BREAKING NEWS
Search

ಪ್ರತಿಪಕ್ಷದಿಂದ ನೋವು-ರಾಜೀನಾಮಗೆ ಮುಂದಾಗಿದ್ದು ನಿಜ- ಸಭಾಪತಿ ಬಸವರಾಜ್ ಹೊರಟ್ಟಿ.

818

ಹುಬ್ಬಳ್ಳಿ: ಪರಿಷತ್‌ನಲ್ಲಿ ನಿನ್ನೆ ಪ್ರತಿಪಕ್ಷಗಳು ನಡೆದುಕೊಂಡ ರೀತಿ ನನಗೆ ನೋವುಂಟು ಮಾಡಿತು. ಹಾಗಾಗಿ, ರಾಜೀನಾಮೆಗೆ ಮುಂದಾದೆ. ಕಡೆಗೆ, ಪ್ರತಿಪಕ್ಷಗಳ ನಾಯಕರು ನನ್ನನ್ನು ಭೇಟಿ ಮಾಡಿ, ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೇಳಿದರು. ಹಾಗಾಗಿ, ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ’ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಘಟನೆ ಕುರಿತು ಶನಿವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಸದನದಲ್ಲಿ ಮೂರು ಗಂಟೆಗೆ ಬೆಲ್ ಆಗಬೇಕಿತ್ತು. ಆದರೆ, ಮೂರೂವರೆಯಾದರೂ ಆಗಲಿಲ್ಲ. ನನಗೂ ಅತ್ತ ಲಕ್ಷ್ಯವಿರಲಿಲ್ಲ. ಮತಾಂತರ ನಿಷೇಧ ಮಸೂದೆಗೆ ಅವಕಾಶ ನೀಡಲು ಸಭಾಪತಿ ಈ ರೀತಿ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷದವರು ಮನಸ್ಸಿಗೆ ಬಂದಂತೆ ಕೂಗಾಡಿದರು’ ಎಂದರು.

ಬಿಜೆಪಿ ಗೆ ಸೇರ್ತಾರ ಹೊರಟ್ಟಿ?

ಜೆಡಿಎಸ್ ನನ್ನು ಬಿಟ್ಟು ಹೊರಟ್ಟಿಯವರು ಬಿಜೆಪಿಗೆ ಸೇರ್ಪಡೆ ಯಾಗುವ ಸಾಧ್ಯತೆ ಇದೆ ಎಂದು ಅವರ ಆಪ್ತಮೂಲಗಳು ಮಾಹಿತಿ ನೀಡಿವೆ.
ಬಿಜೆಪಿ ಬಗ್ಗೆ ಒಲವು ಹೊಮದಿರುವ ಅವರು ಶೀಘ್ರದಲ್ಲಿ ಸೇರ್ಪಡೆಯಾಗುತ್ತಾರೆ, ಇನ್ನೆರೆಡು ತಿಂಗಳಲ್ಲಿ ಈ ಬಗ್ಗೆ ನಿರ್ಧಾರ ಹೊರಬೀಳಲಿದೆ ಎಂದು ಮೂಲಗಳು ಹೇಳುತ್ತವೆ. ಆದರೇ ಬಿಜೆಪಿ ಮೂಲಗಳು ಈ ವದಂತಿಯನ್ನು ತಳ್ಳಿಹಾಕಿವೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!