ಕಾರವಾರ:-ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಹಾರ್ನೋಡ ಗ್ರಾಮದಲ್ಲಿ ನಿಧಿಯ ಆಸೆಗಾಗಿ ಪ್ರಾಚೀನ ಕಾಲದ ಶಿವನ ದೇವಾಲಯದ ಮೂರ್ತಿಗಳನ್ನು ದ್ವಂಸ ಮಾಡಿದ ಘಟನೆ ನಡೆದಿದೆ.
ಈ ದೇವಸ್ಥಾನವು ಪ್ರಾಚೀನ ಕಾಲದ್ದಾಗಿದ್ದು ಸುಂದರ ಕಲ್ಲಿನ ಕೆತ್ತನೆ,ಶಿವನ ಲಿಂಗ ವಿಶೇಷವಾಗಿದ್ದು, ಇಡೀ ದೇವಸ್ಥಾನ ಕಲ್ಲಿನಿಂದ ನಿರ್ಮಾಣವಾಗಿತ್ತು.
ದೇವಸ್ಥಾನ ದಟ್ಟ ಅರಣ್ಯದಲ್ಲಿ ಇರುವುದರಿಂದಾಗಿ ಈ ಭಾಗದಲ್ಲಿ ಸಾರ್ವಜನಿಕರ ಓಡಾಟ ಸಹ ಇರುತ್ತಿರಲಿಲ್ಲ. ಇದರ ಲಾಭ ಪಡೆದ ನಿಧಿ ಕಳ್ಳರು ಈಶ್ವರ ಲಿಂಗ್ ಪೀಡವನ್ನು ಕಿತ್ತು ಹಾಳು ಮಾಡಿ ತಳಭಾಗದಲ್ಲಿ ಅಗೆದಿದ್ದಾರೆ. ಇನ್ನು ಈಶ್ವರ ಲಿಂಗಕ್ಕೂ ಘಾಸಿ ಮಾಡಿದ್ದು ಲಿಂಗವು ಎರಡು ತುಂಡಾಗಿದೆ. ಇಲ್ಲಿನ ಕೆಲವು ಮೂರ್ತಿಗಳಿಗೂ ಹಾನಿಮಾಡಿದ್ದಾರೆ.
ಘಟನೆ ನಡೆದಿರುವುದು ಇದೀಗ ಸ್ಥಳೀಯ ಜನರಿಗೆ ತಿಳಿದಿದ್ದು ಸ್ಥಳಕ್ಕೆ ಸ್ಥಳೀಯ ಬಿಜೆಪಿ ಮುಖಂಡ ಸುಧಾಕರರೆಡ್ಡಿ ಆಗಮಿಸಿ ವೀಕ್ಚಿಸಿದ್ದು ಸಂಬಂದಪಟ್ಟ ಇಲಾಖೆಗೂ ಸಹ ಮಾಹಿತಿ ನೀಡಿದ್ದಾರೆ.
ಇನ್ನು ಇಲ್ಲಿನ ದೇವಸ್ಥಾನಗಳ ಬಗ್ಗೆ ಅಧ್ಯಯನ ನೆಡೆಯಬೇಕು, ಈ ರೀತಿಯ ಪುರಾತನ ದೇವಸ್ಥಾನವನ್ನು ಪುರಾತತ್ವ ಇಲಾಖೆ ರಕ್ಷಣೆ ಮಾಡಿ ಜನರಿಗೆ ಇತಿಹಾಸದ ಮಹತ್ವ ಅರಿಯಲು ಇಂತಹ ಪ್ರದೇಶವನ್ನು ಪ್ರವಾಸಿ ಸ್ಥಳವಾಗಿ ಪರಿವರ್ತಿಸಬೇಕು ಎಂದು ಆಗ್ರಹಿಸಿದ್ದಾರೆ.