ಬೆಂಗಳೂರು:- ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನಿಂದ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ದಿಸಿದ್ದ ಪ್ರದೀಪ್ ನಾಯ್ಕ ಹಾಗೂ ಜಿಲ್ಲೆಯ ಹಲವು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾನುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಮಾಜಿ ಸಚಿವ ಆರ್.ವಿ. ದೇಶಪಾಂಡೆ ,ಮಾಜಿ ಶಾಸಕ ಸತೀಶ್ ಸೈಲ್ ಅವರ ಸಮ್ಮುಖದಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕ್, ಪ್ರಶಾಂತ್ ದೇಶಪಾಂಡೆ ಮತ್ತಿತರರು ಉಪಸ್ಥಿತರಿದ್ದರು.

ಸದ್ಯ ಜಿಲ್ಲೆಯಲ್ಲಿ ಅಳಿದುಳಿದ ಜೆಡಿಎಸ್ ನಾಯಕರು ಎನಿಸಿದವರು ಸಹ ಇದೀಗ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸವಾಲು!
ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕಿ ಶಾರದಾ ಶಟ್ಟಿಯವರು ಮೊದಲಿನಿಂದಲೂ ವಿಧಾನಸಭೆ ಟಿಕೆಟ್ ಅನ್ನು ಪಡೆಯುತಿದ್ದರು .ಆದರೇ ಮುಂಬರುವ ಚುನಾವಣೆಯಲ್ಲಿ ಬಹುತೇಕ ಶಾರದಾ ಶಟ್ಟಿಯವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ಕೈ ತಪ್ಪುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳುತ್ತವೆ.
ಜೆಡಿಎಸ್ ನಲ್ಲಿ ಇದ್ದ ಪ್ರದೀಪ್ ನಾಯ್ಕ ಇದೀಗ ಕಾಂಗ್ರೆಸ್ ಗೆ ಬಂದಿದ್ದು ಸ್ಪರ್ದಾಕಾಂಶಿ ಕೂಡ .ಇನ್ನು ಸ್ಥಳೀಯವಾಗಿ ಶಿವಾನಂದ ಹೆಗಡೆ ಕಡತೋಕ ರವರು ತಮ್ಮ ಹೆಸರನ್ನು ಚನ್ನಾಗಿ ಗಳಿಸಿದ್ದಾರೆ. ಇನ್ನು ಇವರಿಗೆ ಮೂಲ ಬಿಜೆಪಿಗರು ಹಾಗೂ ಪ್ರಭಲ ಜನಾಂಗಗಳ ಬೆಂಬಲ ಸಹ ಇದೆ. ಹೀಗಿರುವಾಗ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಟಿಕೆಟ್ ನೀಡುವುದೇ ದೊಡ್ಡ ಸಮಸ್ಯೆಯಾಗುವ ಸಾಧ್ಯತೆಗಳಿವೆ.
ಸದ್ಯ ಜಿಲ್ಲೆಯಲ್ಲಿ ಪ್ರಭಲ ಎರಡು ಪಕ್ಷಗಳು ಜೆಡಿಎಸ್ ನನ್ನು ಜಿಲ್ಲೆಯಲ್ಲಿ ನುಂಗಿಹಾಕಿದೆ.