ಕಾರವಾರ :-ಕರೋನಾ ಎರಡನೇ ಅಲೆ ಹೆಚ್ಚಾದ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಗೋವಾ ಗಡಿಯಲ್ಲಿ ಹಾಗೂ ಜಿಲ್ಲಾ ಗಡಿ ಭಾಗದ ಭಟ್ಕಳದಲ್ಲಿ ಕಟ್ಟೆಚ್ಚರಕ್ಕೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ
ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಎಂ. ಪ್ರಿಯಾಂಗ ರವರು ಜಿಲ್ಲೆಗೆ ಮಹಾರಾಷ್ಟ್ರ ,ಕೇರಳದಿಂದ ಬರುವ ಪ್ರವಾಸಿಗರು ಆರ್.ಟಿ.ಪಿ.ಸಿ.ಆರ್ ಪತ್ರ ಕಡ್ಡಾಯವಾಗಿ ಪಡೆದು ಪ್ರವೇಶಿಸಬೇಕು.
ಗೋವಾ-ಕರ್ನಾಟಕ ಗಡಿ ಭಾಗದ ಮಾಜಾಳಿ, ಅನಮೊಡ್ , ಜಿಲ್ಲಾ ಗಡಿ ಭಾಗದ ಭಟ್ಕಳ ಭಾಗದಲ್ಲಿ ಪೊಲೀಸ್ ಹಾಗೂ ಆರೋಗ್ಯ ಸಿಬ್ಬಂದಿಗಳನ್ನು ನಿಗಾ ಇರಿಸಲು ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದ್ದು ನಾಳೆಯಿಂದ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ಹೊಸ ನಿಯಮ ಜಾರಿ!
ಒಳ ಆವರಣದಲ್ಲಿ ಸಭೆ ಮಾಡುವವರು 200 ಕ್ಕಿಂತ ಹೆಚ್ಚು ಸೇರುವಂತಿಲ್ಲ. ಹೊರ ಭಾಗದಲ್ಲಿ ಬಹಿರಂಗ ಸಭೆ ಮಾಡುವವರು 500 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಇನ್ನುಳಿದಂತೆ ನಿಯಮಗಳು ಎಂದಿನಂತೆ ಇರಲಿದ್ದು ಜಿಲ್ಲಾಧಿಕಾರಿಗಳು ಬದಲಾವಣೆ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿಯ ಮನೆಯ ಸುತ್ತ ಮೈಕ್ರೂ ಕಂಟೈನ್ಮೆಂಟ್ ಝೊನ್ ಮಾಡಲಾಗುತ್ತದೆ. ಅಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಮಾಸ್ಕ್ ಕಡ್ಡಾಯವಾಗಿ ಹಾಕಬೇಕು , ಅಂತರ ಕಾಪಾಡಿಕೊಳ್ಳಬೇಕು, ಹೆಚ್ಚು ಜನ ಸೇರಿದ ಭಾಗದಲ್ಲಿ ಅಂತರ ಕಾಪಾಡಿಕೊಂಡು ನಿಯಮ ಪಾಲಿಸಬೇಕು.
ಉತ್ತರ ಕನ್ನಡ ಜಿಲ್ಲೆಯ ಇಂದಿನ ಕರೋನಾ ಪಾಸಿಟಿವ್ ವಿವರ :-
