ಭಟ್ಕಳ-ಮಗಳ ಸಾವಿನ ಸುದ್ದಿ ಕೇಳಿ ತಂದೆ ಹೃದಯಾಘಾತದಿಂದ ಸಾವು

3225

ಕಾರವಾರ :- ಅನಾರೋಗ್ಯದಿಂದ ಮಗಳು ಸಾವುಕಂಡ ಸುದ್ದಿ ತಿಳಿದು ತಂದೆಯೂ ಹೃದಯಾಘಾತದಿಂದ ಸಾವು ಕಂಡ ಘಟನೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮಾರುಕೇರಿಯಲ್ಲಿ ನಡೆದಿದೆ.

ಭಟ್ಕಳದ ಮಾರುಕೇರಿ ಹೆಜ್ಜಿಲು ಗ್ರಾಮದ ಎಸ್.ಎಸ್ . ಎಲ್.ಸಿ ವಿದ್ಯಾರ್ಥಿನಿ ಕಾವ್ಯ ರಾಮ ಗೊಂಡ(15) ಇಂದು ಉಸಿರಾಟದ ತೊಂದರೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಳು.

ಈ ವಿಷಯ ಮನೆಯಲ್ಲಿ ಇದ್ದ ಈಕೆಯ ತಂದೆ ರಾಮ ಸುಕ್ರ ಗೊಂಡ (46) ಎಂಬುವವಿಗೆ ತಿಳಿಸಲಾಗಿದೆ. ಈವೇಳೆ ಮಗಳ ಸಾವಿನ ಸುದ್ದಿ ತಿಳಿಯುತಿದ್ದಂತೆ ಸ್ಥಳದಲ್ಲೇ ಹೃದಯಾಘಾತವಾಗಿ ಅವರು ಮೃತಪಟ್ಟಿದ್ದಾರೆ.

ವಿದ್ಯಾರ್ಥಿನಿಯು ತಾಲ್ಲೂಕಿನ ಕಿತ್ತೂರ ರಾಣಿ ಚೆನ್ನಮ್ಮಾ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತಿದ್ದಳು.ಈ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದಳು.ಈಕೆ ಇದಕ್ಕಿಂದ್ದಂತೆ ಕಳೇದ ಎರಡು ದಿನಗಳಿಂದ ಅನಾರೋಗ್ಯದಿಂದ ನರಳುತ್ತಿದ್ದು ಸೋಮವಾರ ಬೆಳಿಗ್ಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೇಲೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಅಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.ಒಂದೇವದಿನದಲ್ಲಿ ಈ ಕುಟುಂಬ ಎರಡು ಸಾವು ಕಂಡಂತಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!