ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕುಮಟಾದ
ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜ್ ಹಿಂಬದಿ ಯಲ್ಲಿ ಸಿಲೆಂಡರ್ ನೊಂದಿಗೆ ವೈಯರ್ ಸುತ್ತಿದ ಮಾದರಿಯಲ್ಲಿ ಬಾಂಬ್ ರೂಪದ ವಸ್ತು ಪತ್ತೆ ಯಾಗಿದೆ.
ಇಂದು ಸಂಜೆ ಸ್ಥಳೀಯರು ವಾಯು ವಿಹಾರ ಮಾಡುವಾಗ ಈ ಬಾಂಬ್ ಮಾದರಿ ವಸ್ತುವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಬಾಂಬ್ ಗೆ ಅಳವಡಿಸುವ ಸಿಲೆಂಡರ್ ಡಿಟೋನೇಟರ್ ತಂತಿರೂಪದ ವಸ್ತುಗಳಿದ್ದು ಪೊಲೀಸರಿಗೂ ಈ ವಸ್ತುವಿನ ಮೇಲೆ ಅನುಮಾನ ಬಂದಿದ್ದು ಮಂಗಳೂರಿನ ಬಾಂಬ್ ನಿಷ್ಕ್ರಿಯ ದಳದವರಿಗೆ ಮಾಹಿತಿ ನೀಡಿದ್ದಾರೆ.
ಇನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


ಇನ್ನು ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು ಅಗ್ನಿಶಾಮಕ ಸಿಬ್ಬಂದಿ, ಶ್ವಾನದಳ ದವರು ಬೀಡು ಬಿಟ್ಟಿದ್ದು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದ್ದು ಪೊಲೀಸರ ಮಾಹಿತಿ ಪ್ರಲಾರ ಸಿಲೆಂಡರ್ ಬ್ಯಾಟರಿ ಷಲ್ ಗಳು ಇದರಲ್ಲಿ ಇದ್ದು ಇದು ನಕಲಿ ಬಾಂಬ್ ಆಗಿರುವ ಸಾಧ್ಯತೆ ಇದೆ ಎಂದಿದ್ದಾರೆ.
ಆದರೇ ಈ ವಸ್ತುಗಳು ಸಿಕ್ಕ ಪ್ರದೇಶವು ರೈಲ್ವೆ ನಿಲ್ದಾಣ ಸಹ ಹತ್ತಿರವಿದ್ದು ಸಾಕಷ್ಟು ಅನುಮಾನಗಳು ಮೂಡುವಂತೆ ಮಾಡಿದೆ.