BREAKING NEWS
Search

ಜಮಾತ್ ಗೆ ಮಂಡಿಯೂರಿದ ಭಟ್ಕಳ ಶಿಕ್ಷಣ ಇಲಾಖೆ-ಅಧಿಕಾರಿಗಳನ್ನು ಹೊರ ನಿಲ್ಲಿಸಿ ಕಚೇರಿ ವಾಹನ ಸಮೇತ ಜಪ್ತಿ!ಕಾರಣ ಏನು?

1134

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಾಲೂಕು ಶಿಕ್ಷಣಾಧಿಕಾರಿ ಕಚೇರಿಯನ್ನು ಇಂದು ಭಟ್ಕಳ ಜೆ.ಎಮ್.ಎಫ್ ಸಿ ನ್ಯಾಯಾಲಯದ ಆದೇಶದಂತೆ ಜಪ್ತಿ ಮಾಡಲಾಯಿತು.
ಮುಗ್ದುಂಕಾಲೋನಿಯಲ್ಲಿರುವ ಜಮಾತೆ ಮುಸ್ಲಿಮೀನ್ ಸಂಸ್ಥೆಗೆ ಅಲ್ಲಿನ ಕಟ್ಟಡದಲ್ಲಿ ಶಾಲೆ ಯನ್ನು 40 ವರ್ಷಗಳಿಂದ ನಡೆಸಿದರೂ ₹1.50ಲಕ್ಷ ಬಾಡಿಗೆ ನೀಡುವಂತೆ ಭಟ್ಕಳ ಜೆ.ಎಂ.ಎಫ್.ಸಿ ಕೋರ್ಟ ನೀಡಿದ ತೀರ್ಪು ಪಾಲನೆ ಮಾಡದ ಕಾರಣ ಈ ಜಪ್ತಿ ಆದೇಶ ಮಾಡಲಾಗಿದ್ದು ಶಿಕ್ಷಣ ಇಲಾಖೆಯ ಕಛೇರಿಯ ಪೀಠೋಪಕರಣ ಹಾಗೂ ವಾಹನವನ್ನು ಭಟ್ಕಳ ಜೆ.ಎಂ.ಎಫ್ .ಸಿ ನ್ಯಾಯಾಲಯ ಜಪ್ತಿ ಮಾಡಿದೆ.

ಹಿನ್ನಲೆ ಏನು?

ಮುಗ್ದುಂ ಕಾಲೋನಿಯಲ್ಲಿರುವ ಜಮಾತೆ ಮುಸ್ಲಿಂಮಿನ್ ಒಡೆತನದಲ್ಲಿರುವ ಶಾಲೆಯನ್ನು ಶಿಕ್ಷಣ ಇಲಾಖೆ ಕಳೇದ 40 ವರ್ಷಗಳಿಂದ ಬಾಡಿಗೆಗೆ ಪಡೆದು ಶಾಲೆ ನಡೆಸುತ್ತಿದ್ದರು. ಆದರೆ 1972ರಿಂದ ಅದಕ್ಕೆ ಸರಿಯಾಗಿ ಬಾಡಿಗೆ ಪಾವತಿ ಮಾಡಿರಲ್ಲಿಲ್ಲ.

ಈ ಕುರಿತು ಜಮಾತ್ ನಿಂದ 2005 ಬಾಡಿಗೆ ವಸೂಲಿ ಮಾಡಿ ಕೊಡುವಂತೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 2012ರಲ್ಲಿ ತೀರ್ಪು ನೀಡಿ ಪ್ರತಿ ವರ್ಷ ₹8916 ರೂಪಾಯಿ ಬಾಡಿಗೆ ಹಾಗೂ ₹2498 ನಿರ್ವಹಣೆ ವೆಚ್ಚ ಜಮಾತ್ ಅವರಿಗೆ ಪಾವತಿ ಮಾಡುವಂತೆ ಶಿಕ್ಷಣ ಇಲಾಖೆಗೆ ಆದೇಶ ನೀಡಿತ್ತು.

ಆದರೆ ಶಿಕ್ಷಣ ಇಲಾಖೆ ಬಾಡಿಗೆ ಪಾವತಿಗೆ ಯಾವುದೇ ಕ್ರಮ ವಹಿಸಿರಲಿಲ್ಲ. ಇದನ್ನು ಪ್ರಶ್ನಿಸಿ 2019ರಲ್ಲಿ ಜಮಾತ್ ನವರು ಪುನಹಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯ ಆದೇಶ ಪಾಲನೆ ಮಾಡದ ಶಿಕ್ಷಣ ಇಲಾಖೆ ವಿರುದ್ದ ಭಟ್ಕಳ ಜೆ.ಎಂ.ಎಫ್.ಸಿ ನ್ಯಾಯಾಲಯ 2021 ಸೆಪ್ಟಂಬರ ಒಂಬತ್ತರಂದು ಜಪ್ತಿಗೆ ಆದೇಶ ನೀಡಿತ್ತು. ಜಮಾತ್ ಪರ ನ್ಯಾಯವಾದಿ ಆರ್.ಜಿ.ನಾಯ್ಕ ಸರ್ಪನಕಟ್ಟೆ ವಾದ ಮಂಡಿಸಿದ್ದರು.

ಜಿಲ್ಲೆಯಲ್ಲಿ ಇದೇ ಮೊದಲಬಾರಿ ಶಿಕ್ಷಣ ಇಲಾಖೆ ವಸ್ತುಗಳ ಜಪ್ತಿ!

ಶಿಕ್ಷಣ ಇಲಾಖೆ ಅಧಿಕಾರಿಗಳು ಸರಿಯಾದ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ಅಸಡ್ಡೆ ಮಾಡಿದ್ದರು. 2012ರಲ್ಲಿ ಆದೇಶವನ್ನು ನಿರ್ಲಕ್ಷ ಮಾಡಿದ ಪರಿಣಾಮ ಇಂದು ಕಚೇರಿಯ ವಾಹನ ,ಪೀಠೋಪಕರಣ ಹಾಗೂ ಕಂಪ್ಯೂಟರಗನ್ನು ನ್ಯಾಯಾಲಯ ಸಿಬ್ಬಂದಿ ಜಪ್ತಿ ಮಾಡಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!