BREAKING NEWS
Search

ಅಂಕೊಲ -ಟೋಲ್ ಗೇಟ್ ನಲ್ಲಿ ಹಣ ಕಟ್ಟಲು ಪೊಲೀಸರ ತಕರಾರು-ಸಿಬ್ಬಂದಿ ಮೇಲೆ ಹಲ್ಲೆ

1888

ಕಾರವಾರ:- ಹಣಕಟ್ಟಲು ತಕರಾರು ತೆಗದು ಟೋಲ್ ಸಿಬ್ಬಂದಿಗೆ ಬೆಂಗಳೂರಿನ ಪೊಲೀಸರು ಹಲ್ಲೆ ನಡೆಸಿದ ಘಟನೆ ಇಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ ನಲ್ಲಿ ನಡೆದಿದೆ.

ಬೆಂಗಳೂರಿನಿಂದ ಗೋವಾಕ್ಕೆ ಕುಟುಂಬದೊಂದಿಗೆ ಆಗಮಿಸಿದ್ದ ಬೆಂಗಳೂರು ಪೊಲೀಸರ ಕುಟುಂಬ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ ನಲ್ಲಿ ಹಣ ಕಟ್ಟದೇ ತಕರಾರು ತೆಗೆದಿದ್ದರು. ಇದಲ್ಲದೇ ಖಾಸಗಿ ವಾಹನಕ್ಕೆ ಪೊಲೀಸ್ ಎಂದು ಸ್ಟಿಕರ್ ಸಹ ಹಾಕಿದ್ದರು. ಖಾಸಗಿ ವಾಹನವಾದ್ದರಿಂದ ಟೋಲ್ ಸಿಬ್ಬಂದಿ ತಡೆದಿದ್ದು ಟೋಲ್ ಕಟ್ಟುವಂತೆ ಕೇಳಿದ್ದಾರೆ.ಆದರೇ ಇದಕ್ಕೆ ತಕರಾರು ತೆಗೆದು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಹಲ್ಲೆ ಸಂಬಂಧ ಟೋಲ್ ಸಿಬ್ಬಂದಿ ಅಂಕೋಲ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಅಂಕೋಲ ಪೊಲೀಸರ ಮಧ್ಯಸ್ತಿಕೆಯಿಂದ ಪ್ರಕರಣ ಸುಖಾಂತ್ಯ ಕಂಡಿದ್ದು ದೂರು ದಾಖಲಾಗಲಿಲ್ಲ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!