BREAKING NEWS
Search

ಕರಾವಳಿಯಲ್ಲಿ ಅಕಾಲಿಕ ಮಳೆ-ಫಸಲಿಗೆ ಬಂದ ಭತ್ತ ನೀರುಪಾಲು

567

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆ ರೈತರನ್ನು ಸಂಕಷ್ಟಕ್ಕೆ ನೂಕಿದ್ದು, ಜಿಲ್ಲೆಯ ಕರಾವಳಿ ಭಾಗದಲ್ಲಿ ಕೊಯ್ಲಾದ ಭತ್ತದ ಬೆಳೆ ಸಂಪೂರ್ಣ ಮಳೆ ನೀರಿಗೆ ಸಿಕ್ಕಿ ಹಾನಿಯಾಗಿದೆ.
ಇಂದು ಮುಂಜಾನೆ ಹಲವು ಭಾಗದಲ್ಲಿ ಸುರಿದ ಅಕಾಲಿಕ ಮಳೆ, ಶಿರಸಿ, ಸಿದ್ದಾಪುರ ಸೇರಿದಂತೆ ಹಲವೆಡೆ ರೈತರ ಫಸಲನ್ನು ಹಾಳುಗೆಡುವಿದೆ.

ಕರಾವಳಿಯ ಅಂಕೋಲಾ, ಹೊನ್ನಾವರ, ಕುಮಟಾ ಭಾಗದಲ್ಲಿ ಭತ್ತದ ಬೆಳೆ ಬೆಳೆದು ನಿಂತಿದ್ದು ಬಹುತೇಕರು ಕೋಯ್ಲು ಸಹ ಪ್ರಾರಂಭಿಸಿದ್ದರು. ಆದರೆ ಅಕಾಲಿಕ ಮಳೆಯಿಂದಾಗಿ ಎಲ್ಲವೂ ನೀರು ಪಾಲಿಗಿದೆ.

ಗೋಕರ್ಣದ ಗಂಗೆಕೊಳ್ಳದಲ್ಲಿ ರೈತರೊಬ್ಬರು ಎರಡು ದಿನದ ಹಿಂದೆ ಕೊಯ್ದು ಗದ್ದೆಯಲ್ಲಿ ಬಿಟ್ಟಿದ್ದ ಭತ್ತದ ಪೈರು ಸಂಪೂರ್ಣ ಮಳೆ ನೀರಿನಲ್ಲಿ ಮುಳುಗಿ ತೇಲಲಾರಂಭಿಸಿದೆ. ಇದೀಗ ಮಳೆ ಕಡಿಮೆಯಾದ ಕಾರಣ ನೀರಿನಲ್ಲಿರುವ ಪೈರು ರಕ್ಷಣೆಗೆ ಮುಂದಾಗಿರುವ ರೈತರು ಅವುಗಳನ್ನು ನೀರಿನಿಂದ ಮೇಲೆತ್ತಿ ಒಣಗಿಸಲು ಹರಸಾಹಸ ಪಡುತ್ತಿದ್ದಾರೆ. ಕೈಗೆ ಬಂದ ಬೆಳೆ ಕೊನೆ ಗಳಿಗೆಯಲ್ಲಿ ನೀರು ಪಾಲಾಗಿ ಲಕ್ಷಾಂತರ ರೂ ಬೆಳೆ ಹಾನಿಯಾಗಿದೆ.

ಜಿಲ್ಲೆಯ ವಿವಿದೆಡೆ ಸುರಿದ ಮಳೆಯಿಂದಾಗಿ ಅಂದಾಜು 50 ಎಕರೆಗೂ ಹೆಚ್ಚು ಭತ್ತದ ಫಸಲು ನಾಶವಾಗಿರುವ ಕುರಿತು ಕೃಷಿ ಇಲಾಖೆ ಅಂದಾಜಿಸಿದ್ದು ಇದೀಗ ಮಳೆಯಿಂದ ಬೆಳೆ ನಾಶದ ಸರ್ವೆ ಕಾರ್ಯಕ್ಕೆ ಮುಂದಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!