ಸಂಬಂಧಿಕರು ಅಂತ್ಯ ಸಂಸ್ಕಾರಕ್ಕೆ ಹಿಂದೇಟು-ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ ಮಗಳು

22

ಕಾರವಾರ :- ಸಂಪ್ರದಾಯದ ಕಟ್ಟುಪಾಡನ್ನು ಮುರಿದು ಆತ್ಮಹತ್ಯೆ ಮಾಡಿಕೊಂಡಿದ್ದ ತಂದೆಯ ಅಂತ್ಯಸಂಸ್ಕಾರವನ್ನು ಮಗಳು ನೆರವೇರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ‌ ತಾಲೂಕಿನ ಹಡೀಲು ಸಬ್ಬತ್ತಿಯಲ್ಲಿ ಇಂದು ನಡೆದಿದೆ.

ಮಂಜುನಾಥ ನಾಗಪ್ಪ ನಾಯ್ಕ್ (51) ಎಂಬವವರು ನಿನ್ನೆ ದಿನ ತಮ್ಮ ಮನೆಯ ಗೃಹಪ್ರವೇಶ ನೆರವೇರಿಸಿ ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರಿಗೆ ಮೂರು ಜನ ಹೆಣ್ಣುಮಕ್ಕಳಿದ್ದು ಗಂಡುಮಕ್ಕಳಿರಲಿಲ್ಲ. ಹೀಗಾಗಿ ರಕ್ತಸಂಬಂಧಿಗಳಲ್ಲಿ ಯಾರಾದರೂ ಚಿತೆಗೆ ಅಗ್ನಿಸ್ಪರ್ಷ ಮಾಡಬೇಕುತ್ತು. ಆದರೇ ಯಾರೂ ಮುಂದೆಬಾರದ ಹಿನ್ನಲೆಯಲ್ಲಿ ಸಂಪ್ರದಾಯಕ್ಕೆ ಕಟ್ಟುಬೀಳದೇ ಹಿರಿಯ ಮಗಳು ಶ್ವೇತಾ ನಾಗಪ್ಪ ನಾಯ್ಕ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಗಂಡಿನಷ್ಟೇ ತಾವೂ ಸಮರ್ಥರು ಎಂಬುದನ್ನು ತೋರಿಸಿಕೊಟ್ಟು ಸಮಾಜದ ಮಹಿಳೆಯರಿಗೆ ಮಾದರಿಯಾದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!