ಯಲ್ಲಾಪುರ:- ಬೊಲೆರೊ ವಾಹನಕ್ಕೆ ಎರಡು ವಾಹನಗಳು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಅರೆಬೈಲು ಗಟ್ಟದಲ್ಲಿ ಮಂಗಳವಾರ ಮಧ್ಯಾನ ಸಂಭವಿಸಿದೆ.
ರಾಜೇಶ್ವರಿ (35), ಚಿಕ್ಕಮ್ಮ ಪಾಟೇಲ್ (28) ಮೃತ ದುರ್ದೈವಿಗಳೆಂದು ಗುರುತಿಸಲಾಗಿದೆ.

ತಿಮ್ಮನ ಗೌಡ, ಹನುಮಂತ, ಲಕ್ಷ್ಮೀ, ಶೃತಿ , ಆಕಾಶ, ಅಪೇಕ್ಷ ಗಾಯಗೊಂಡಿದ್ದಾರೆ.
ಎಲ್ಲರೂ ಕೂಡ ಬಾಗಲಕೋಟೆಯ ಲೋಕಾಪುರದವರಾಗಿದ್ದಾರೆ. ಗಾಯಗೊಂಡವರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೊಸ ಬೊಲೆರೋ ವಾಹನ ಖರೀದಿಸಿ ಪೂಜೆಗಾಗಿ ಧರ್ಮಸ್ಥಳಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಘಟನೆ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ :- ಮುರುಗೇಶ್. ಯಲ್ಲಾಪುರ.