ಕಾರವಾರ:- ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ಇದರ ಪರಿಣಾಮ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಆರ್ಥಿಕತೆಯ ಬೆನ್ನೆಲುಬಾಗಿರುವ ಮೀನುಗಾರರ ಮೇಲೆ ದೊಡ್ಡ ಪರಿಣಾಮ ಬಿದ್ದಿದೆ.
ಕೇಂದ್ರ ಸರ್ಕಾರದ ಬಜೆಟ್ ನಿಂದ ಡಿಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಇಂದು ಜಿಲ್ಲೆಯಲ್ಲಿ 86.07₹ ಏರಿಕೆ ಕಂಡಿದೆ.
ಇದರ ಬೆನ್ನಲ್ಲೇ ಕಾರವಾರದ ಬೈತಕೋಲಿನ ಪರ್ಷಿಯನ್ ಬೋಟಿನ ಮೀನುಗಾರರು ,ಡಿಸೆಲ್ ಹಾಕಿಸಲು ಕಷ್ಟಸಾಧ್ಯವಾಗುತ್ತಿರುವುದರಿಂದ ಇಂದಿನಿಂದ ಹಲವು ಬೋಟುಗಳು ಮೀನುಗಾರಿಗೆ ಸ್ಥಗಿತ ಗೊಳಿಸಿದೆ.

ಮಿನುಗಾರರಿಗೆ ಸಬ್ಸಿಡಿ ಆಧಾರದಲ್ಲಿ ಡಿಸೆಲ್ ನೀಡಲಾಗುತ್ತದೆ. ಪ್ರತಿ ಒಂದು ಪರ್ಷಿಯನ್ ಬೋಟ್ ಗೆ ಒಂದು ಲಕ್ಷ ರುಪಾಯಿ ಮೌಲ್ಯದ ಡೀಸೆಲ್ ಬೇಕಾಗುತ್ತದೆ. ಇನ್ನು ಈ ಡೀಸಲ್ ಗೆ 8 ರಿಂದ 10₹ಸಬ್ಸಿಡಿ(ದರ ಏರಿಕೆ ಆದಂತೆ ಹೆಚ್ಚು ನೀಡಲಾಗುತ್ತದೆ.) ರಾಜ್ಯ ಸರ್ಕಾರದಿಂದ ಸಿಗುತ್ತದೆ.
ಈ ಹಿಂದೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರೆಡು ಸಬ್ಸಿಡಿ ನೀಡುತಿತ್ತು. ಆದರೇ ಕೇಂದ್ರ ಸರ್ಕಾರ ಸಬ್ಸಿಡಿ ನೀಡುವುದನ್ನು ನಿಲ್ಲಿಸಿದೆ. ಹೀಗಾಗಿ ಮೀನುಗಾರರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ಹಿಂದೆ ಕರೋನಾ ದಿಂದ ಆರು ತಿಂಗಳು ಮೀನುಗಾರರು ಆರ್ಥಿಕವಾಗಿ ಕುಸಿದು ಹೋಗಿದ್ದರು.ಸದ್ಯ ಕಳೆದ ಮೂರು ತಿಂಗಳಿಂದ ಚೇತರಿಕೆ ಕಾಣುತಿದ್ದರು. ಇನ್ನು ಲಕ್ಷಗಟ್ಟಲೇ ಸಾಲ ಮಾಡಿ ಮೀನುಗಾರಿಕೆ ಪ್ರಾರಂಭಿಸಿದ್ರು.
ಆದರೇ ಈಗಿನ ಡೀಸೆಲ್ ಬೆಲೆ ಏರಿಕೆ ಕರೋನಾದಿಂದ ನಲುಗಿದ ಇವರಿಗೆ ಬರೆ ಎಳೆದಿದೆ.ಇದರ ಪರಿಣಾಮ ಮೂರು ತಿಂಗಳ ಮುಂಚಿತವಾಗಿ ಬೋಟ್ ಗಳನ್ನು ಬಂದ್ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಬಜೆಟ್ ನಂತರದಲ್ಲಿ 20 ಕೊಟಿಗೂ ಹೆಚ್ಚು ನಷ್ಟವಾಗಿದೆ ಎಂದು ಉ.ಕ ಜಿಲ್ಲಾ ಮೀನುಗಾರಿಕಾ ಪೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್ ರವರು ಮಾಹಿತಿ ನೀಡಿದ್ದಾರೆ. ಡೀಸೆಲ್ ಹೆಚ್ಚಾದ್ದರಿಂದ ಮೀನಿನ ವಾಹನಕ್ಕೆ ಹೆಚ್ಚು ಹಣ ವ್ಯಯವಾಗುತ್ತಿದೆ,ಇದರಿಂದ ಮೀನಿನ ದರ ಇಳಿಕೆ ಕಂಡಿದೆ.
ಹೀಗೆ ಮುಂದುವರೆದರೆ ಮೀನುಗಾರರಿಗೆ ದೊಡ್ಡ ಹೊಡೆತ ಬೀಳಲಿದೆ.
ಹೀಗಾಗಿ ಶೀಘ್ರದಲ್ಲಿ ಪೆಡರೇಷನ್ ಮೂಲಕ ಠರಾವು ಮಾಡಿ ಡೀಸೆಲ್ ಸಬ್ಸಿಡಿ ಹೆಚ್ಚಳ ಮಾಡುವಂತೆ ಹಾಗೂ ಕೇಂದ್ರ ಸರ್ಕಾರ ನಿಲ್ಲಿಸಿರುವ ಸಬ್ಸಿಡಿ ಪುನಹಾ ಪ್ರಾರಂಭಿಸುವಂತೆ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಸದ್ಯ ಕಾರವಾರದ ಬಂದರಿನಲ್ಲಿ ಮೀನುಗಾರಿಕೆಗೆ ಡೀಸೆಲ್ ದರ ಏರಿಕೆ ದೊಡ್ಡ ಹೊಡೆತ ನೀಡಿದೆ.ಇದರಿಂದ ಮಿನುಗಾರರು ಆರ್ಥಿಕವಾಗಿ ಮತ್ತಷ್ಟು ನಷ್ಟ ಅನುಭವಿಸುತಿದ್ದಾರೆ. ಹೀಗೆ ಮುಂದುವರೆದರೆ ಕರಾವಳಿ ಭಾಗದ ಆರ್ಥಿಕ ಚಟುವಟಿಕೆ ಮೇಲೆ ಪರಿಣಾಮ ಬೀರುವ ಜೊತೆ ಇದನ್ನು ನಂಬಿದ ಮೀನುಗಾರಿಕಾ ಕಾರ್ಮಿಕರು ಉದ್ಯೋಗ ವಂಚಿತರಾಗಲಿದ್ದಾರೆ.