ಕಾರವಾರ:- ಭಟ್ಕಳ ತಾಲೂಕಿನ ಶಿರಾಲಿ ಚಿತ್ರಾಪುರದಲ್ಲಿ ನಡೆದ 14 ವರ್ಷ ಪ್ರಾಯದ ಶಾಲಾ ಬಾಲಕಿಯೋರ್ವಳನ್ನು ನಂಬಿಸಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಗರ್ಭಿಣಿಯನ್ನಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಿತರು ಶಿರಸಿ ಮೂಲದ ರವಿ ಪಟಗಾರ (35) ಹಾಗೂ ಭಟ್ಕಳ ತಾಲೂಕಿನ ಶಿರಾಲಿ ಗುಡಿಹಿತ್ತಲ್ ನಿವಾಸಿ ಶಿವರಾಜು ನಾಯ್ಕ (22)
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಾಲಕಿಯ ತಾಯಿಯು ನೀಡಿದ ದೂರಿನಲ್ಲಿ ರವಿ ಪಟಗಾರ ಎಂಬಾತನ ಮೇಲೆ ದೂರು ನೀಡಿದ್ದರು.
ಪ್ರಕರಣ ವಿಚಾರಣೆಯ ವೇಳೆ ಶಿವರಾಜು ನಾಯ್ಕನ ಹೆಸರೂ ಬೆಳಕಿಗೆ ಬಂದಿತ್ತು.
ಘಟನೆ ಹಿನ್ನಲೆ:-
9ನೇ ತರಗತಿಯನ್ನು ಓದುತ್ತಿದ್ದ ಸಾಗರ ತಾಲೂಕಿನ ಸಿಗಂಧೂರು ಮೂಲದ ಸಂತ್ರಸ್ತೆ ಶಾಲಾ ಬಾಲಕಿಯು ಈ ಹಿಂದೆ ತನ್ನ ತಾಯಿಯೊಂದಿಗೆ ಚಿತ್ರಾಪುರದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದಳು.
ನಂತರ ಮುರುಡೇಶ್ವರ ತೆರ್ನಮಕ್ಕಿಯಲ್ಲಿ ಇನ್ನೊಂದು ಮನೆಯನ್ನು ಬಾಡಿಗೆಗೆ ಪಡೆದು ನೆಲೆಸಿದ್ದರು.
ಸಂತ್ರಸ್ತ ಬಾಲಕಿಯು ತನ್ನ ಗೆಳತಿಯ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದು, ಆರೋಪಿಗಳೊಂದಿಗಿನ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಈ ಸ್ನೇಹವನ್ನು ದುರುಪಯೋಗ ಪಡಿಸಿಕೊಂಡ ಇಬ್ಬರು ಬಾಲಕಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ.
ಸಂತ್ರಸ್ತ ಬಾಲಕಿಯನ್ನು ಕಾರವಾರ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದ್ದು ,ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.