ಶಿರಸಿ:ನಗರಸಭೆ ನೀಡುವ ಗೌರವಧನದಿಂದ ಆಶಾ ಕಾರ್ಯಕರ್ತರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಿ ಮಾನವೀಯತೆ ಮೆರೆದ ಸದಸ್ಯರು.

429

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ

ಶಿರಸಿ ನಗರಸಭೆಯ 17 ಮಂದಿ ಬಿಜೆಪಿ ಸದಸ್ಯರು ತಮ್ಮ ಮಾಸಿಕ ಗೌರವಧನವನ್ನು ಕರೋನಾ ರೋಗಿಗಳ ಆರೈಕೆ,ಮಾಹಿತಿ ಸಂಗ್ರಹಿಸುವ ಮೂರು ತಿಂಗಳಿಂದ ಸಂಬಳ ಪಡೆಯದೇ ಸಂಕಷ್ಟದಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಬಳಕೆ ಮಾಡುವ ಮೂಲಕ ಮಾದರಿಯಾಗಿದ್ದಾರೆ.

ಶಿರಸಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ ನೇತೃತ್ವದಲ್ಲಿ ಇತರ ಸದಸ್ಯರು ಗೌರವಧನ ವನ್ನು ಒಗ್ಗೂಡಿಸಿ ಆಶಾ ಕಾರ್ಯಕರ್ತೆಯರಿಗೆ ಆಹಾರ ಪೊಟ್ಟಣ ನೀಡಲು ನಿರ್ಧರಿಸಿದ್ದರು. ಶನಿವಾರ ನಗರಸಭೆ ಆವರಣದಲ್ಲಿ ನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ 26 ಮಂದಿ ಕಾರ್ಯಕರ್ತೆಯರಿಗೆ ಕಿಟ್ ವಿತರಿಸಲಾಯಿತು.

‘ಪ್ರತಿ ಕಿಟ್ ತಲಾ 25 ಕೆಜಿ ಅಕ್ಕಿ, ಬೇಳೆ, ಸಾಂಬಾರ ಪದಾರ್ಥ,ಅಡುಗೆ ಎಣ್ಣೆ, ಸೋಪ್ ಒಳಗೊಂಡಿದೆ. ಮಾಸ್ಕ್, ಸ್ಯಾನಿಟೈಸರ್ ಕೂಡ ವಿತರಿಸಲಾಗಿದೆ’ ಎಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ತಿಳಿಸಿದರು.

‘ಕೋವಿಡ್ ನಿಯಂತ್ರಣಕ್ಕಾಗಿ ನಿರಂತರವಾಗಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರಿಗೆ ನೆರವಾಗುವ ದೃಷ್ಟಿಯಿಂದ ಚುನಾಯಿತರಾದ ಬಿಜೆಪಿ ಸದಸ್ಯರಲ್ಲಿ ವಿನಂತಿಸಲಾಗಿತ್ತು. ಒಟ್ಟಾರೆ ₹80 ಸಾವಿರ ಸಂಗ್ರಹಿಸಿ ಈ ಕಿಟ್ ವಿತರಣೆ ಮಾಡಲಾಗಿದೆ.

ಕೋವಿಡ್‍ನಿಂದ ಮೃತಪಟ್ಟವರ ಶವಸಂಸ್ಕಾರವನ್ನು ಉಚಿತವಾಗಿ ನಡೆಸುತ್ತಿರುವ ಸಾರಿಕಾ ಟ್ರಸ್ಟ್‍ಗೆ ಅಗತ್ಯದಷ್ಟು ಪಿಪಿಇ ಕಿಟ್‍ಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!