ಮಂಗಳೂರು ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಪೋಟ:ಆತಂಕ ಸೃಷ್ಟಿಸಿದ ಕುಕ್ಕರ್!

22

ಮಂಗಳೂರು: ನಗರದ ಆಟೋದಲ್ಲಿ ಕುಕ್ಕರ್ ಸ್ಫೋಟ(Cooker Blast) ಪ್ರಕರಣ ತನಿಖೆಯ ಚುರುಕುಗೊಂಡಿದ್ದು ಪರಿಶೀಲನೆ ವೇಳೆ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿದ್ದು ಹೈ ಅಲರ್ಟ್‌ ಘೋಷಣೆಯಾಗಿದೆ.

ನಟ್, ಬೋಲ್ಟ್‌, ಬ್ಯಾಟರಿ, ಸರ್ಕಿಟ್ ರೀತಿಯ ವೈರಿಂಗ್ ಇರುವ ವಸ್ತುಗಳು ಪತ್ತೆಯಾಗಿದೆ. ಲಘು ತೀವ್ರತೆ ಇರುವ ಸ್ಪೋಟಕ ಬಳಸಿರುವ ಶಂಕೆ ವ್ಯಕ್ತವಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯ(FSL), ಬಾಂಬ್ ನಿಷ್ಕ್ರೀಯ ದಳದಿಂದ(Bomb Disposal Squad) ತೀವ್ರ ಪರಿಶೀಲನೆ ನಡೆಯುತ್ತಿದೆ.

ಮಂಗಳೂರಿನ ಪಂಪ್‌ವೆಲ್ ನಿಂದ ನಾಗುರಿ‌ ಕಡೆ ಚಲಿಸುತ್ತಿದ್ದ ಆಟೋ ಒಂದರ ಒಳಗಿಂದ ಇದ್ದಕ್ಕಿದ್ದ ಹಾಗೇ ನಿಗೂಢ ಸ್ಟೋಟವಾಗಿದೆ.ದಾರಿ‌ ಮಧ್ಯೆ ಸವಾರನೋರ್ವ ಕೈಯಲ್ಲಿ ಕುಕ್ಕರ್ ನ್ನು ಹಿಡಿದುಕೊಂಡು ಆಟೋ ಹತ್ತಿದ್ದು ನಾಗುರಿಗೆ ಹೋಗಲು ಚಾಲಕನಿಗೆ ಸೂಚಿಸಿದ್ದ.ಆದ್ರೆ ಕೆಲವೇ ಕ್ಷಣಗಳಲ್ಲಿ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆಯ ಎದುರು ಕ್ಷಣಗಳಲ್ಲಿ ಆಟೋದ ಒಳಗೆ ಸ್ಟೋಟಗೊಂಡಿದ್ದು ಸವಾರನ‌ ಕೈಯಲ್ಲಿದ್ದ ಕುಕ್ಕರ್ ಛಿದ್ರಗೊಂಡಿತ್ತು.ಆತ ಆಟೋ ಹತ್ತಿದ ಕೆಲವೇ ಕ್ಷಣಗಳಲ್ಲಿ ಸ್ಟೋಟ ಸಂಭವಿಸಿದ್ದು ಜೊತೆಗೆ ಆತನ‌ ಕೈಯಲ್ಲಿದ್ದ ಕುಕ್ಕರ್ ಛಿದ್ರಗೊಂಡಿದ್ದು ಅನುಮಾನಕ್ಕೆ ಕಾರಣವಾಗಿದೆ.

ಸ್ಟೋಟ ಸಂಭವಿದ ಸಂದರ್ಭ ದೊಡ್ಡ ಬಾಂಬ್ ಸ್ಪೋಟದಂತೆ ಶಬ್ದವಾಗಿದ್ದು ದೊಡ್ಡ ಮಟ್ಟದ ಹೊಗೆ ಆವರಿಸಿತ್ತು.ಸ್ಥಳಕ್ಕೆ ವಿಧಿ ವಿಜ್ಞಾನ ಇಲಾಖೆಯ ತಜ್ಞರು ,ಪೊಲೀಸ್ ಕಮೀಷನರ್ ಭೇಟಿ ನೀಡಿ‌ ಪರಿಶೀಲನೆ‌ ನಡೆಸಿದ್ದಾರೆ.ಘಟನೆಯ ಬಗ್ಗೆ ಪ್ರತಿಕ್ರಿಯೆ‌ ನೀಡಿದ ಪೊಲೀಸ್ ಕಮೀಷನರ್ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ,ಆಟೋ ಚಾಲಕ ಬೆಂಕಿ‌ಕಾಣಿಸಿಕೊಂಡು ಬ್ಲಾಸ್ಟ್ ಆಗಿದೆ ಎಂದಿದ್ದಾನೆ.ಬ್ಲಾಸ್ಟ್ ಬಗ್ಗೆ ಪ್ರತ್ಯಕ್ಷ ಸಾಕ್ಷಿಗಳು ಏನೂ ಹೇಳಿಲ್ಲ.ಸಮಗ್ರ ವಿಚಾರಣೆ ನಡೆಸಲಾಗುತ್ತದೆ ಎಂದಿದ್ದಾರೆ.

ಹಾಡುಹಗಲಲ್ಲೇ ಈ ರೀತಿ ನಿಗೂಢ ಸ್ಪೋಟ ನಡೆದಿರೋದು ಮಂಗಳೂರಿಗರಲ್ಲಿ ಆತಂಕ ಸೃಷ್ಟಿಸಿದೆ.ಇದೀಗ ಗಾಯಗೊಂಡ ಚಾಲಕ ಹಾಗೂ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಅವರು ಚೇತರಿಸಿಕೊಂಡ ಬಳಿಕವೇ ತನಿಖೆ ನಡೆದು ಸ್ಪೋಟದ ಸತ್ಯಾಂಶ ಹೊರಬರಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!