ಕರೋನಾ ದಿಂದ ಕಾಲೇಜು ಬಂದ್: ಅಪ್ರಾಪ್ತ ಬಾಲಕಿ ವಿವಾಹ ಮುಂದಾಗಿದ್ದ ಪೊಷಕರನ್ನು ಮನವೊಲಿಸಿದ ಅಧಿಕಾರಿಗಳು.

838


ಕಾರವಾರ:- ಕರೋನಾ ದಿಂದಾಗಿ ಶಾಲೆ-ಕಾಲೇಜುಗಳುಗಳು ಬಂದ್ ಆಗಿದ್ದು ಆನ್ ಲೈನ್ ಶಿಕ್ಷಣ ಮುಂದುವರೆಯುತ್ತಿದೆ. ಆದರೇ ಬಡ ಕುಟುಂಬದ ಜನರು ಮಕ್ಕಳನ್ನು ಓದಿಸಲು ಈ ಸಂದರ್ಭಗಳಲ್ಲಿ ತೊಂದರೆ ಅನುಭವಿಸುತಿದ್ದು ತಮ್ಮ ಹೆಣ್ಣುಮಕ್ಕಳು ಪ್ರಾಪ್ತ ವಯಸ್ಸಿಗೆ ಬರುವ ಮುಂಚೆಯೇ ವಿದ್ಯಾಭ್ಯಾಸ ಕೊಡಿಸುವ ಬದಲು ವಿವಾಹಕ್ಕೆ ಮುಂದಾಗುತಿದ್ದಾರೆ.
ಈ ರೀತಿಯ ಪ್ರಕರಣ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದ್ದು ಅಧಿಕಾರಿಗಳು ತಡೆದು ಮನವೊಲಿಸಲು ಸಫಲರಾಗಿದ್ದಾರೆ.


ಮೊದಲ ಪಿ.ಯು.ಸಿಗೆ ಪ್ರವೇಶ ಪಡೆದಿದ್ದ ಜಿಲ್ಲೆಯ ಭಟ್ಕಳದ ಕಾದಿರ್ ಭಾಷ ಎಂಬುವವರ ಮಗಳನ್ನು ಇಂದು ಶಿರಸಿ ಮೂಲದ 25 ವರ್ಷದ ಯುವಕನಿಗೆ ಕೊಟ್ಟು ವಿವಾಹ ಮಾಡಲು ಭಟ್ಕಳದ ಬಂದರು ರಸ್ತೆ ಎರಡನೇ ಕ್ರಾಸ್ ಬಳಿ ಇರುವ ಮದೀನಾ ಹಾಲ್ ನಲ್ಲಿ  ವಿವಾಹ ನಿಶ್ಚಯಕ್ಕೆ ವ್ಯವಸ್ತೆ ಮಾಡಿದ್ದರು.
ಈ ವೇಳೆ ವಿಷಯ ತಿಳಿದ ಶಿಶು ಯೋಜನಾ ಅಭಿವೃದ್ದಿ ಇಲಾಖೆ ನೇಲ್ವಿಚಾರಕಿ ಸುಶೀಲ ಮೊಗೇರ್ ,ಸಾಂತ್ವನ ಕೇಂದ್ರದ ಸದಸ್ಯರು ಹಾಗೂ  ಭಟ್ಕಳ ಶಹರ ಠಾಣೆ ಪೊಲಿಸರು ಸ್ಥಳಕ್ಕೆ ಆಗಮಿಸಿ ವಿವಾಹ ನಿಶ್ಚಯ ಕಾರ್ಯಕ್ರಮವನ್ನು ತಡೆದಿದ್ದು ಪೊಷಕರ ಮನವೊಲಿಸಿ ಮದುವೆ ಮಾಡದಂತೆ ಮುಚ್ಚಳಿಕೆ ಬರೆಸಿಕೊಂಡು ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇನ್ನು ಭಟ್ಕಳದಲ್ಲಿ ಇದೇ ತಿಂಗಳಲ್ಲಿ ಅಪ್ರಾಪ್ತ ಬಾಲಕಿಯರ ವಿವಾಹ ಪ್ರಕರಣ ಮೂರಕ್ಕೆ ಏರಿದೆ. ಕರೋನಾ ಭಯ ಹಾಗೂ ಬಡತನ ಜಿಲ್ಲೆಯಲ್ಲಿ ಬಾಲ್ಯ ವಿವಾಹಕ್ಕೆ ಪ್ರೇರಣೆ ನೀಡುತಿದ್ದು ಆತಂಕಕಾರಿ ಬೆಳವಣಿಗೆಯಾಗಿದೆ‌.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!