ಭಟ್ಕಳ:ಮಂಗನ ಹಿಡಿಯಲು ಹೋದ ಚಿರುತೆ ವಿದ್ಯುತ್ ತಗುಲಿ ಸಾವು.

1264

ಕಾರವಾರ :- ಭಟ್ಕಳ ತಾಲ್ಲೂಕಿನ ಬೆಳಕೆ ವಲಯದ ಕೆಕ್ಕೋಡಿನಲ್ಲಿ ಮಂಗನನ್ನು ಭೇಟೆ ಆಡಲು ಮರವೇರಿದ್ದ ಗಂಡು ಚಿರತೆಯೊಂದು ವಿದ್ಯುತ್ ತಗುಲಿ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಚಿರತೆಗೆ ಸುಮಾರು 10 ವರ್ಷಗಳಾಗಿರಬಹುದು ಎಂದು ಅಂದಾಜಿಸಲಾಗಿದ್ದು ಅದರ ಬಾಲದ ಕೂದಲು ವಿದ್ಯುತ್ ಲೈನ್‌ನಲ್ಲಿ ಅಂಟಿಕೊಂಡಿದೆ. ಅಲ್ಲದೇ ಬಾಲದ ತುದಿಯಲ್ಲಿ ಸುಟ್ಟಿರುವ ಗುರುತು ಪತ್ತೆಯಾಗಿದೆ. ಅದರ ಒಂದು ಉಗುರು ಕಾಣೆಯಾಗಿದ್ದು, ನೋವಿನಿಂದ ಮರವನ್ನು ಪರಚಿಕೊಂಡು ಕೆಳಗೆ ಇಳಿಯುವಾಗ ಕಳಚಿರುವ ಸಾಧ್ಯತೆಯಿದೆ, ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಸವಿತಾ ದೇವಾಡಿಗ ತಿಳಿಸಿದ್ದಾರೆ.

https://kannadavani.news/daily-astrology-horoscope-kannada-dina-bavishya-karnataka/ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!