ಹಳಿಯಾಳ:- ಇಂದು ಹಳಿಯಾಳದ ಪುರಸಭೆ ಯಿಂದ ಆಶ್ರಯ ಪ್ಲಾಟ್ ಹಂಚಿಕೆ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ನಗರಸಭಾ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯುವ ಜೊತೆ ಕೈ ಮಿಲಾಯಿಸುವ ಹಂತ ತಲುಪಿತು.
ಇಂದು ಆಶ್ರಯ ಸಮಿತಿ ಅಧ್ಯಕ್ಷರು ಹಾಗೂ ಹಳಿಯಾಳ ಶಾಸಕ ಆರ್. ವಿ ದೇಶಪಾಂಡೆಯವರು ಆಶ್ರಯ ಪ್ಲಾಟ್ ಪಲಾನುಭವಿಗಳಿಗೆ ಹಕ್ಕು ಪತ್ರ ನೀಡಲು ಆಗಮಿಸಿದ್ದರು ಈ ವೇಳೆ ಬಿಜೆಪಿ ಕಾರ್ಯಕರ್ತರು ಆಶ್ರಯ ಪ್ಲಾಟ್ ಹಂಚಿಕೆಯಲ್ಲಿ ಭಾರಿ ಅವ್ಯವಹಾರ ಆಗಿದೆ ಎಂದು ಆರೋಪಿಸಿ ಪ್ರತಿಭಟನೆಗೆ ಇಳಿದರು.

ಈ ವೇಳೆ ಕಾಂಗ್ರೆಸ್ ಹಾಗು ಬಿಜೆಪಿ ನಗರಸಭಾ ಸದಸ್ಯರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ಕಾರ್ಯಕ್ರಮವನ್ನು ಅರ್ಥಕ್ಕೆ ಮೊಟುಕುಗೊಳಿಸಿದ ಆರ್.ವಿ ದೇಶಪಾಂಡೆ ಸ್ಥಳದಿಂದ ಕಾಲ್ಕಿತ್ತರು.
ಮಾಜಿ ಶಾಸಕ ಸುನೀಲ್ ಹೆಗಡೆ ರಿಂದ ವಿರೋಧ.

ಪಟ್ಟಣದ ಕೈಗಾರಿಕಾ ವಸಾಹತು ಪ್ರದೇಶದ ಎದುರಿಗೆ ಇರುವ ಕೊಟ್ಯಂತರ ರೂ. ಬೆಲೆ ಬಾಳುವ ಜಮೀನನ್ನು ಆಶ್ರಯ ಪ್ಲಾಟ ಉದ್ದೇಶಕ್ಕೆ ಹಂಚಿಕೆ ಮಾಡಲು ನಿರ್ಧರಿಸಿರುವುದರ ಹಿಂದೆ ದೊಡ್ಡ ಷಡ್ಯಂತ್ರ ಅಡಿಗಿದೆ ಅಲ್ಲದೇ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಳಿಯಾಳ ಪುರಸಭೆ ವ್ಯಾಪ್ತಿಯಲ್ಲಿ ಬರುವ ಕೈಗಾರಿಕಾ ವಸಹಾತು, ಉಪಕಾರಗೃಹದ ಎದುರಿಗೆ ಮತ್ತು ಅಗ್ನಿಶಾಮಕ ಠಾಣೆ ಪಕ್ಕದಲ್ಲಿ ಇರುವ ಕೊಟ್ಯಂತರ ರೂ. ಬೆಲೆಬಾಳುವ ಜಮೀನನ್ನು ಆಶ್ರಯ ಪ್ಲಾಟಗಳನ್ನಾಗಿ ಮಾಡಿ ಇಂದು ಹಂಚಿಕೆ ಮಾಡಿದ್ದು
ಈ ಪ್ರಕ್ರಿಯೇಗೆ ತಮ್ಮ ಪ್ರಭಲ ವಿರೋಧವಿದೆ ಎಂದು ಹೇಳಿದರು.
ಆಶ್ರಯ ಮನೆ ಹಂಚಿಕೆ ಮಾಡುವಾಗ ಅನುಸರಿಸಬೇಕಾದ ಸರ್ಕಾರದ ನಿಯಮಗಳನ್ನು ಮತ್ತು ಮೀಸಲಾತಿಯನ್ನು ಕೂಡ ಸಂಪೂರ್ಣವಾಗಿ ಉಲ್ಲಂಘಿಸಿ ಭ್ರಷ್ಟಾಚಾರ ನಡೆಸಿರುವ ಈ ಆಶ್ರಯ ನಿವೇಶನ ಹಂಚಿಕೆ ವಿಚಾರದ ಬಗ್ಗೆ ಈಗಾಗಲೇ ಹಳಿಯಾಳ ಪುರಸಭೆಯ ಬಿಜೆಪಿಯ ೭ ಸದಸ್ಯರು ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಎರಡೆರಡು ಬಾರಿ ಲಿಖಿತ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದ್ದರು ಕೂಡ ಸೋಮವಾರ ದಿ.೮ ರಂದು ತರಾತುರಿಯಲ್ಲಿ, ದ್ವೇಷ ಸಾಧಿಸುವವರಂತೆ ನಿವೇಶನ ಹಂಚಿಕೆ ಮಾಡಿರುವುದು ಹಿಂದಿನ ದುರುದ್ದೇಶ ಏನು ಎಂದು ಹೆಗಡೆ ಪ್ರಶ್ನೀಸಿದರು.
ಸರ್ಕಾರದ ನಿಯಮಾವಳಿಯಂತೆ ಮೀಸಲಾತಿಯ ಪ್ರಕಾರ ಪರಿಶಿಷ್ಟ ಜಾತಿ ಶೇ.೩೦ ಅಂದರೇ ೧೨ ಜನರಿಗೆ ನಿವೇಶನ ಕೊಡುವಲ್ಲಿ ಕೇವಲ ೯ ಜನರಿಗೆ, ಪರಿಶಿಷ್ಟ ಪಂಗಡ ಶೇ.೧೦ ಅಂದರೇ ೩ ಜನರಿಗೆ ಕೊಡುವಲ್ಲಿ ಒಂದು ನಿವೇಶನ ಹಂಚಿಕೆಯಾಗಿಲ್ಲ, ಅಲ್ಪಸಂಖ್ಯಾತರಿಗೆ ಶೇ.೧೦ ಅಂದರೇ ೪ ಜನರಿಗೆ ಕೊಡುವಲ್ಲಿ ದಾಖಲೆಯ ೧೭ ಜನರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ .
ಅಲ್ಲದೇ ಇತರೇ ಸಾಮಾನ್ಯ ವರ್ಗದವರಿಗೆ ಶೇ.೫೦ ಅಂದರೇ ೧೮ ಜನರಿಗೆ ಕೊಡುವಲ್ಲಿ ೧೧ ಜನರಿಗೆ ಮಾತ್ರ ನಿವೇಶನ ಹಂಚಿಕೆ ಮಾಡುವುದರ ಮೂಲಕ ಸ್ಪಷ್ಟವಾಗಿ ಇಲ್ಲಿ ಭ್ರಷ್ಟಾಚಾರ ನಡೆದಿರುವುದು ಮೆಲ್ನೋಟಕ್ಕೆ ಸಾಭಿತಾಗುತ್ತದೆ ಎಂದರು.
ಪುರಸಭೆ ಕೊಟ್ಟಿರುವ ಮನೆಯ ಪಟ್ಟಾದಲ್ಲಿ ಯಾವುದೇ ಗಡಿಯು ಹಾಕಿರುವುದಿಲ್ಲ ಹೀಗಾಗಿ ಸರಕಾರದ ನಿಯಮಾವಳಿಯಂತೆ ಮಿಸಲಾತಿ ವ್ಯತ್ಯಾಸದ ಜೊತೆಗೆ ಪ.ಜಾ/ಪಪಂ ಮತ್ತು ಹಿಂದೂಗಳಿಗೆ ವಂಚನೆ ಮಾಡಿರುದು ಸ್ಪಷ್ಟವಾಗುತ್ತದೆ.
ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಅವರು ಹಿರಿಯರು ಜೊತೆಗೆ ಅನುಭವಿಗಳಾಗಿದ್ದಾರೆ ಅಲ್ಲದೇ ದೇಶಪಾಂಡೆ ಸೇರಿದಂತೆ ಕಾಂಗ್ರೇಸ್‌ನವರು ತಾವು ಜಾತ್ಯಾತೀತರು ಮತ್ತು ಬಿಜೆಪಿ ಪಕ್ಷದವರು ಕೊಮುವಾದಿ ಎನ್ನುತ್ತಾರೆ.
ಹಾಗಾದರೇ ಈ ಆಶ್ರಯ ನಿವೇಶನ ಹಂಚಿಕೆಯಲ್ಲಿ ಯಾವ ಸಾಮಾಜಿಕ ನ್ಯಾಯ ಬಡವರಿಗೆ, ಅರ್ಹರಿಗೆ ದೊರೆತಿದೆ ಮತ್ತು ಅಲ್ಪಸಂಖ್ಯಾತರಿಗೆ ೪ ನಿವೇಶನ ನೀಡುವಲ್ಲಿ ೧೭ ಜನರಿಗೆ ನೀಡಿರುವುದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನೀಸಿದ ಅವರು ಕೂಡಲೇ ನಿವೇಶನ ಹಂಚಿಕೆ ವಿಚಾರ ಕೈ ಬಿಡಬೇಕು ಇಲ್ಲದಿದ್ದರೇ ದೇಶಪಾಂಡೆ ಅವರು ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಸಂಶಯ ನಮ್ಮಲ್ಲಿ ಮೂಡುತ್ತದೆ ಎಂದರು.
ಸುಮಾರು ೩೦೦೦ ಅರ್ಜಿಗಳು ಸಲ್ಲಿಕೆಯಾಗಿರುವ ಈ ಪ್ರಕರಣದಲ್ಲಿ ಕೇವಲ ೨೬ ಜನರಿಗೆ ಪಟ್ಟಾ ಕೊಡುವುದರ ಹಿಂದಿನ ಉದ್ದೇಶ ಏನು? ಎಂದ ಅವರು ಎಲ್ಲರನ್ನು ಕರೆಯಿಸಿ ಸರ್ಕಾರದ ನಿಯಮಾವಳಿಯಂತೆ ನಿವೇಶನ ಹಂಚಿಕೆಯಾಗಲಿ ಇಲ್ಲವೇ ಪುರಸಭೆಯವರು ಕಾನೂನು ಹೋರಾಟಕ್ಕೆ ಸಿದ್ದವಾಗಿರಿ ಎಂದು ಹೆಗಡೆ ಸವಾಲ್ ಹಾಕಿದ್ದಾರೆ.
ತರಾತುರಿಯಲ್ಲಿ ಹಂಚಿಕೆಯಾಯ್ತು ನಿವೇಶನ.!
ಸದ್ಯ 27 ರಲ್ಲಿ 23 ಫಲಾನುಭವಿಗೆ ಚೀಟಿ ಎತ್ತುವ ಮೂಲಕ ನಿಯಮಾನುಸಾರ ಹಂಚಿಕೆಯನ್ನು .ಆರ್.ವಿ ಡಿ ಮಾಡಿದ್ರು.ಆದರೇ ನಿವೇಶನ ಹಂಚಿಕೆಯಲ್ಲಿ ಬಾರಿ ಅವ್ಯವಹಾರ ಆಗಿದೆ ಎಂದು ಏಳು ಜನ ಬಿಜೆಪಿ ಸದಸ್ಯರು ದೂರಿದ್ದಾರೆ.