ಉತ್ತರ ಕನ್ನಡ ಜಿಲ್ಲೆ ಹಿಂದುಳಿಯಲು ದೇಶಪಾಂಡೆ ನೇರ ಹೊಣೆ: ಅನಂತಮೂರ್ತಿ ಹೆಗಡೆ‌ ಆರೋಪ

155

ಕಾರವಾರ:- ನಮ್ಮ ಜಿಲ್ಲೆ ಸಂಪದ್ಭರಿತ ಜಿಲ್ಲೆ, ಜಿಲ್ಲೆಯಲ್ಲಿ ಯಾವುದೇ ಒಂದು ಕೈಗಾರಿಕೆ ಇಲ್ಲ, ಇದಕ್ಕೆ ನೇರ ಹೊಣೆ ಯಾರು, ನಮ್ಮ ಜಿಲ್ಲೆಯವರೇ ಮೂರು ಭಾರಿ ಬೃಹತ್ ಕೈಗಾರಿಕಾ ಸಚಿವರಾದರೂ ಯಾವುದೇ ಒಂದು ಕೈಗಾರಿಕೆ ಇಲ್ಲ, ಎಂದು ಮಾಜಿ ಸಚಿವ ಆರ್. ವಿ. ದೇಶಪಾಂಡೆ ಅವರ ಮೇಲೆ ಆರೋಪಿಸಿದರು.

ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆಗೋವರೆಗೂ ನಮ್ಮ‌ಹೋರಾಟ‌ ನಿರಂತರವಾಗಿರುತ್ತದೆ. ಇದು ನಾವು ಸರ್ಕಾರಕ್ಕೆ ನೀಡುವ ನೇರ ಎಚ್ಚರಿಕೆಯಾಗಿದೆ ಎಂದರು.

ಇಂದು ಅವರು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಎಂಟು ದಿನಗಳವರೆಗೆ ಪಾದಯಾತ್ರೆ ಮಾಡಿ‌ ಜಿಲ್ಲಾಧಿಕಾರಿಗಳ ಕಛೇರಿ ಎದುರು ಹಮ್ಮಿಕೊಂಡ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿದರು. ನಮ್ಮ ಜಿಲ್ಲೆ ಸಂಪದ್ಭರಿತವಾಗಿದ್ದು, ನಾವು ಕೈಗಾ ಅಣುವಿದ್ಯುತ್ ಸ್ಥಾವರಕ್ಕೆ ಹಾಗೂ ಸೀಬರ್ಡ ನೌಕಾನೆಲೆಗೆ ನೂರಾರು ಎಕರೆ ಪ್ರದೇಶ ನೀಡಿದ್ದೇವೆ. ನಮ್ಮ ಜಿಲ್ಲೆಯ ಜನರು ಬೇರೆ ಊರುಗಳಿಗೆ ಹೋಗಿ ಕೆಲಸ ಮಾಡುವಂತಾಗಿದೆ. ಜಿಲ್ಲೆಯ ಹಿರೇಗುತ್ತಿಯಲ್ಲಿ 1800 ಎಕರೆ ಕೆಐಡಿಬಿ ಭೂಮಿ ಇದೆ. ಹಿಂದೆ ಸಾಕಷ್ಟು ವರ್ಷ ಕೈಗಾರಿಕಾ ಸಚಿವರಾಗಿದ್ದ ಜಿಲ್ಲೆಯ ಜನಪ್ರತಿನಿಧಿಯೊಬ್ಬರು ಜಿಲ್ಲೆಗೆ ಒಂದೂ ಕೈಗಾರಿಕೆ ತಂದಿಲ್ಲ. ಕರೊನಾ ಬಂದ ನಂತರ ಹೃದಯಾಘಾತಗಳ ಸಂಖ್ಯೆ ಹೆಚ್ಚಿದೆ. ಜಿಲ್ಲೆಯ ಯಾವುದೇ ತಾಲೂಕಿನ ಜನರಿಗೆ ಗಂಭೀರ ಅನಾರೋಗ್ಯ ಸಮಸ್ಯೆ ಎದುರಾದರೆ ಕನಿಷ್ಠ 300 ಕಿಮೀ ತೆರಳಬೇಕಾದ ದುಸ್ಥಿತಿ ಇದೆ.


ಉಡುಪಿಯಲ್ಲಿ, ಮಂಗಳೂರಿನಲ್ಲಿ ಆಗುವ ಆಸ್ಪತ್ರೆ ಉತ್ತರ ಕನ್ನಡದಲ್ಲೇಕೆ ಆಗುವುದಿಲ್ಲ. ನಮಗೆ ಸೌಲಭ್ಯ ಬೇಕು ಎಂದು ಪಟ್ಟು ಹಿಡಿಯುವವರೆಗೂ ಸರ್ಕಾರ ಅದಕ್ಕೆ ಸ್ಪಂದಿಸದು. ನಾವು ಎಲ್ಲಿಯವರೆಗೆ ಆಸ್ಪತ್ರೆಯಾಗುವುದಿಲ್ಲವೋ ಅಲ್ಲಿಯವರೆಗೆ ಹೋರಾಟ ಮಾಡುತ್ತೇವೆ ಎಂದು ಶಪಥ ಮಾಡೋಣ. ಉತ್ತರ ಕನ್ನಡ ಧೀರರ ನಾಡು, ಶೂರರ ನಾಡು, ಪದ್ಮಶ್ರೀ ಪುರಸ್ಕೃತರಿದ್ದಾರೆ. ಆದರೆ, ಅವರಿಗೇ ಅನಾರೋಗ್ಯಕ್ಕೊಳಗಾಗಿ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ ಹಾಗಾಗಿ ಜಿಲ್ಲೆಯ ಕರಾವಳಿಯಲ್ಲಿ ಒಂದು ಹಾಗೂ ಘಟ್ಟದ ಮೇಲೊಂದು ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂಬುದು ನಮ್ಮ ಒತ್ತಾಯ ಎಂದರು. ನಮ್ಮ ಜಿಲ್ಲೆಯ ಖ್ಯಾತ ರಾಜಕಾರಣಿ ಒಬ್ಬರು ಐದು ಭಾರಿ ಮಂತ್ರಿಯಾಗುತ್ತಾರೆ, ಮೂರು ನಾಲ್ಕು ಭಾರಿ ಬೃಹತ್ ಕೈಗಾರಿಕಾ ಮಂತ್ರಿಯಾಗಿದ್ದಾರೆ ಅದರೆ ಒಂದೇ ಒಂದು ಪ್ಯಾಕ್ಟರಿ ಮಾಡಿಲ್ಲ, ಇದು ದುರ್ದೈವ. ಇಂತಹ ರಾಜಕಾರಣಿಗಳು ಮಾಡಿದ ತಪ್ಪಿನಿಂದ ನಮ್ಮ ಜನರು ಕಷ್ಟ ಪಡುವಂತಾಗಿದೆ. ನಮ್ಮ ಹೋರಾಟ ನಿರಂತರವಾಗಿರುತ್ತದೆ.‌ ಆಸ್ಪತ್ರೆ ಆಗೋವರೆಗೂ ನಮ್ಮ ಹೋರಾಟ ನಿರಂತರ, ಇದು ನಾವು ಸರ್ಕಾರಕ್ಕೆ ಎಚ್ಚರಿಕೆ‌ ನೀಡುತ್ತೇನೆ ಎಂದು ಗುಡುಗಿದರು.
ನಮ್ಮ ಪಾದಯಾತ್ರೆ ತಡೆಯಲು, ಕೆಲವರು ಷಡ್ಯಂತ್ರವನ್ನು ಮಾಡಿದ್ದಾರೆ, ಪಾದಯಾತ್ರೆಗೆ ಹೋಗಬೇಡಿ ಎಂದು ಜನರನ್ನು ಪಡೆದಿದ್ದಾರೆ, ತಾಯಿ ಮಾರಿಕಾಂಬೆಯ ಆಶೀರ್ವದದಿಂದ ಎಲ್ಲಾ ಷಡ್ಯಂತ್ರವನ್ನು ಹಿಮ್ಮೆಟ್ಟಿಸಿ 140 ಕಿಲೋ‌ಮೀಟರ್ ದೂರ ಪಾದಯಾತ್ರೆ ಮಾಡಿ ಇಲ್ಲಿಗೆ ಬಂದು ನಿಂತಿದ್ದೇವೆ. ಇನ್ನಮೇಲೆ ಯಾರಿಗೆ ಯಾವುದೇ ಕಾರಣಕ್ಕೂ ಹೆದರುವ ಮಾತಿಲ್ಲ, ಇಲ್ಲಿಯವರೆಗೆ ಒಂದು ಲೆಕ್ಕ , ಇನ್ನೂ ಮೇಲೆ ಇನ್ನೊಂದು ಲೆಕ್ಕ ಎಂದು ಗುಡುಗಿದರು.

ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕು ಎಂದು ಆಗ್ರಹಿಸಿ ಶಿರಸಿಯ ಅನಂತಮೂರ್ತಿ ಹೆಗಡೆ ಟ್ರಸ್ಟ್ ಕೈಗೊಂಡಿದ್ದ ಪಾದಯಾತ್ರೆ ಗುರುವಾರ ಕಾರವಾರ ತಲುಪಿತು.
ನ.2 ರಿಂದ ಶಿರಸಿ ಮಾರಿಕಾಂಬಾ ದೇವಸ್ಥಾನದಿಂದ ಹೊರಟ ಪಾದಯಾತ್ರೆ ಕುಮಟಾ, ಅಂಕೋಲಾ ಮಾರ್ಗವಾಗಿ 140 ಕಿಮೀ ಸಾಗಿ ಬಂದಿದೆ. ಕುಮಟಾದಲ್ಲಿ ಶಾಸಕ ದಿನಕರ ಶೆಟ್ಟಿ , ಅಂಕೋಲಾದಲ್ಲಿ ಪದ್ಮಶ್ರೀ ಪುರಸ್ಕೃತ ಸುಕ್ರಿ ಗೌಡ ಆಗಮಿಸಿ ಪಾದಯಾತ್ರೆಯ ಉದ್ದೇಶವನ್ನು ಶ್ಲಾಘಿಸಿದರು. ನಡುವೆ ಸುಮಾರು 30 ಕ್ಕೂ ಅನೇಕ ಸಂಘಟನೆಗಳ ಪ್ರಮುಖರು ಪಾದಯಾತ್ರೆಯನ್ನು ಬೆಂಬಲಿಸಿ ಅನಂತಮೂರ್ತಿ ಅವರ ಜತೆ ಹೆಜ್ಜೆ ಹಾಕಿದರು. ಸಾವಿರಾರು ಜನ ಹೋರಾಟದಲ್ಲಿ ಭಾಗಿಯಾದರು. ಜಿಲ್ಲಾಧಿಕಾರಿ ಕಚೇರಿಯ ಎದುರು ಸಾರ್ವಜನಿಕ ನಡೆಸಿ, ಪಾದಯಾತ್ರೆಯ ಉದ್ದೇಶ ಹಾಗೂ ಬೇಡಿಕೆಗಳನ್ನು ಮಂಡಿಸಿ, ನಂತರ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಅವರಿಗೆ ಮನವಿ ಪತ್ರವನ್ನು ಹಸ್ತಾಂತರಿಸಲಾಯಿತು.

ಸೇಂಟ್ ಮಿಲಾಗ್ರಿಸ್ ಬ್ಯಾಂಕ್‌ನ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಮಾತನಾಡಿ, ಆಸ್ಪತ್ರೆ ಸ್ಥಾಪಿಸಿ ಸಾವು ನಿಲ್ಲಿಸಿ ಎಂದು ಒತ್ತಾಯಿಸಿದರು.

ಜಿಲ್ಲಾ ಜನಪರ ಸಂಘಟನೆಯ ಅಧ್ಯಕ್ಷ ನಾಗೇಶ ನಾಯ್ಕ ಕಾಗಾಲ ಮಾತನಾಡಿ, ಜಿಲ್ಲೆಯ ರಾಜಕೀಯ ವ್ಯವಸ್ಥೆ ನಿಷ್ಕಿçಯವಾಗಿದೆ. ಜನರ ಪರವಾದ ಹೋರಾಟಕ್ಕೆ ಹೆಚ್ಚಿನ ಶಾಸಕರು, ಮಾಜಿ ಶಾಸಕರು ಬೆಂಬಲ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ರಾಘು ನಾಯ್ಕ ಮಾತನಾಡಿ, ಸರ್ಕಾರಿ ಮೆಡಿಕಲ್ ಕಾಲೇಜ್ ಕಾರವಾರದಲ್ಲಿ ನಿರ್ಮಾಣವಾದರೂ. ಅದು ಕೆಲವು ಧನ ದಾಹಿಗಳ ಕೇಂದ್ರವಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ಹಿಂದೆ ರಕ್ತದಲ್ಲಿ ಪತ್ರಬರೆದಿದ್ದೆವು.

ಯಲ್ಲಾಪುರ ಆಟೋ ಚಾಲಕರ ಸಂಘದ ಅಧ್ಯಕ್ಷ ಸಂತೋಷ ಮಾತನಾಡಿ, ಜಿಲ್ಲೆಯ ರಾಜಕಾರಣಿಗಳು ನಿಷ್ಕ್ರಿಯರಾಗಿದ್ದಾರೆ. ಅನಂತಮೂರ್ತಿ ಅವರಂತ ಜನನಾಯಕರು ನಮಗೆ ಬೇಕು, ಇಂತಹ ಜನನಾಯಕ ನಮ್ಮ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಾರೆ ಎಂದು ಅನಂತಮೂರ್ತಿ ಅವರ ಪಾದಯಾತ್ರೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಉತ್ತರ ಕನ್ನಡ ಅಡುಗೆ ಅನಿಲ ವಿತರಕರ ಸಂಘದ ಬಸವರಾಜ ಓಶಿಮಠ ಮಾತನಾಡಿ, ಜಿಲ್ಲೆಗೆ ಬರಗಾಲ ಬಂದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳಿಲ್ಲ. ಜನರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಜಿಲ್ಲೆಯ ಮಾಜಿ ಸಚಿವರೊಬ್ಬರು ಕಾಶ್ಮೀರಕ್ಕೆ ಮೋಜು ಮಾಡಲು ತೆರಳಿದ್ದಾರೆ. ಅವರು ತುಂಬುವ ಇನ್‌ಕಮ್ ಟ್ಯಾಕ್ಸ್ ದುಡ್ಡಿನಲ್ಲಿ ಎರಡು ಆಸ್ಪತ್ರೆ ಕಟ್ಟಬಹುದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು
ಮುಂದೆಯೂ ಹೋರಾಟಕ್ಕೆ ಬದ್ಧ ಎಂದರು. ಡಾ.ವೆಂಕಟೇಶ ನಾಯ್ಕ, ಸುನೀಲ ಸೋನಿ, ಪ್ರೀತಮ್ ಮಾಸೂರಕರ್, ಎಸ್. ಫಕೀರಪ್ಪ, ಉಮೇಶ ಹರಿಕಾಂತ, ಶಿವರಾಜ ಮೇಸ್ತ, ಪರಮಾನಂದ ಹೆಗಡೆ, ಸುಬ್ರಾಯ ಹೆಗಡೆ ಇತರರು ಮಾತನಾಡಿದರು.
ಬಾಕ್ಸ್—-
ನಮ್ಮ ಪಾದಯಾತ್ರೆ ತಡೆಯಲು, ಕೆಲವರು ಷಡ್ಯಂತ್ರವನ್ನು ಮಾಡಿದ್ದಾರೆ, ಪಾದಯಾತ್ರೆಗೆ ಹೋಗಬೇಡಿ ಎಂದು ಜನರನ್ನು ಪಡೆದಿದ್ದಾರೆ, ತಾಯಿ ಮಾರಿಕಾಂಬೆಯ ಆಶೀರ್ವದದಿಂದ ಎಲ್ಲಾ ಷಡ್ಯಂತ್ರವನ್ನು ಹಿಮ್ಮೆಟ್ಟಿಸಿ 140 ಕಿಲೋ‌ಮೀಟರ್ ದೂರ ಪಾದಯಾತ್ರೆ ಮಾಡಿ ಇಲ್ಲಿಗೆ ಬಂದು ನಿಂತಿದ್ದೇವೆ. ಇನ್ನಮೇಲೆ ಯಾರಿಗೆ ಯಾವುದೇ ಕಾರಣಕ್ಕೂ ಹೆದರುವ ಮಾತಿಲ್ಲ, ಇಲ್ಲಿಯವರೆಗೆ ಒಂದು ಲೆಕ್ಕ , ಇನ್ನೂ ಮೇಲೆ ಇನ್ನೊಂದು ಲೆಕ್ಕ ಎಂದು ಗುಡುಗಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!