BREAKING NEWS
Search

ಭಟ್ಕಳ ರೈಲ್ವೆ ನಿಲ್ದಾಣದ ಬಳಿ ಗಾಂಜಾ ಮಾರಾಟ-ಆರೋಪಿಗಳ ಬಂಧನ

500

ಕಾರವಾರ:- ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಮಾರಾಟ ಮಾಡುತಿದ್ದ ಇಬ್ಬರು ಆರೋಪಿಗಳನ್ನು ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸರು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ಬಂಧಿತರು ಭಟ್ಕಳದ ಪುರವರ್ಗ ಗಣೇಶ ನಗರದ ಅಬ್ದುಲ್ ರಶೀದ್ (32), ಹಾಗೂ ಹೆಬಳೆ ಗಾಂಧಿನಗರದ ನಿವಾಸಿ ಮಹ್ಮದ್ ಇರ್ಷಾದ್ (32) ಆರೋಪಿಗಳಾಗಿದ್ದು ಇವರಿಂದ ಮಾರಾಟಕ್ಕೆ ತಂದಿದ್ದ 520 ಗ್ರಾಮ್ ತೂಕದ ಗಾಂಜಾ ,ಎರಡು ಮೊಬೈಲ್ , ₹1200 ನಗದನ್ನು ವಶಕ್ಕೆ ಪಡೆಯಲಾಗಿದೆ.

ಕಾರ್ಯಾಚರಣೆಯಲ್ಲಿ ಭಟ್ಕಳ ನಗರ ಠಾಣೆಯ ಪಿ.ಎಸ್.ಐ ಹೆಚ್.ಬಿ ಕುಡಗುಂಟಿ ,ಅಪರಾಧ ದಳದ ಸಿಬ್ಬಂದಿಗಳಾದ ನಾಗರಾಜ್ ನಾಯ್ಕ,ಮುಂಜುನಾಥ್ ಹೆಗಡೆ ,ಸುದರ್ಶನ್ ನಾಯ್ಕ,ಚಂದ್ರು ಪಾಟೀಲ್ ,ಉಮೇಶ್ ನಾಯ್ಕ ರವರು ಭಾಗವಹಿಸಿದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!