ದಾಂಡೇಲಿಯಲ್ಲಿ ಪಪ್ಪಾಯಿಯ ಬೀಜದಲ್ಲಿ ಮೂಡಿದ ಗಣಪ!

636

ಕಾರವಾರ :- ಪ್ರಕೃತಿಯಲ್ಲಿ ಅನೇಕ ವಿಚಿತ್ರಗಳು ನಡೆಯುತ್ತಿರುತ್ತವೆ.ಇಂತಹ ವಿಚಿತ್ರಗಳಿಗೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಕುಳಗಿ ರಸ್ತೆಯ ವಿನಾಯಕ್ ಕದಂ ಎಂಬುವವರು ತಮ್ಮ ತೋಟದಲ್ಲಿ ಕಿತ್ತು ತಂದ ಪಪ್ಪಾಯಿ ಹಣ್ಣಿನಲ್ಲಿ ಬೀಜದ ಬದಲಿಗೆ ಗಣಪನ ಆಕಾರದ ಗಡ್ಡೆಯ ರೂಪವೊಂದು ಕಂಡುಬಂದಿದ್ದು ಇದೀಗ ಜನರ ಆಕರ್ಷಣೀಯತೆಯನ್ನು ಪಡೆದುಕೊಂಡಿದೆ.

ವಿನಾಯಕ್ ಕದಂ ಅವರು ಹಳಿಯಾಳದ ಹಂಪಿಹಳ್ಳಿಯ ತಮ್ಮ ತೋಟದಿಂದ ಪಪ್ಪಾಯಿ ಹಣ್ಣನ್ನು ಕಿತ್ತು ತಂದಿದ್ದು ತಿನ್ನಲು ಚಾಕುವಿನಿಂದ ಕಟ್ ಮಾಡಿದಾಗ ಒಳಭಾಗದಲ್ಲಿ ಬೀಜದ ಬದಲಿಗೆ ಗೆಡ್ಡೆಯಂತಹ ವಸ್ತುವು ಗೋಚರಿಸಿದೆ. ಇದನ್ನು ತೆಗೆದು ನೋಡಿದಾಗ ಗಣೇಶನ ಆಕೃತಿಯಂತೆ ಇದ್ದು ಸುಂಡಲು ಮುಖ ಇದರಲ್ಲಿ ಮೂಡಿದೆ. ಇನ್ನೇನು ಗಣೇಶ ಚತುರ್ಥಿ ಸಮೀಪವಿರುವಾಗಲೇ ಈ ರೀತಿಯ ವಿಚಿತ್ರ ಘಟನೆ ನಡೆದಿದ್ದು ಅವರನ್ನು ಆಶ್ಚರ್ಯ ಗೊಳಿಸಿದೆ. ಇದೀಗ ಈ ಹಣ್ಣಿನಲ್ಲಿ ಮೂಡಿದ ಗಣಪ ಎಲ್ಲರ ಆಕರ್ಷಣೀಯ ಕೇಂದ್ರವಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!