ಹುಟ್ಟುಹಬ್ಬದ ಆಚರಣೆಯನ್ನ ಹಲವರು ಅವಿಸ್ಮರಣೀಯ ವಾಗಿಸುವಂತೆ ಮಾಡಿಕೊಳ್ಳುವುದು ಸಾಮಾನ್ಯ. ಕೇಕ್ ಕತ್ತರಿಸಿ ಅಥವಾ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಜನ್ಮದಿನ ಆಚರಿಸಿಕೊಳ್ಳುವವರು ಇದ್ದಾರೆ. ಕೆಲವರು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ತೆರಳಿ ಅಲ್ಲಿನವರಿಗೆ ಕೈಲಾದ ಸಹಾಯ ಮಾಡಿ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಉಂಟು. ನಟ, ನಟಿಯರು ತಮ್ಮ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬದ ದಿನದಂದು ಕಾಲ ಕಳೆಯುತ್ತಾರೆ.
ಆದರೆ, ಹಿಂದಿಯ ಕಿರುತೆರೆ ನಟಿ ನಿಯಾ ಶರ್ಮಾ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ರೀತಿಯು ಸಖತ್ ಟೀಕೆಗೆ ಕಾರಣವಾಗಿದೆ.
ಈ ನಟಿ ತನ್ನ 30ನೇ ವರ್ಷದ ಜನ್ಮದಿನವನ್ನು ಪುರುಷರ ಮರ್ಮಾಂಗ ಹೋಲುವ ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡಿದ್ದಾರೆ. ಆಕೆಯ ಸ್ನೇಹಿತರು ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವಿಡಿಯೊ ಮತ್ತು ಫೋಟೊಗಳನ್ನು ಈಕೆ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಇದು ನನ್ನ ಡರ್ಟಿ 30ನೇ ಜನ್ಮದಿನ’ ಎಂದು ಬರೆದುಕೊಂಡಿದ್ದಾರೆ.

ಈ ರೀತಿಯ ಕೇಕ್‌ಗಳನ್ನು ಹೆಚ್ಚಾಗಿ ಬ್ಯಾಚುಲರ್ ಪಾರ್ಟಿಗೆ ಮಾಡಿಸುವುದು ಉಂಟು. ನಿಯಾ ತನ್ನ ಜನ್ಮದಿನದ ಆಚರಣೆಗೆ ಈ ಮಾದರಿಯ ಕೇಕ್ ಮಾಡಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರ ಈ ವರ್ತನೆಗೆ ಯುವಕ ನೆಟ್ಟಿಗರು ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದು ಬೊಬ್ಬೆ ಹೊಯ್ದುಕೊಂಡಿದ್ದಾರೆ.