BREAKING NEWS
Search

ಕರಾವಳಿಯಲ್ಲಿ ಮತ್ತೆ ಚಿಗುರಿದ ಪ್ರವಾಸೋಧ್ಯಮ-ಕಡಲ ತೀರದಲ್ಲಿ ಪ್ರವಾಸಿಗರ ಹಿಂಡು-ಜಿಲ್ಲೆಯಲ್ಲಿ ಯತಾಸ್ಥಿತಿ ಯಲ್ಲಿ ಕರೋನಾ ಪಾಸಿಟಿವ್ ಸಂಖ್ಯೆ

534

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಸೋಂಕಿನ ಸಂಖ್ಯೆ ಗಣನೀಯ ಇಳಿಕೆ ಕಂಡ ಹಿನ್ನಲೆಯಲ್ಲಿ ಕರೋನಾ ನಿಯಮವನ್ನು ಸಡಿಲಿಕೆ ಮಾಡಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ರವರು ಆದೇಶ ಹೊರಡಿಸಿದ್ದಾರೆ.

ಈ ಆದೇಶದ ಪ್ರಕಾರ ಜಿಲ್ಲೆಯ ಎಲ್ಲಾ ಧಾರ್ಮಿಕ ಚಟುವಟಿಕೆಗೆ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿನ ಚಟುವಟಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಇದರ ಜೊತೆಗೆ ಕರಾವಳಿ ಭಾಗದಲ್ಲಿ ಜಲಸಾಹಸ ಕ್ರೀಡೆಗೆ ಮೌಕಿಕ ಅವಕಾಶ ಕಲ್ಪಿದಲಾಗಿದೆ.
ಈ ಹಿನ್ನಲೆಯಲ್ಲಿ ಇದೀಗ ವೀಕೆಂಡ್ ಕಳೆಯಲು ಪ್ರವಾಸಿಗರು ಕರಾವಳಿಯತ್ತ ಮುಖಮಾಡಿದ್ದಾರೆ.

ಸಂಗ್ರಹ ಚಿತ್ರ.

ಕರವಾಳಿಯ ರವೀಂದ್ರನಾಥ ಟಾಗೋರ್ ಕೆಲತೀರ, ಮುರುಡೇಶ್ವರದ ಕಡಲತೀರ, ಗೋಕರ್ಷದ ಓಂ ಬೀಚ್ ,ಕುಡ್ಲೆ ಬೀಚ್ ,ಹೊನ್ನಾವರದ ಇಕೋ ಬೀಚ್ ಕೆಲತೀರದಲ್ಲಿ ಇಂದು ಪ್ರವಾಸಿಗರ ದಂಡು ಹರಿದುಬಂದಿದೆ.

ಇನ್ನು ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ, ಮುರುಡೇಶ್ವರದ ಈಶ್ವರ ದೇವಸ್ಥಾನ, ಶಿರಸಿಯ ಮಾರಿಕಾಂಬಾ ದೇವಸ್ಥಾನ ,ಹೊನ್ನಾವರದ ಇಡಗುಂಜಿ ಗಣಪತಿ ದೇವಸ್ಥಾನಗಳಿಗೆ ಭಕ್ತ ಸಾಗರ ಹರಿದುಬಂದಿದೆ.

ಇಂದಿನ ಚಿತ್ರ.

ಇನ್ನು ಯಲ್ಲಾಪುರ,ದಾಂಡೇಲಿ ಭಾಗಕ್ಕೂ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಹರಿದುಬಂದಿದ್ದು ಕಳೆದ ಆರು ತಿಂಗಳಿಂದ ಸಂಪೂರ್ಣ ನೆಲ ಕಚ್ಚಿದ್ದ ಪ್ರವಾಸೋಧ್ಯಮ ಅಲ್ಪ ಚೇತರಿಕೆ ಕಂಡಿದೆ.

ಇಂದು ಜಿಲ್ಲೆಯ ರೆಸಾರ್ಟ ಗಳು ಹಾಗೂ ವಸತಿ ಗೃಹಗಳು ಬಹುತೇಕ ಫುಲ್ ಆಗಿವೆ. ಜಲಸಾಹಸ ಕ್ರೀಡೆಗೂ ಜನ ಬರುತಿದ್ದು ಅಲ್ಪ ಪ್ರಗತಿ ಕಂಡಿದೆ.

ಉತ್ತರ ಕನ್ನಡ ಜಿಲ್ಲೆಯ ಇಂದಿನ ಕರೋನಾ ಪಾಸಿಟಿವ್ ವಿವರ ಈ ಕೆಳಗಿನಂತಿದೆ:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!