BREAKING NEWS
Search

ಕರೋನಾ ದಿಂದ ಗುಣಮುಖರಾದವರಿಗೆ ಗುಡ್ ನ್ಯೂಸ್ ನೀಡಿದ ವಿಜ್ಞಾನಿಗಳು!

861

ಕರೋನಾ ದಿಂದ ಇಡೀ ವಿಶ್ವವೇ ಸಂಕಟದಲ್ಲಿ ನಲುಗಿ ಹೋಗಿತ್ತು. ಇನ್ನು ಕರೋನಾ ಸೋಂಕಿಗೆ ಒಳಗಾಗಿ ಗುಣಮುಖರಾದವರನ್ನು ಹತ್ತಿರ ಸೇರಿಸಲು ಸಹ ಜನ ಭಯ ಪಡುತಿದ್ದರು.

ಆದ್ರೆ ಈಗ ವಿಜ್ಞಾನಿಗಳು ಕರೋನಾ ದಿಂದ ಗುಣಮುಖರಾದವರಿಗೆ ಒಳ್ಳೆಯ ಸುದ್ದಿಯನ್ನು ಅಧ್ಯಯನದ ಮೂಲಕ ನೀಡಿದ್ದಾರೆ.

ಅದು ಏನು ಅಂತೀರಾ ಹಾಗಿದ್ರೆ ಈ ಸ್ಟೋರಿ ಓದಿ. ಕೊರೋನಾ ಸೋಂಕಿನಿಂದ ಗುಣಮುಖರಾಗಿ ಬಂದವರಿಗೆ ಕನಿಷ್ಠ 6 ತಿಂಗಳ ಕಾಲ ಕೊರೋನಾದಿಂದ ರಕ್ಷಣೆ ದೊರೆಯಲಿದೆ ಎಂಬುದಾಗಿ ಅಮೇರಿಕಾ ಸಂಶೋಧಕರು ಅಧ್ಯಯನದ ಮೂಲಕ ತಿಳಿಸಿದ್ದಾರೆ.

ಅಮೇರಿಕಾದ ರಾಕ್ಫೆಲ್ಲರ್ ವಿಶ್ವವಿದ್ಯಾಲಯದ ಸಂಶೋಧಕರು 87 ಕೊರೋನಾ ಪೀಡಿತರನ್ನು ಸಂಶೋಧನೆಗಾಗಿ ಆಯ್ಕೆ ಮಾಡಿಕೊಂಡಿದ್ದು, ಇಂತಹ ಸೋಂಕಿತರು ಸೋಂಕು ಕಾಣಿಸಿಕೊಂಡ 1 ರಿಂದ 6 ತಿಂಗಳ ಬಳಿಕ ಪ್ರತಿಕಾಯ ಪ್ರಕ್ರಿಯೆಯನ್ನು ಆಧರಿಸಿ, ಸಂಶೋಧನಾ ವರದಿಯನ್ನು ಸಿದ್ಧಪಡಿಸಿದ್ದಾರೆ. ಕೊರೋನಾದಿಂದ ಸಂಪೂರ್ಣ ಗುಣಮುಖರಾದವರ ಕರುಳಿನ ಅಂಗಾಂಶಗಳಲ್ಲಿ ವೈರಸ್ ಉಳಿದಿರುತ್ತದೆ.

ಆದ್ರೇ ಸೋಂಕಿನಿಂದ ಗುಣಮುಖರಾದವರ ದೇಹದಲ್ಲಿ ರೋಗನಿರೋಧಕ ಕೋಶಗಳು ಆಂಟಿಬಾಡಿಗಳನ್ನು ಉತ್ಪಾದಿಸುತ್ತಲೇ ಇರುತ್ತವೆ. ಇದರಿಂದಾಗಿ ಕೊರೋನಾದಿಂದ ಗುಣಮುಖರಾದವರು ಸೋಂಕಿನ ವಿರುದ್ಧದ ಶಕ್ತಿಯನ್ನು ಹೊಂದಿರುತ್ತಾರೆ ಎಂಬುದಾಗಿ ತಿಳಿಸಿದ್ದಾರೆ.

ಹೀಗಾಗಿ ಕೊರೋನಾ ಸೋಂಕಿಗೆ ತುತ್ತಾದವರು, ಕೊರೋನಾ ಗುಣಮುಖವಾದ ನಂತರ ಒಂದರಿಂದ ಆರು ತಿಂಗಳವರೆಗೆ ಮತ್ತೆ ಕೊರೋನಾ ಸೋಂಕು ತಗುಲಿದ್ರೂ, ಅಂತಹ ವೈರಸ್ ವಿರುದ್ಧ ದೇಹದಲ್ಲಿರುವಂತ ರೋಗನಿರೋಧಕ ಶಕ್ತಿ ಕೆಲಸ ಮಾಡುತ್ತದೆ.

ಹೀಗಾಗಿ ಇವು ಕೊರೋನಾ ವಿರುದ್ಧ ಹೋರಾಡುತ್ತದೆ. ಈ ಮೂಲಕ ಸೋಂಕಿತರಾಗಿ ಗುಣಮುಖರಾದವರಿಗೆ ಮತ್ತೆ ಕೊರೋನಾ ಬರೋದು ಕಡಿಮೆ ಎಂಬ ಸಂಗತಿಯನ್ನು ಸಂಶೋಧನೆ ಮೂಲಕ ದೃಡಪಡಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!