ಕಾರವಾರ :- ಮಹಾರಾಷ್ಟ್ರದಿಂದ ಕಾರವಾರದ ಕದಂಬ ನೌಕಾ ನೆಲೆಗೆ ಹಡಗಿನಲ್ಲಿ ಬಂದ 10 ನೌಕಾ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ದೃಡಪಟ್ಟಿದೆ.
ನಿನ್ನೆ ಮಹಾರಾಷ್ಟ್ರ ದಿಂದ ಕಾರವಾರದ ಅರಗಾ ದಲ್ಲಿ ಇರುವ ಕದಂಬ ನೌಕಾ ನೆಲೆಗೆ ಆಗಮಿಸಿದ್ದ ಯುದ್ದ
ನೌಕೆಯಲ್ಲಿದ್ದ 30 ಕ್ಕೂ ಹೆಚ್ಚು ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಅನ್ನು ಮಾಡಲಾಗಿತ್ತು.
ವರದಿಯಲ್ಲಿ 10 ಜನ ನೌಕಾ ದಳದ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ದೃಡಪಟ್ಟಿದೆ.
ಕೋವಿಡ್ ಪಾಸಿಟಿವ್ ಬಂದ ನೌಕಾ ಸಿಬ್ಬಂದಿಗಳನ್ನು ನೌಕಾ ನೆಲೆಯ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಉಳಿದ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇದರಿಂದ ಸ್ಥಳೀಯ ಜನರಿಗೆ ಯಾವುದೇ ತೊಂದರೆ ಇಲ್ಲ ಎಂದು ಜಿಲ್ಲಾಧಿಕಾರಿ ಮುಲೈ ಮುಹಿಲನ್ ರವರು ಮಾಹಿತಿ ನೀಡಿದ್ದಾರೆ.