BREAKING NEWS
Search

Karwar|ಘೋಷಣೆ ಜಟಾಪಟಿ ನೊಂದುಕೊಂಡ ಸತೀಶ್ ಸೈಲ್ |ಸಮಾಧಾನ ಪಡಿಸಿದ ರೂಪಾಲಿ ನಾಯ್ಕ!

78

ಕಾರವಾರ :- ಮಂಗಳೂರಿನಿಂದ ಗೋವಾದ ಮಡಗಾವ್ ಗೆ ತೆರಳುವ ಒಂದೇ ಭಾರತ್ ರೈಲಿಗೆ ಕಾರವಾರದ ರೈಲ್ವೇ ನಿಲ್ದಾಣದಲ್ಲಿ ಇಲಾಖೆ ವತಿಯಿಂದ ಕಾಂಗ್ರೆಸ್ ನ ಹಾಲಿ ಕಾರವಾರ ಶಾಸಕ ಸತೀಶ್ ಹಸಿರು ನಿಶಾನೆ ತೋರುವ ಕಾರ್ಯಕ್ರಮದಲ್ಲಿ ಹಾಲಿ ಮಾಜಿ ಶಾಸಕರ ಕಾರ್ಯಕರ್ತರ ಘೋಷಣೆ ಜಟಾಪಟಿ ನಡೆದು ಕೆಲವು ಸಮಯ ಗೊಂದಲ ವಾತಾವರಣ ನಿರ್ಮಾಣವಾಗಿತ್ತು.

ಕಾರವಾರ ಶಾಸಕ ಸತೀಶ್ ಸೈಲ್ ತನ್ನ ಕೆಲವು ಬರಂಬಲಿಗರೊಂದಿಗೆ ಒಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಲು ಆಗಮಿಸಿದ್ದರು.ಇದೇ ಸಂದರ್ಭದಲ್ಲಿ ಮಾಜಿ ಶಾಸಕಿ ರೂಪಾಲಿ ನಾಯ್ಕ ಸಹ ಆಗಮಿಸಿದ್ದು ಅವರೊಂದಿಗೆ ಬಿಜೆಪಿಯ ಅತೀ ಹೆಚ್ಚು ಕಾರ್ಯಕರ್ತರು ಆಗಮಿಸಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಸತೀಶ್ ಸೈಲ್ ಗೆ ಜಯಕಾರ ಕೂಗಿದ್ರೆ ಬಿಜೆಪಿ ಕಾರ್ಯಕರ್ತರು ರೂಪಾಲಿ ನಾಯ್ಕ ಹಾಗೂ ಮೋದಿಗೆ ಜಯಕಾರ ಕೂಗಿದರು. ಈ ಸಂದರ್ಭದಲ್ಲಿ ಕೆಲವು ಸಮಯ ಗೊಂದಲ ವಾತಾವರಣ ನಿರ್ಮಾಣವಾಯಿತು.

ಇದನ್ನೂ ಓದಿ:- BJP ರಾಜ್ಯ ಉಪಾಧ್ಯಕ್ಷರಾಗಿ ರೂಪಾಲಿನಾಯ್ಕ,ಹರತಾಳು ಹಾಲಪ್ಪ ಆಯ್ಕೆ

ಇನ್ನು ಇದು ಪಕ್ಷದ ಕಾರ್ಯಕ್ರಮ ಅಲ್ಲ,ಸಾರ್ವಜನಿಕರ ಹಣದಿಂದ ಕೇಂದ್ರ ಸರ್ಕಾರ ಒಂದೇ ಭಾರತ್ ರೈಲನ್ನು ಬಿಟ್ಟಿದೆ ಇದು ಖುಷಿಯ ವಿಚಾರ ಆದ್ರೆ ಸರ್ಕಾರಿ ಕಾರ್ಯಕ್ರಮ ಪಕ್ಷದ ಕಾರ್ಯಕ್ರಮವಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದ ಶಾಸಕ ಸತೀಶ್ ಸೈಲ್ ಈ ರೀತಿಯ ಘಟನೆ ನಡೆದಿರುವುದಕ್ಕೆ ಬೇಸರ ವ್ಯಕ್ತಪಡಿಸಿ ಆಹ್ವಾನಿಸಿದ್ದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ್ರು.
ಇನ್ನು ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಕೂಗುತ್ತಾ ರೂಪಾಲಿ ನಾಯ್ಕಗೆ ಜಯಕಾರ ಹಾಕುವುದನ್ನು ನಿಲ್ಲಿಸಲು ಕುದ್ದು ಮಾಜಿ ಶಾಸಕಿ ಡೆಯಾಸ್ ಮೇಲೆ ಏರಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿ ಇದು ಸರ್ಕಾರಿ ಕಾರ್ಯಕ್ರಮ ಯಾರೂ ಕೂಡ ಜಯಕಾರ ಹಾಕುವುದು ಬೇಡ ಎಂದು ಮನವಿ ಮಾಡಿದರು. ಇದರ ನಂತರ ಘೋಷಣೆಯ ಮುಖಾಮುಖಿ ಅಲ್ಪ ಕಡಿಮೆಯಾಯಿತು.

ನಂತರ ಶಾಸಕ ಸತೀಶ್ ಸೈಲ್ ರೈಲಿಗೆ ಹಸಿರು ನಿಶಾನೆ ತೋರಿ ಬೇಸರದಿಂದ ಮರಳಿದ್ರೆ, ಮಾಜಿ ಶಾಸಕಿ ಕೂಡ ತಮ್ಮಪಾಟಿಗೆ ತೆರಳುವ ಮೂಲಕ ಪೊಲೀಸರ ತಲೆನೋವು ತಪ್ಪಿಸಿದ್ರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!