಲಿ ಕಲಂ 4,6,8,10,12 ಪೋಕ್ಸೋ ಕಾಯ್ದೆ,ಹಾಗೂ 376(2),354(A) IPC ಅನ್ವಯ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಆರ್ ಎಲ್ ಗಣಪತಿ ಸಿಪಿಐ ಶಿರಸಿ ವೃತ್ತ, ರವರು ಆರೋಪಿತ ನಾಗರಾಜ್ ಪೂಜಾರಿ ತಂದೆ ಈಶ್ವರ ಪೂಜಾರಿ ಈತನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡು ದೋಷಾರೋಪಣಾ ಪತ್ರವನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ ರವರಿಗೆ ಸಲ್ಲಿಸಿದ್ದರು.

ಕಾರವಾರದ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಕೈಗೊಂಡು ಇಂದು ಆರೋಪಿತನಾದ ನಾಗರಾಜ್ ಈಶ್ವರ ಪೂಜಾರಿ ಈತನಿಗೆ 11 ವರ್ಷ ಜೈಲುಶಿಕ್ಷೆ ಹಾಗೂ 20,000₹ ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.

ಸರಕಾರದ ಪರವಾಗಿ ಅಭಿಯೋಜಕರಾದ ಶುಭಾಷ್ ಖೈರನ್ ರವರು ವಾದವನ್ನು ಮಂಡಿಸಿ ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದು ಕಾರಣ ಶಿವ ಪ್ರಕಾಶ್ ದೇವರಾಜು ಜಿಲ್ಲಾ ಪೊಲೀಸ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ರವರು ಸದ್ರಿಯವರನ್ನು ಅಭಿನಂದಿಸಿದ್ದಾರೆ. ತನಿಖಾಧಿಕಾರಿ ಹಾಗೂ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಕೋರ್ಟ್ ಕರ್ತವ್ಯ ಸಿಬ್ಬಂದಿ ಮಾರುತಿ ಎಸ್ ಮಾಳಗಿ ರವರಿಗೆ ಬಹುಮಾನ ಘೋಷಿಸಿರುತ್ತಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!