ಮುಖ್ಯಮಂತ್ರಿ ತಂದೆಯ ಬಂಧನ!

1691

ಬ್ರಾಹ್ಮಣರು ವಿದೇಶಿಗರು ,ಅವರನ್ನು ಬಹಿಷ್ಕರಿಸಿ,ಅವರನ್ನು ಹತ್ತಿರ ಸೇರಿಸಬೇಡಿ ಎಂದು ಲಕ್ನೋ ದಲ್ಲಿ ಜನರಿಗೆ ಕರೆ ಕೊಟ್ಟಿದ್ದ ಛತ್ತೀಸ್ ಘಢದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರ ತಂದೆ ನಂದಕುಮಾರ್ ಬಾಘೇಲ್ ಅವರನ್ನು ಛತ್ತೀಸ್ ಘಡದ ಪೊಲೀಸರು ಆಗ್ರದಲ್ಲಿ ಬಂಧಿಸಿ ರಾಯ್ ಪುರ್ ಗೆ ಕರೆತರಲಾಯಿತು.

ಇವರ ಈ ಹೇಳಿಕೆಯಿಂದ ಬ್ರಾಹ್ಮಣ ಸಮುದಾಯಕ್ಕೆ ಅವಮಾನವಾಗಿದೆ ಎಂದು ಆರೋಪಿಸಿ ಬ್ರಾಹ್ಮಣ ಸಂಘಟನೆಗಳು ಅವರ ವಿರುದ್ಧ ಡಿ.ಡಿ ಠಾಣೆಯಲ್ಲಿ ದೂರು ನೀಡಿದ್ದವು.
ದೂರಿನ ಆಧಾರದಲ್ಲಿ ಅವರನ್ನು ಬಂಧಿಸಲಾಗಿದೆ.

ಈ ಕುರಿತು ಸ್ವತಹಾ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಪ್ರತಿಕ್ರಿಯಿಸಿ ನಮ್ಮ ತಂದೆಯ ಹೇಳಿಕೆ ತಪ್ಪು ,ರಾಜ್ಯದಲ್ಲಿ ಎಲ್ಲಾ ಸಮುದಾಯದ ಸಾಮರಸ್ಯ ಕಾಪಾಡುವುದು ನಮ್ಮ ಕರ್ತವ್ಯ ,ಹೆಚ್ಚಿನ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!