Yallapura| ಕಾರ್ಮಿಕ ಸಚಿವರಿಗೆ ಮತಬಹಿಷ್ಕಾರದ ಎಚ್ಚರಿಕೆ!

193

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲೀಗ ಮೂಲಭೂತ ಸೌಲಭ್ಯ ನೀಡದ ಶಾಸಕರಿಗೆ ಮತ ಬಹಿಷ್ಕಾರದ ಬಿಸಿ ಮುಟ್ಟುತಿದ್ದು ಈ ಹಿಂದೆ ಹಳಿಯಾಳದ ಶಾಸಕ ಆರ್.ವಿ ದೇಶಪಾಂಡೆ,ಕಾರವಾರದ ಶಾಸಕಿ ರೂಪಾಲಿ ನಾಯ್ಕ ರವರಿಗೆ ಗ್ರಾಮದಲ್ಲಿ ರಸ್ತೆ ಮಾಡದಿದ್ದಕ್ಕೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದರು.

ಇದೀಗ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಕ್ಷೇತ್ರದಲ್ಲಿ ಮತ ಬಹಿಷ್ಕಾರದ ಎಚ್ಚರಿಕೆಯನ್ನು ಯಲ್ಲಾಪುರ ತಾಲೂಕಿನ ಜಮಗುಳಿ ಗ್ರಾಮದ ಗ್ರಾಮಸ್ಥರು ನೀಡಿದ್ದು ಊರಿನಲ್ಲಿ ಮತ ಬಹಿಷ್ಕಾರದ ಬ್ಯಾನರ್ ಅಳವಡಿಸಲಾಗಿದೆ.

ಕಚ್ಚಾ ರಸ್ತೆಯನ್ನು ಸರಿಪಡಿಸುವಂತೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ಬ್ಯಾನರ್ ಅಳವಡಿಸಲಾಗಿದ್ದು ,ಊರಿಗೆ ರಸ್ತೆ ಮಾಡಿಸಿಕೊಡಿ, ಇಲ್ಲವಾದರೆ ಮತ ಕೇಳಬೇಡಿ ಎಂದು ಬ್ಯಾನರ್ ಅಳವಡಿಕೆ ಮಾಡಲಾಗಿದೆ.

ಯಲ್ಲಾಪುರದ ಜಮಗುಳಿ ಗ್ರಾಮಕ್ಕೆ ತೆರಳಲು ಸೂಕ್ತ ರಸ್ತೆ ಇಲ್ಲಿದ ಕಾರಣ ನಿತ್ಯ ನರಕ ಅನುಭವಿಸುತ್ತಿರುವ ಗ್ರಾಮಸ್ಥರು ಸಿಸಿ (ಪಕ್ಕಾ) ರಸ್ತೆಗಾಗಿ ಹಲವು ಬಾರಿ ಮನವಿ ಮಾಡಿದ್ರೂ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿರಲಿಲ್ಲ,55 ಮನೆಗಳಿರುವ ಗ್ರಾಮದಲ್ಲಿ 300 ಮತಗಳಿದ್ದು ರಸ್ತೆ ಮಾಡದಿದ್ದರೆ 2023 ರ ಚುನಾವಣೆ ಬಹಿಷ್ಕಾರ ಮಾಡಲಾಗುವುದು ಎಂದು ಬ್ಯಾನರ್ ಹಾಕಿ ಎಚ್ಚರಿಕೆ ನೀಡಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!