ಚಿಕ್ಕಮಗಳೂರು.:- ಟಿಂಬರ್ ತುಂಬಿದ್ದ ಟ್ರ್ಯಾಕ್ಟರ್ ಓವರ್ ಲೋಡ್ ಆಗಿ ಅಪ್ಪಿನಲ್ಲಿ ಹತ್ತಲಾಗದೇ ಹಿಮ್ಮುಖವಾಗಿ ಬಂದು ಪಲ್ಟಿಯಾಗಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಬಳಿ ನಡೆದಿದೆ.
ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಿಸುವ ವೇಳೆ ನಿಯಂತ್ರಣ ಅಸಾಧ್ಯ ಎಂದು ಟ್ರ್ಯಾಕ್ಟರ್ ಚಾಲಕ ಟ್ರ್ಯಾಕ್ಟರ್ ನಿಂದ ಹಾರಿ ಜೀವ ಉಳಿಸಿಕೊಂಡಿದ್ದಾನೆ.
ಮೂಡಿಗೆರೆ ತಾಲೂಕಿನ ಬಾಳೂರಿನಿಂದ ಮರದ ಟಿಂಬರ್ ತುಂಬಿಕೊಂಡಿದ್ದ ಟ್ರ್ಯಾಕ್ಟರ್ ಮಾಕೋನಹಳ್ಳಿ ಮಾರ್ಗವಾಗಿ ಮೂಡಿಗೆರೆಯತ್ತ ಹೊರಟಿತ್ತು.
ಟ್ರ್ಯಾಕ್ಟರ್ ಮಾಕೋನಹಳ್ಳಿ ಬಳಿ ಬರುತ್ತಿದ್ದಂತೆ ಅಪ್ಪಿನಲ್ಲಿ ಟ್ರ್ಯಾಕ್ಟರ ಟೈರ್ ಪಂಚರ್ ಆಗಿದೆ. ಚಾಲಕ ಗಾಡಿಯನ್ನ ನಿಯಂತ್ರಿಸಲು ಹರಸಾಹಸಪಟ್ಟರೂ ಸಾಧ್ಯವಾಗಿಲ್ಲ.

ಟ್ರ್ಯಾಕ್ಟರ್ ಯಾವಾಗ ನಿಯಂತ್ರಣಕ್ಕೆ ಸಿಗದೆ ಹಿಮ್ಮುಖವಾಗಿ ಚಲಿಸಲು ಆರಂಭವಾಯ್ತೋ ಚಾಲಕ ಟ್ರ್ಯಾಕ್ಟರ್‍ನಿಂದ ಜಿಗಿದು ಜೀವ ಉಳಿಸಿಕೊಂಡಿದ್ದಾನೆ. ಅದೃಷ್ಟವಶಾತ್ ಟ್ರ್ಯಾಕ್ಟರ್ ಹಿಮ್ಮುಖವಾಗಿ ವೇಗವಾಗಿ ಚಲಿಸುವಾಗ ಟ್ರ್ಯಾಕ್ಟರ್ ಹಿಂದಿಯೂ ಯಾವುದೇ ವಾಹನಗಳು ಇರಿಲಿಲ್ಲ.
ಒಂದು ವೇಳೆ ವಾಹನಗಳು ಇದ್ದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಘಟನೆ ಟ್ರ್ಯಾಕ್ಟರ್‍ಗೆ ಓವರ್ ಓವರ್ ಲೋಡ್ ತುಂಬಿದ್ದೇ ಕಾರಣ ಎಂದು ಹೇಳಲಾಗಿದೆ. ಜೊತೆಗೆ ಟ್ರ್ಯಾಕ್ಟರ್ ಹಾಗೂ ಲಾರಿಗಳಿಗೆ ಓವರ್ ಲೋಡ್ ತುಂಬುತ್ತಿರುವುದರಿಂದ ರಸ್ತೆಯೂ ಹಾಳಾಗುತ್ತಿದೆ ಎಂದು ಸ್ಥಳಿಯರು ಟಿಂಬರ್ ಸಾಗಿಸುವವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.