ಪುನಿತ್ ರಾಜ್ ಕುಮಾರ್ ಗೆ ಹೃದಯಾಘಾತ ಆಸ್ಪತ್ರೆಗೆ ದಾಖಲು-ಪವರ್ ಸ್ಟಾರ್ ಸ್ಥಿತಿ ಗಂಭೀರ

2700

ಬೆಂಗಳೂರು:- ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಗೆ ಇಂದು ಲಘು ಹೃದಯಾಘಾತವಾಗಿದ್ದು
ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ಐಸಿಯೂ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಕ್ರಂ ಆಸ್ಪತ್ರೆ ಮಾಹಿತಿ ಪ್ರಕಾರ ಅವರ ಸ್ಥಿತಿ ಗಂಭೀರವಾಗಿದ್ದು ಹೃದ್ರೋಗ ತಜ್ಞರಿಂದ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಆಸ್ಪತ್ರೆಗೆ ಪುನಿತ್ ಕುಟುಂಬದವರು ಆಗಮಿಸಿದ್ದಾರೆ.
ಸದ್ಯ ಆಸ್ಪತ್ರೆಯ ಸುತ್ತಲೂ ಬಿಗಿ ಬಂದವಸ್ತ್ ಕಲ್ಪುಸಲಾಗಿದ್ದು ಇಲ್ಲಿಗೆ ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಸ್ಥಳಕ್ಕೆ ಹೆಚ್ವುವರಿ ಐಜಿಪಿ ಮುರುಘನ್ ಭೇಡಿನೀಡಿ ಭದ್ರತೆ ಕುರಿತು ತಪಾಸಣೆ ನಡೆಸಿದರು.

ಹೃದಯಾಘಾತ ವಾಗಿದ್ದು ಹೇಗೆ?


ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಪುನೀತ್ ರಾಜ್‍ಕುಮಾರ್ ಏಕಾ ಏಕಿ ಕುಸಿದು ಬಿದ್ದಿದ್ದಾರೆ. ಈ ವೇಳೆ ರಮಣಶ್ರೀ ಆಸ್ಪತ್ರೆಯಲ್ಲಿ ಮೊದಲು ಪ್ರಥಮ ಚಿಕ್ಸಿ ಕೊಡಿಸಲಾಗಿದೆ. ನಂತರ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

ಶಿವಣ್ಣ ಕಣ್ಣೀರು.

ಬಜರಂಗಿ -2 ಸಿನಿಮಾ ವನ್ನು ವೀಕ್ಷಿಸುತಿದ್ದ ಶಿವಣ್ಣ ತಮ್ಮನಿಗೆ ಹೃದಯಾಘಾತವಾದ ಸುದ್ದಿ ತಿಳಿದು ಆಸ್ಪತ್ರೆಗೆ ಆಗಮಿಸಿದ್ದು ತಮ್ಮನ ಸ್ಥಿತಿ ನೋಡಿ ಕಣ್ಣೀರು ಹಾಕಿ ನೋವು ತೋಡಿಕೊಂಡಿದ್ದಾರೆ. ಇನ್ನು ಮುಖ್ಯಮಂತ್ರಿ ಬೊಮ್ಮಾಯಿ ,ನಟ ಯಶ್ ಹಾಗೂ ಮುಂತಾದ ಪ್ರಮುಖರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!