BREAKING NEWS
Search

ಭಟ್ಕಳ ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ.

2456

ಕಾರವಾರ :- ಅರಬ್ಬಿ ಸಮದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬೆಂಳಬರ್ ದ ಸುರೇಶ್ ಕಾರ್ವಿ ಎಂಬುವವರಿಗೆ ಸೇರಿದ ಮತ್ಯ್ಯಾಂಜನೇಯ ಎಂಬ ಬೋಟ್ ತಾಂತ್ರಿಕ ಕಾರಣದಿಂದ ಭಟ್ಕಳದಿಂದ ಹತ್ತೊಂಬತ್ತು ನಾಟಿಕನ್ ಮೈಲುದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ಮುಳುಗಡೆಯಾಗಿದೆ.

ಬೋಟ್ ಮುಳಗಡೆ ವೀಡಿಯೋ ನೋಡಿ:-

ಬೋಟ್ ನಲ್ಲಿ ಇದ್ದ ಆರು ಜನರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬೋಟ್ ಸಂಪೂರ್ಣ ಮುಳುಗಡೆ ಆಗಿದ್ದರಿಂದ ಲಕ್ಷಾಂತರ ರುಪಾಯಿ ಹಾನಿಯಾಗಿದ್ದು ಸ್ಥಳಕ್ಕೆ ಕರಾವಳಿ ಕಾವಲುಪಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾತ್ರಿ ನಿಷೇಧಿತ ಲೈಟ್ ಫಿಷಿಂಗ್ ಮತ್ಸ್ಯ ಭೇಟೆಗೆ ತೆರಳಿದ್ದ ಬೋಟ್.

ರಾತ್ರಿ ಅಂಕೋಲದಿಂದ ಭಟ್ಕಳದ ಅರಬ್ಬಿ ಸಮುದ್ರ ಭಾಗದಲ್ಲಿ ನಿಷೇಧಿತ ಲೈಟ್ ಪಿಷಿಂಗ್ ಗೆ ಈ ಬೋಟು ತೆರಳಿತ್ತು ಎಂದು ಪ್ರಾಥಮಿಕ ಮಾಹಿತಿ ದೊರೆತಿದೆ. ಜೊತೆಗೆ ಬೋಟ್ ಗೆ ವಿಮೆ ಕೂಡ ಮಾಡಿಸಿರಲಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ಈ ಕುರಿತು ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆಹಾಕುತಿದ್ದಾರೆ.ಇನ್ನು ಅದೃಷ್ಟವಶಾತ್ ಬೋಟ್ ನಲ್ಲಿ ಇದ್ದ ಎಲ್ಲರೂ ಪಾರಾಗಿದ್ದು ಬೋಟ್ ಮುಳುಗಡೆ ಆಗುವ ವೇಳೆ ಪಕ್ಕದಲ್ಲೇ ಮೀನುಗಾರಿಕೆ ನಡೆಸುತಿದ್ದ ಮೀನುಗಾರರು ಎಲ್ಲರನ್ನೂ ರಕ್ಷಣೆ ಮಾಡಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!