BREAKING NEWS
Search

ಶಿರಸಿ-ಗಾಂಜಾ ಮಾರಾಟ ಇಬ್ಬರ ಬಂಧನ.

3469

ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ೩೦೦ ಗ್ರಾಂ ತೂಕದ ಗಾಂಜಾ ವನ್ನು ಪೊಲಿಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಶಿರಸಿ ನಗರದ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಹಿಂಭಾಗದ ಕಾಲಿ ಜಾಗದಲ್ಲಿ ಗಾಂಜಾ ವನ್ನು ಅಕ್ರಮವಾಗಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ , ಶಿರಸಿ ಅರೆಕೊಪ್ಪದ ಖಾಲೀದ್ ಶರೀಫ್ ಸಾಬ ಕನವಳ್ಳಿ ,ಹಾಗೂ ಕಸ್ತೂರಬಾ ನಗರದ ಸರ್ಪರಾಜ್ ಸಮೀರ್ ಖಾನ್ ಎಂಬ ಇಬ್ಬರು
ಆರೋಪಿಗಳನ್ನು ವಶಕ್ಕೆ ಪಡೆದು ಆರೋಪಿತರಿಂದ ಅಂದಾಜು 12,500₹ ಮೌಲ್ಯದ 313 ಗ್ರಾಂ ತೂಕದ ಗಾಂಜಾ,ಹಾಗೂ ಕೃತ್ಯಕ್ಕೆ ಬಳಸಲಾದ ಒಂದು ಬೈಕ್, 2 ಮೊಬೈಲ್ ಫೊನ್ ಗಳು ಮತ್ತು 650₹- ನಗದು ಹಣವನ್ನು ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಜಪ್ತಿಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಡಿಎಸ್ಪಿ ರವಿ ನಾಯ್ಕ, ವೃತ್ತ ನೀರೀಕ್ಷಕ ಬಿ.ಯು ಪ್ರದೀಪ್, ರವರ ಮಾರ್ಗದರ್ಶನದಲ್ಲಿ ಶಿರಸಿ ಹೊಸ ಮಾರುಕಟ್ಟೆ ಠಾಣೆ ಪಿ.ಎಸ್.ಐ ನಾಗಪ್ಪ ನೇತೃತ್ವದ ಸಿಬ್ಬಂದಿಗಳಾದ ಮಹ್ಮದ್ ಇಸ್ಮಾಯಿಲ್ ಕೊಣನಕೇರಿ,ರಾಮಯ್ಯ ಪೂಜಾರಿ,ಹನುಮಂತ ಮಾಕಾಪುರ ,ಮೋಹನ ನಾಯ್ಕರವರನ್ನು ಒಳಗೊಂಡ ತಂಡ ಕಾರ್ಯಾಚರಣೆ ಕೈಗೊಂಡು ಆರೊಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸ್ ಅಧೀಕ್ಷಕ ಶಿವಪ್ರಕಾಶ ದೇವರಾಜುರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ತಂಡಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿ, ಬಹುಮಾನ ಘೋಷಿಸಿದ್ದಾರೆ.

https://kannadavani.news/whatsapp-new-technology-future-technology-information-news-kannadavani-karnataka/ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!