BREAKING NEWS
Search

ಶಾಕಿಂಗ್‌ ನ್ಯೂಸ್‌: ಐಸ್ ಕ್ರೀಮ್ ನಲ್ಲಿ ಕೊರೊನಾವೈರಸ್ ಪತ್ತೆ!ಐಸ್ ಕ್ರೀಮ್ ಪ್ರಿಯರೇ ಎಚ್ಚರ.

786

ಕೊರೊನಾವೈರಸ್ ಲಸಿಕೆ ಅಭಿಯಾನ ವು ಭಾರತ ಸೇರಿದಂತೆ ಈಗಾಗಲೇ ಜಗತ್ತಿನ ಅನೇಕ ಭಾಗಗಳಲ್ಲಿ ಆರಂಭವಾಗಿದೆ. ಲಸಿಕೆ ಅಭಿಯಾನದ ನಡುವೆ ಚೀನಾದಿಂದ ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ಚೀನಾದಲ್ಲಿ ಐಸ್ ಕ್ರೀಮ್‌ನಲ್ಲಿ ಕರೋನ ವೈರಸ್‌ ಇರುವುದನ್ನು ಕಂಡು ಹಿಡಿಯಲಾಗಿದೆ. ಪೂರ್ವ ಚೀನಾದಲ್ಲಿ ಉತ್ಪಾದಿಸಲಾದ ಐಸ್ ಕ್ರೀಮ್ ನಲ್ಲಿ ಕರೋನವೈರಸ್ ಪತ್ತೆಯಾಗಿದ್ದು ಈ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

ಈ ಕಂಪನಿಯ ಹಂಚಿಕೆಯಾದ ಐಸ್‌ ಕ್ರೀಮ್‌ ಬಾಕ್ಸ್‌ಗಳನ್ನು ವಾಪಸ್ಸು ಕಳುಹಿಸಲಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಕರೋನ ವೈರಸ್‌ ಇರುವ ಐಸ್‌ ಕ್ರಿಮ್‌ ಅನ್ನು ಟಿಯಾಂಜಿನ್ ಡಾಕಿಯಾವೊ ಫುಡ್ ಕಂಪೆನಿ ಯಿಂದ ತಯಾರಿಸಲಾಗಿದೆ ಎನ್ನಲಾಗಿದೆ.

ಕಂಪನಿಯು ಐಸ್ ಕ್ರೀಂನ 2,089 ಪೆಟ್ಟಿಗೆಗಳನ್ನು ನಾಶಪಡಿಸಿದ್ದು, ಸುಮಾರು 4,836 ಪೆಟ್ಟಿಗೆಗಳು ಕಲುಷಿತಗೊಂಡಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಲೈವ್ಹಿಂಡಿಸ್ತಾನ್ ವರದಿ ಮಾಡಿದೆ.

ಐಸ್ ಕ್ರೀಂ ಖರೀದಿಸಿದ ಗ್ರಾಹಕರ ಆರೋಗ್ಯ ಮಾಹಿತಿಯನ್ನು ನೀಡುವಂತೆ ಮಾರಾಟ ಮಾಡಿರುವ ಷಾಪ್ ಗಳಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ಕೇಳಿದ್ದು, ಈಗ ಐಸ್‌ ಕ್ರಿಮ್‌ ತಿಂದವರರನ್ನು ಪತ್ತೆ ಮಾಡುತ್ತಿದ್ದಾರೆ.

ಇನ್ನು ಟಿಯಾಂಜಿನ್ ಡಾಕಿಯಾವೊ ಫುಡ್ ಕಂಪೆನಿಯ 1,600 ಕ್ಕೂ ಹೆಚ್ಚು ನೌಕರರನ್ನು ಕ್ವಾರೆಂಟೈನ್ ಗೆ ಒಳಪಡಿಸಲಾಗಿದ್ದು, ಕೋವಿಡ್-19 ಗಾಗಿ ಪರೀಕ್ಷಿಸಲಾಗುತ್ತಿದೆ ಎಂದು ಇಂಡಿಪೆಂಡೆಂಟ್ ವರದಿ ಮಾಡಿದೆ.

ಅವರಲ್ಲಿ 700 ಉದ್ಯೋಗಿಗಳ ಪರೀಕ್ಷಾ ಫಲಿತಾಂಶಗಳು ಋಣಾತ್ಮಕವಾಗಿ ಬಂದಿವೆ.

ಐಸ್ ಕ್ರೀಮ್ ನಲ್ಲಿ ಕೊರೊನಾವೈರಸ್ ಶೀತದ ತಾಪಮಾನದಿಂದ ಬದುಕುಳಿದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಸೋಂಕು ತಗುಲಿದ ವ್ಯಕ್ತಿಯ ಮೂಲಕ ಈ ವೈರಸ್ ಐಸ್ ಕ್ರೀಮ್ ಗೆ ತಲುಪಿದೆ ಎಂದು ಅಧಿಕಾರಿಗಳು ಮಾಹಿತಿ ನೋಡಿದ್ದಾರೆ.

ಭಾರತದಲ್ಲೂ ಕೂಡ ಈ ಬಗ್ಗೆ ಎಚ್ಚರ ವಹಿಸಬೇಕಿದ್ದು ಐಸ್ ಕ್ರೀಮ್ ಪ್ರಿಯರು ಎಚ್ಚರದಿಂದ ಇರಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!