ಕಾರವಾರ:- ಚಾಲಕನ ಅಜಾಗರೂಕತೆಯ ಚಾಲನೆಯಿಂದ ಖಾಸಗಿ ಬಸ್ ಕ್ಯಾರಿಯರ್ ಗೆ ವಿದ್ಯುತ್ ತಂತಿ ಸಿಲುಕಿ ಮೂರು ವಿದ್ಯುತ್ ಕಂಬಗಳು ನೆಲಕ್ಕುರುಳಿದ ಘಟನೆ ಕಾರವಾರದ ಸೆಂಟ್ ಮೈಕಲ್ ವೃತ್ತದಲ್ಲಿ ಇಂದು ಬೆಳಗ್ಗೆ ನಡೆದಿದೆ.


ಬಸ್ ಮೇಲ್ಭಾಗದಲ್ಲಿ ಅಧಿಕ ಲೋಡ್ ಹೊಂದಿದ ಪ್ರಯಾಣಿಕರ ವಸ್ತುಗಳನ್ನು ಹಾಕಲಾಗಿದ್ದು ಚಾಲಕ ವಿದ್ಯುತ್ ಕಂಬ ಗಮನಿಸದೇ ಚಾಲನೆ ಮಾಡಿದ್ದರಿಂದ ಈ ಘಟನೆ ನಡೆದಿದೆ.ಅದೃಷ್ಟವಷಾತ್ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದೇ ಬಚಾವ್ ಆಗಿದ್ದಾರೆ.ಘಟನೆ ಕಾರವಾರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.