ಕಾರವಾರ:- ಆಕಸ್ಮಿಕ ಬೆಂಕಿ ತಗಲಿ ಅಂಗಡಿಮಳಿಗೆಯೊಂದು ಬೆಂಕಿ ಹೊತ್ತಿ ಉರಿದು ಲಕ್ಷಾಂತರ ರುಪಾಯಿ ನಷ್ಟವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ಇಂದು ರಾತ್ರಿ ನಡೆದಿದೆ.
ಅಂಕೋಲ ಪಟ್ಟಣದ ರೋಯ್ ಪ್ಯಾಷನ್ ಬಟ್ಟೆ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು ಬೆಂಕಿ ಕೆನ್ನಾಲಿಗೆಗೆ ಬಟ್ಟೆ ಅಂಗಡಿ ಜೊತೆ ಪಕ್ಕದಲ್ಲಿದ್ದ ಮಳಿಗೆ ಹಾಗೂ ಮನೆಗಳಿಗೂ ಬೆಂಕಿ ಆವರಿಸಿ ಹಾನಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.