BREAKING NEWS
Search
ಮೇಷ: ಮಾನಸಿಕ ನೆಮ್ಮದಿ, ಅಧಿಕ ಕರ್ಚು, ವಿದ್ಯಾಭ್ಯಾಸದಲ್ಲಿ ಪ್ರಗತಿ,ಕಾರ್ಯ

Astrology|ದಿನಭವಿಷ್ಯ-24-12-2023

61

ಪಂಚಾಂಗ(panchanga)
ಶ್ರೀ ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ಹಿಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ,
ವಾರ : ಭಾನುವಾರ, ತಿಥಿ : ತ್ರಯೋದಶಿ
ನಕ್ಷತ್ರ : ಕೃತಿಕ
ರಾಹುಕಾಲ : 4.40 ರಿಂದ 6.05
ಗುಳಿಕಕಾಲ : 3.14 ರಿಂದ 4.40
ಯಮಗಂಡಕಾಲ : 12.23 ರಿಂದ 1.48

ರಾಶಿಫಲ( Rashipala)

ಮೇಷ: ಆರೋಗ್ಯ ಮಧ್ಯಮ,ವಾದ ವಿವಾದಗಳಿಂದ ತೊಂದರೆ, ಧನಲಾಭ, ಕುಟುಂಬದಲ್ಲಿ ಪ್ರೀತಿ, ಸುಖ ಭೋಜನ,ಬಗ್ಗೆ ವಿಶೇಷ ಕಾಳಜಿ ವಹಿಸುವುದು ಸೂಕ್ತ. ಆರ್ಥಿಕವಾಗಿ ಪ್ರಗತಿ ಇರಲಿದೆ, ವ್ಯಾಪಾರ-ವ್ಯವಹಾರಗಳಲ್ಲಿ ಲಾಭ ಸಿಗಲಿದೆ. ಉದ್ಯೋಗಿಗಳಿಗೆ ಮಿಶ್ರ ಫಲ. ಕೌಟುಂಬಿಕವಾಗಿ ಶುಭ ಫಲ,ಅದೃಷ್ಟ ಸಂಖ್ಯೆ: 8

ವೃಷಭ: ಯತ್ನ ಕಾರ್ಯ ವಿಳಂಬ, ಪಿತ್ರಾರ್ಜಿತ ಆಸ್ತಿ ಗಳಿಕೆ, ಮಿತ್ರರ ಸಹಾಯ, ಅಧಿಕ ತಿರುಗಾಟ,ಅಪರಿಚಿತರೊಂದಿಗೆ ಅನಿವಾರ್ಯ ಕಾರಣಗಳಿಂದ ವಾದಕ್ಕೆ ಇಳಿಯುವಂತೆ ಆಗಬಹುದು, ಮಾತು ಮಿತವಾಗಿರಲಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

ಇದನ್ನೂ ಓದಿ:- Loksabha| ನಮ್ಮ ದೇಶವನ್ನಾಳಿದ ಪ್ರಧಾನಿಗಳೆಷ್ಟು ಗೊತ್ತಾ? ಚುನಾವಣೆ ಹೊಸ್ತಿಲಲ್ಲಿ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.

ಮಿಥುನ: ವೈವಾಹಿಕ ಜೀವನಕ್ಕೆ ಹಿರಿಯರಿಂದ ಮಾರ್ಗದರ್ಶನ ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ,ಮಾತೃವಿನಿಂದ ಶುಭ ಹಾರೈಕೆ, ಧನಸಹಾಯ, ಶತ್ರು ನಾಶ, ವಾಹನ ಚಾಲಕರಿಗೆ ತೊಂದರೆ,ಅದೃಷ್ಟ ಸಂಖ್ಯೆ: 6

ಕಟಕ: ಆರೋಗ್ಯ ಮಧ್ಯಮ, ಮಾತುಗಳಿಂದ ಕಲಹ ಸಾಧ್ಯತೆ, ಸರ್ಕಾರಿ ಅಧಿಕಾರಿಗಳಿಗೆ ತೊಂದರೆ, ದಂಡ ಕಟ್ಟುವಿರಿ.ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ ಇದೆ. ತಾಳ್ಮೆಯಿಂದ ಸಹಕರಿಸಿ. ಕೌಟುಂಬಿಕವಾಗಿ ಶುಭ ಫಲ.ಅದೃಷ್ಟ ಸಂಖ್ಯೆ: 9

ಸಿಂಹ:ಆರೋಗ್ಯ ಉತ್ತಮ, ಮಾನಸಿಕ ಒತ್ತಡ, ಪಾಲುದಾರಿಕೆ ಮಾತುಕತೆ, ವಯುಕ್ತಿಕ ವಿಷಯಗಳಲ್ಲಿ ಗೊಂದಲ, ವಿದ್ಯಾರ್ಥಿಗಳಿಗೆ ಆತಂಕ,ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ.ಅದೃಷ್ಟ ಸಂಖ್ಯೆ: 8

ಕನ್ಯಾ: ಕಾರ್ಯ ದಲ್ಲಿ ಅಡೆತಡೆ,ಅನ್ಯ ಜನರಲ್ಲಿ ವೈಮನಸ್ಸು, ವ್ಯರ್ಥ ಧನಹಾನಿ, ವಾಹನ ರಿಪೇರಿ, ಸೌಜನ್ಯದಿಂದ ವರ್ತಿಸಿ, ಮಕ್ಕಳಿಂದ ಸಹಾಯ, ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 6

ತುಲಾ: ಶರೀರದಲ್ಲಿ ಆತಂಕ, ತಿರುಗಾಟ, ಸ್ತ್ರೀಸೌಖ್ಯ, ಕುತಂತ್ರದಿಂದ ಹಣ ಸಂಪಾದನೆ, ಕುಟುಂಬದ ಸದಸ್ಯರ ಮಾರ್ಗದರ್ಶನ ಪಡೆಯುವುದು ಒಳ್ಳೆಯದು. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಸ್ವಲ್ಪ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಸಂಗಾತಿಯ ಮಧುರ ಪ್ರೀತಿ ಸಿಗಲಿದೆ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

ವೃಶ್ಚಿಕ: ಹಿತಶತ್ರುಗಳಿಂದ ತೊಂದರೆ, ವ್ಯಾಪಾರದಲ್ಲಿ ಮಂದಗತಿ, ವಿವಾಹ ಯೋಗ, ಮನಶಾಂತಿ, ಪುಣ್ಯಕ್ಷೇತ್ರ ದರ್ಶನ, ಉತ್ತಮ ಪ್ರಗತಿ,ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.ಅದೃಷ್ಟ ಸಂಖ್ಯೆ: 1

ಧನಸ್ಸು: ಕಾರ್ಯ ಯಶಸ್ಸು, ಅನಾವಶ್ಯಕ ದುಂದುವೆಚ್ಚ, ಹೊಸ ವ್ಯವಹಾರದಿಂದ ಲಾಭ, ಅತಿಯಾದ ಕೋಪ,ಪ್ರೀತಿ ಪಾತ್ರರೊಂದಿಗೆ ಆತುರದ ಮಾತುಗಳು ನೋವು ತರಲಿದೆ,ಯೋಚಿಸಿ ಮಾತನಾಡಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7

ಮಕರ: ಮಾತಾಪಿತರಲ್ಲಿ ಪ್ರೀತಿ, ಕುಟುಂಬದಲ್ಲಿ ನೆಮ್ಮದಿ, ಅಪರಿಚಿತರ ವಿಷಯದಲ್ಲಿ ಜಾಗ್ರತೆ, ಮನಶಾಂತಿ,ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.ಅದೃಷ್ಟ ಸಂಖ್ಯೆ: 7

ಕುಂಭ:ಆರೋಗ್ಯ ಮಧ್ಯಮ, ಮಿತ್ರರ ಬೆಂಬಲ, ಕೈಗಾರಿಕಾ ಉದ್ಯಮಿಗಳಿಗೆ ಲಾಭ, ಉದ್ಯೋಗಿಗಳಿಗೆ ಒತ್ತಡ ಹೆಚ್ಚಾಗಲಿದೆ. ಕುಟುಂಬದ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ,ಅದೃಷ್ಟ ಸಂಖ್ಯೆ: 5

ಮೀನ: ವಿವೇಚನೆ ಕಳೆದುಕೊಳ್ಳಬೇಡಿ, ಅನಾರೋಗ್ಯ,ಉದ್ಯೋಗಿಗಳಿಗೆ ಶುಭ ಫಲ. ಕೃಷಿಕರಿಗೆ ಲಾಭ ಇಳಿಕೆ,ವಕೀಲ ವೃತ್ತಿಯವರಿಗೆ ನೆಮ್ಮದಿ,ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!