ಕಾರವಾರ:- ಜೇನು ಕಡಿದು ಅಬಕಾರಿ ನಿರೀಕ್ಷಕ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ
ಅಜ್ಜಿಕಟ್ಟದ ನಿಲಂಪುರದಲ್ಲಿ ನಡೆದಿದೆ.
ಹಸನ್ ಖಾನ್ ಕರೀಂ ಖಾನ್ ಜೇನು ಕಡಿದು ಮೃತನಾದ ಅಬಕಾರಿ ಸಿಬ್ಬಂದಿಯಾಗಿದ್ದಾನೆ.
ನಿನ್ನೆದಿನ ಅಂಕೋಲದ ಅಜ್ಜಿಕಟ್ಟದ ನಿಲಂಪುರದಲ್ಲಿ ಕರ್ತವ್ಯಕ್ಕೆ ತೆರಳುತಿದ್ದಾಗ ಜೇನು ದಾಳಿ ನಡೆಸಿದ್ದು ಗಂಭೀರ ಗಾಯಗೊಂಡ ಹಸನ್ ಖಾನ್ ಕರೀಂ ಖಾನ್ ರನ್ನು ಕಾರವಾರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಮೃತಪಟ್ಟಿದ್ದಾರೆ.