ಕಾರವಾರ :- ಮರಾಠಿ ಹಾಗೂ ಹಿಂದಿಯಲ್ಲೇ ಬ್ಯಾಂಕ್ ನಲ್ಲಿ ವ್ಯವಹರಿಸುವಂತೆ ಗ್ರಾಯಕರಿಗೆ ಕಿರಕ್ ಮಾಡುತಿದ್ದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ್ ಕೆನರಾ ಬ್ಯಾಂಕ್ ನ ಸಹಾಯಕ ಮ್ಯಾನೇಜರ್ ದೀಪ್ ಜಿತ್ ಗೆ ಇಂದು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ್ ಹಾಗೂ ಸ್ಥಳೀಯ ಮುಖಂಡರು ಶಿವರಾಮ್ ಹರಿಕಾಂತ ಎಂಬುವವರು ಬ್ಯಾಂಕ್ ಗೆ ತೆರಳಿ ಗ್ರಾಹಕರಿಗೆ ಮರಾಠಿ,ಹಿಂದಿಯಲ್ಲಿ ವ್ಯವಹರಿಸಲು ಒತ್ತಾಯಿಸಿದ ಮ್ಯಾನೇಜರ್ ಗೆ ಕನ್ನಡ ಕಲಿಯಲು ತಿಂಗಳ ಗಡುವು ಕೊಟ್ಟು ಬ್ಯಾಂಕ್ ಗೆ ಬರುವ ಕನ್ನಡ ಗ್ರಾಹಕರಿಗೆ ತೊಂದರೆ ಕೊಡದಂತೆ ಎಚ್ಚರಿಕೆ ನೀಡುವ ಜೊತೆ ಜಿಲ್ಲಾಧಿಕಾರಿಗಳಿಗೆ ಸೇರಿದಂತೆ ಬ್ಯಾಂಕ್ ನ ಮುಖ್ಯ ಅಧಿಕಾರಿಗೆ ದೂರು ನೀಡಿದ್ದಾರೆ.

ಮಹಾರಾಷ್ಟ್ರ ಮೂಲದ ದೀಪ್ ಜಿತ್ ಎಂಬ ಸಹಾಯಕ ಮ್ಯಾನೇಜ್ ಮಿರ್ಜಾನ್ ಶಾಖೆಯಲ್ಲಿ ಕಾರ್ಯನಿರ್ವಹಿಸುತಿದ್ದು, ಶಾಖೆಗೆ ಬರುವ ಕನ್ನಡ ಗ್ರಾಹಕರನ್ನು ತುಚ್ಛವಾಗಿ ಕಾಣುತಿದ್ದರು. ಹಿಂದಿ ಹಾಗೂ ಮರಾಠಿ ಬಾರದ ಗ್ರಾಹಕರಿಗೆ ಸ್ಪಂದಿಸದ ಮ್ಯಾನೇಜರ್ ಕನ್ನಡಡಿಗರನ್ನು ಕೀಳಾಗಿ ನೋಡುತಿದ್ದರು. ಇನ್ನು ಕನ್ನಡ ಕಲಿತು ವ್ಯವಹರಿಸುಲು ತಿಳಿದವರು ಹೇಳಿದಾಗಲೂ ಉಡಾಪೆ ಉತ್ತರ ನೀಡುವ ಜೊತೆಗೆ ಕನ್ನಡದ ಬಗ್ಗೆ ಕೇವಲವಾಗಿ ಮಾತನಾಡುತಿದ್ದರು. ಹೀಗಾಗಿ ಈ ಕುರಿತು ಅನೇಕ ಗ್ರಾಹಕರು ಕನ್ನಡ ಸಂಘಟನೆಗೆ ತಿಳಿಸಿದ್ದು, ಇಂದು ಕಚೇರಿಗೆ ತೆರಳಿ ಕನ್ನಡ ಭಾಷೆ ಹಾಗೂ ಕನ್ನಡಿಗರನ್ನು ತುಚ್ಛವಾಗಿ ಕಂಡಲ್ಲಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದು ಒಂದು ತಿಂಗಳೊಳಗೆ ಕನ್ನಡ ಕಲಿಯುವಂತೆ ಗಡುವು ನೀಡಿದ್ದಾರೆ.