ಸಿಡಿ ಪ್ರಕರಣ:ಯುವತಿ ತಂದೆ ಹೇಳಿದ್ದೇನು ಗೊತ್ತಾ? ಆ ವಿಡಿಯೋ ದಲ್ಲಿ ಏನಿದೆ?

1525

ಬೆಳಗಾವಿ: ಮಗಳನ್ನ ಹುಡುಕಿಕೊಡಿ, ಆಕೆಯ ಮೊಬೈಲ್ ಸಹ ಸ್ವಿಚ್ಛ್ ಆಫ್ ಆಗಿದೆ. ಆಕೆ ಜೀವ ಆಪಾಯದಲ್ಲಿದೆ ಎಂದು ಸಿಡಿ ಪ್ರಕರಣದಲ್ಲಿ ಕೇಳಿ ಬಂದಿರುವ ಯುವತಿಯ ತಾಯಿ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.

ಟಿವಿಯಲ್ಲಿ ವಿಡಿಯೋ ನೋಡಿ ನನ್ನ ಮಗಳಿಗೆ ಕಾಲ್ ಮಾಡಿದೆ ,ಆಗ ಅವಳು ಟಿವಿಯಲ್ಲಿ ಬರ್ತಿರುವುದು ನಾನಲ್ಲ.ಅದ್ರಲ್ಲಿ ನನ್ನ ಪೋಟೋ ಬಳಸಿಕೊಂಡಿದ್ದಾರೆ ನಾನು ತಪ್ಪು ಮಾಡಿಲ್ಲಾ ಅಂತ ಹೇಳಿದಳು.

ಆಗ ನಾನು ಊರಿಗೆ ಬಾ ಅಂತ ಮಗಳಿಗೆ ಕರೆದೆ,
ಇಲ್ಲಾ ಮಮ್ಮಿ ನನಗೆ ಊರಿಗೆ ಬರಲು ಆಗಲ್ಲಾ ನನ್ನ ಜೀವಕ್ಕೆ ಅಪಾಯ ಇದೆ ಅಂತಾ ಹೇಳಿದಳು.

ನಂತರ ಆಕೆ ನನಗೆ ಪೋನ್ ಮಾಡಬೇಡಿ ಅಂತಾ ಹೇಳಿದಳು.ಇದಾದ ಬಳಿಕ ಆಕೆಯ ಪೋನ್ ಸ್ವಿಚ್ ಆಫ್ ಆಯಿತು ಎಂದು ನಮ್ಮ ಮಗಳನ್ನ ಸುರಕ್ಷತೆಯಿಂದ ಹುಡುಕಿಕೊಡಿ ಎಂದು ದಂಪತಿ ಕೈಮುಗಿದು ಕೇಳಿಕೊಂಡಿರುವ ವಿಡಿಯೋ ಮಾಧ್ಯಮಗಳಿಗೆ ಲಭ್ಯವಾಗಿದೆ.

ಇದಲ್ಲದೇ ತಮ್ಮಮಗಳನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಸಿಡಿ ಪ್ರಕರಣದಲ್ಲಿರುವ ಯುವತಿ ತಂದೆ ದೂರು ನೀಡಿದ್ದಾರೆ.

ಇದಲ್ಲದೇ ಇದ್ರಲ್ಲಿ ಯಾರು ಯಾರು ಇದ್ದಾರೆ ಅವರಿವೆ ಶಿಕ್ಷೆಯಾಗಬೇಕು ಎಂದು ಯುವತಿಯ ಪೋಷಕರು ಆಹ್ರಹಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!