BREAKING NEWS
Search

ನೀವು ಅರಿಯದಿರುವ ಅಡಕೆಯ ಔಷಧೀಯ ಗುಣಗಳೇನು ಗೊತ್ತಾ?

1354

ಡಕೆ ಒಂದು ವಾಣಿಜ್ಯ ಬೆಳೆಯಾಗಿ ಜಗತ್ತಿನಲ್ಲಿ ಹೆಸರು ಮಾಡುವ ಜೊತೆಗೆ ಸಾಕಷ್ಟು ವಿವಾದಗಳನ್ನು ಸಹ ತನ್ನಮೇಲೆ ಹೇರಿಕೊಂಡಿದೆ.ಆದರೇ ಅಡಕೆ ಔಷಧೀಯ ಗುಣಗಳನ್ನು ಹೊಂದಿದೆ ಎಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ. ಈ ಲೇಖನದ ಉದ್ದೇಶ ನಮ್ಮ ರಾಜ್ಯದಲ್ಲಿ ಬೆಳೆಯುವ ಹಾಗೂ ಬೆಳಸುವ ಸಸ್ಯ ಸಂಪತ್ತುಗಳ ಔಷಧೀಯ ಗುಣಗಳ ಬಗ್ಗೆ ತಿಳಿಸುವುದಾಗಿದೆ. ತಮಗೆ ಇಷ್ಟವಾದಲ್ಲಿ ಅಥವಾ ನಿಮಗೆ ತಿಳಿದ ಸಸ್ಯಗಳ ಬಗ್ಗೆ ಮಾಹಿತಿಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು.

ಹಾಗೆಯೇ ಈ ಲಿಂಕ್ ಅನ್ನು ಶೇರ್ ಮಾಡುವ ಮೂಲಕ ಪ್ರೋತ್ಸಾಹ ನೀಡುತ್ತೀರ ಎಂದು ಭಾವಿಸಿ ಲೇಖನದ ಮೊದಲ ಆವೃತ್ತಿಯನ್ನು ಪ್ರಾರಂಭಿಸುತಿದ್ದೇವೆ.
ಕನ್ನಡದಲ್ಲಿ ಅಡಕೆ ಮರ,ಅಡಿಕೆ,ಕಂಗು,ಕವುಂಗು,ಒಕ್ಕಣ್ಣ ಮರ ಎಂದು ಕರೆಯಲ್ಪಡುವ ಈ ಮರವು ಸಸ್ಯ ಶಾಸ್ತ್ರದಲ್ಲಿ Areca catechu L. ಎಂದು ಕರೆಯಲ್ಪಡುತ್ತದೆ.Arecaceae ಎಂಬ ಕುಟುಂಬಕ್ಕೆ ಸೇರಿದ್ದು ಭಾರತದ ಪಶ್ಚಿಮ ಕರಾವಳಿ,ಪಶ್ವಿಮ,ದಕ್ಷಿಣ ಒಳನಾಡು,ಅಸ್ಸಾಂ ಕಣಿವೆಗಳು,ಬಂಗಾಳ ಹಾಗೂ ಆಗ್ನೇಯ ದ್ವೀಪಗಳು ಅಡಕೆಯ ಮೂಲ ಪ್ರದೇಶಗಳಾಗಿವೆ.

ಉಪಯೋಗ: ಬೇರು,ಎಲೆ,ಹೂ,ಹಾಳೆ,ಹೊಂಬಾಳೆ,ಅಡಕೆ ಸಿಪ್ಪೆ,ಕಾಯಿ,ಚಿಗುರು ಪ್ರತ್ತೇಕವಾಗಿ ಔಷಧೀಯ ಬಳಕೆಗೆ ಉಪಯೋಗವಾಗುತ್ತದೆ.

ನೂರು ಅಡಿಗೂ ಹೆಚ್ಚು ಎತ್ತರ ಬೆಳೆಯುವ ಧಾರ್ಮಿಕ ,ಸಾಂಸ್ಕೃತಿಕವಾಗಿ ಬೆರತಿರುವ ಈ ಮರ ಇದರ ಯಾವುದೇ ಭಾಗ ಹೆಚ್ಚು ಸಂಸ್ಕರಣೆಗೊಳ್ಳದೇ ಉಪಯುಕ್ತವಾಗಿರುವುದು ಇದರ ವಿಶೇಷ.
ಜಠರ,ಕರುಳು ರೋಗಗಳು,ಚರ್ಮರೋಗ,ಕೆಮ್ಮು,ತಲೆಸಿಡಿತ-ಭಾರ,ಕೆಂಪು,ಕ್ರಿಮಿ ಸಂಕುಲ ನಾಶವಾಗಿ,ಕ್ರೋಥ,ವ್ರಣಗಳಿಗೆ,ಯಕೃತ್ ಪ್ಲೀಹಗಳಲ್ಲಿ ತುಟಿ, ಬಾಯಿ ಹುಣ್ಣುಗಳಿಗೆ,ಪ್ರಮೇಹ ,ಜನನೇಂದ್ರಿಯ ರೋಗಗಳಲ್ಲಿ ಔಷಧವೆನಿಸಿದೆ.
ಅಡಕೆ ಮಿತ ಸೇವನೆ ಮನಸ್ಸನ್ನು ವಿಕಾಸಗೊಳಿಸುತ್ತದೆ. ಖಿನ್ನತೆಯನ್ನು ದೂರ ಮಾಡಿ ಪ್ರಸನ್ನತೆಯನ್ನುಂಟುಮಾಡುತ್ತದೆ.
ಬಾಯಿ ಸ್ವಚ್ಛಗೊಳಿಸುವುದರ ಜೊತೆ ಜೀರ್ಣ ಹೆಚ್ಚಿಸಿ ಶರೀರ ಮಲ ನಿವಾರಿಸುವುದು.
ಪಿತ್ತ,ಕಫ ನಿವಾರಿಸಿ ನಿದ್ರೆ ಬರಿಸುವುದು.
ಸೇವನೆ ಹೆಚ್ಚಾದಲ್ಲಿ ಮಾಂಸಪೇಶಿ,ಸಂದುಬಂಧಗಳನ್ನು ಸಡಿಲಗೊಳಿಸುವುದು.ಬೆವರಿಸುವುದು,ಮೂತ್ರ ಕಡಿಮೆಯಾಗಿಸುವುದು,ಶ್ವಾಸ ಹಿಡಿತ ಉಂಟುಮಾಡುವುದು. ಇನ್ನೂ ಹೆಚ್ಚಾದರೆ ಓಜಕ್ಷಯ,ಹೃದಯ ಸಂಕೋಚ,ಧಾತುನಾಶ,ಶರೀರ ಶೈಥಿಲ್ಯ,ಭ್ರಮೆಗಳನ್ನುಂಟುಮಾಡುವುದು.ಹಣ್ಣು ಅಡಕೆ ತಿಂದೊಡನೆ ತಲೆ ತಿರುಕ,ರಕ್ತದೊತ್ತಡ ಇಳಿತ,ವಾಂತಿ ಭೇದಿಯನ್ನು ಉಂಟುಮಾಡುವ ಗುಣ (ಸೊಕ್ಕು ಬರಿಸುವ)ಗುಣ ಹೆಚ್ಚಿದೆ. ಗರ್ಭಿಣಿಯರಿಗೆ ಸೇವನೆ ನಿಷೇಧ.

ವಸಡು ರಕ್ತಸ್ರಾವಕ್ಕೆ ರಾಮಬಾಣ:-
ಒಣ ಅಡಕೆ ಸುಟ್ಟು ಕರಿ ಮಾಡಿ (ಬೇಯಿಸಿರುವುದನ್ನು) ಇದರ ಪುಡಿ ಕೊಂಚ ಉಪ್ಪಿನ ಪುಡಿ ಬೆರೆಸಿ ಹಲ್ಲುಜ್ಜುವುದು ಹಾಗೂ ಎರಡು ವಾರ ಅಡಕೆ ಜಜ್ಜಿ ಹಾಕಿ ಕುದಿಸಿದ ಕಷಾಯದಲ್ಲಿ ಬಾಯಿ ಮುಕ್ಕಳಿಸುವುದರಿಂದ ವಸಡಿನ ರಕ್ತಸ್ರಾವ ಉಪಶಮನವಾಗುತ್ತದೆ.

ವಿಷಸರ್ಪಕ್ಕೆ:- ಕರಿ ಗೋಟು( ಎಳೆ-ಒಣ ಅಡಿಕೆ)ನ್ನು ಅಕ್ಕಿ ತೊಳೆದ ನೀರಿನಲ್ಲಿ ಅರೆದು ಮೈಗೆ ಅರ್ಧಘಂಟೆಗೊಮ್ಮೆ ಮೂರುಬಾರಿ ಲೇಪಿಸಿ ತೊಳೆಯುವುದು.ಮೂರು ದಿನ ಕಡ್ಡಾಯವಾಗಿ ಮಾಡಬೇಕು. ಇದೇ ಮಾದರಿಯನ್ನು ಉಪಯೋಗಿಸಿದಲ್ಲಿ ಚರ್ಮಕ್ಕೆ ಸಂಬಂಧಿಸಿದ ಇತರೆ ತೊಂದರೆಗಳಿಗೂ ಸಹಾಯವಾಗಲಿದೆ.

ಅಡೆಯಿಂದ ಆಗುವ ಸೊಕ್ಕು ನಿವಾರಣೆಗೆ :-

ಇನ್ನು ಅಡಕೆಯಿಂದ ಆಗುವ ಸೊಕ್ಕು ನಿವಾರಣೆಗೆ ತಣ್ಣಗಿನ ನೀರು,ಉಪ್ಪು ಸೇವನೆ ,ಸಕ್ಕರೆಹುಡಿ ಜೊತೆ ಕಾಯಿಯ ಹೋಳು ಜಗೆಯುವುದರಿಂದ ಉಪಶಮನವಾಗಲಿದೆ.

ಅಡಕೆಯ ಮರದ ಇತರೆ ಉಪಯೋಗ:-

ಅಡಕೆ ಸಿಪ್ಪೆ ಚನ್ನಾಗಿ ಒಣಗೊಸಿದ ನಂತರ ಅವುಗಳ ಸಿಪ್ಪೆಯನ್ನು ಗೋವುಗಳಿರುವ ಪ್ರದೇಶದಲ್ಲಿ ಹೊಗೆ ಹಾಕುವುದರಿಂದ ನುರ್ಜು ಹುಳು (ಚಿಕ್ಕ ಜಾತಿಯ ನೊಣ ರೂಪದ್ದು) ನಿವಾರಣೆಯಾಗುತ್ತದೆ.

ಬೇಯಿಸಿದ ಅಡಕೆ ಚೊಗರಿನಿಂದ ಬಿದುರಿನ ಕೃಷಿ ಪರಿಕರಗಳಾದ ಹೆಡಿಗೆ ಮುಂತಾದ ವಸ್ತುಗಳನ್ನು ಅದ್ದಿ ಬಿಸಿಲಿನಲ್ಲಿ ಒಣಗಿಸಿದಲ್ಲಿ ದೀರ್ಘಕಾಲ ಬಾಳಿಕೆ ಬರಲಿದೆ.

ಅಡಕೆ ಚೊಗರು ಬಣ್ಣ ಬಳಕೆಗೂ ಉಪಯೋಗವಾಗುತ್ತದೆ.

ಅಡಕೆಯ ಸಿಪ್ಪೆಯನ್ನು ಸೊಳ್ಳೆ ಶಮನಕ್ಕೂ ಬಳಸಲಾಗುತ್ತದೆ.

ಇತ್ತೀಚೆಗೆ ರೋಗ ನಿರೋಧಕ ಶಕ್ತಿ ವರ್ಧಕವಾಗಿ ಹಾಗೂ ಸಿಹಿ ಪದಾರ್ಥಗಳಲ್ಲಿ ,ಪೇಯಗಳಲ್ಲಿ ಬಳಕೆ ಮಾಡಲಾಗುತ್ತಿದೆ.

ಇಷ್ಟೆಲ್ಲಾ ಲಾಭವಿರುವ ಅಡಕೆ ತಂಪಾಕಿನೊಂದೊಗೆ ಮತ್ತು ಬರಿಸುವ ಗುಟ್ಕವಾಗಿ ಬಿಕರಿಯಾಗುತಿದ್ದು ನಿಷೇಧದ ಕೊನೆಯ ಅಂಚಿಗೆ ಬಂದು ನಿಂತಿದೆ.

ಈವರೆಗೂ ಅಡಕೆಯಿಂದ ಹಾನಿಕಾರಕ ವಸ್ತುಗಳು ಪತ್ತೆಯಾಗಿಲ್ಲ ಆದರೇ ಇವುಗಳನ್ನು ವೈಜ್ಞಾನಿಕ ವಿಧಾನ ಬಳಸಿ ಗುಟ್ಟ ದಂತಹ ಅಮಲು ಪದಾರ್ಥ ತಯಾರಿಸಿ ಔಷಧಿ ಗುಣವಿರುವ ಬಂಗಾರದ ಬೆಲೆಯ ಅಡಕೆಗೆ ಮಸಿ ಬಳಿಯಲಾಗಿದೆ.

ಅಡಕೆ ವೀಳ್ಯದೆಲೆಯೊಂದಿಗೆ ಪ್ರತಿನಿತ್ಯ ಮಿತ ಸೇವನೆ ಆರೋಗ್ಯಕ್ಕೆ ಉಪಯುಕ್ತವಾಗಿದೆ.

ನಿಮ್ಮ ಅಭಿಪ್ರಾಯ ಸಲಹೆಗಳಿಗೆ ,ತರ್ಕಕ್ಕೆ ಸ್ವಾಗತ,
ವಾಟ್ಸ್ ಅಪ್ :- 9741058799
Email :[email protected]




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!