ಕಾರವಾರ :-ಲಕ್ಷ ದ್ವೀಪದಲ್ಲಿ ಹವಾಮಾನ ವೈಪರಿತ್ಯದಿಂದ ಕಳಚಿ ತೇಲಿ ಹೋಗಿದ್ದ ಹವಾಮಾನ ಸಂಶೋಧನಾ ಯಂತ್ರವನ್ನು ಕಾರವಾರದ ಮೀನುಗಾರರು ಮಹಾರಾಷ್ಟ್ರದ ಮಾಲ್ವಾನ್ ನಲ್ಲಿ ಪತ್ತೆಹಚ್ಚಿ ಕಾರವಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಅಕ್ಟೋಬರ್ 2 ರಂದು ಲಕ್ಷದ್ವೀಪದ ಸಮುದ್ರದಲ್ಲಿ ಗಾಳಿ ಮತ್ತು ಮಳೆಯಿಂದಾಗಿ ಕಳಚಿಕೊಂಡಿದ್ದ ಚನೈ ನ ಸಾಗರ ವಿಜ್ಞಾನ ಕೇಂದ್ರದ ಹವಾಮಾನ ಸಂಶೋಧನಾ ಯಂತ್ರ (ಬಾಯ್) ಹತ್ತು ದಿನದಲ್ಲಿ ಏಳನೂರು ಕಿಲೋಮೀಟರ್ ಸಮುದ್ರದಲ್ಲಿ ಕ್ರಮಿಸಿದ್ದು,ಉತ್ತರ ಕನ್ನಡ ಜಿಲ್ಲೆಯ ಅರಬ್ಬಿ ಸಮುದ್ರದ ನೇತ್ರಾಣಿ ,ಧಾರೇಶ್ವರ ಕಡಲಲ್ಲಿ ತೇಲಿ ನಂತರ ಮಹಾರಾಷ್ಟ್ರದ ಬಳಿ ತೇಲಿ ಹೋಗಿದೆ.
ದೇಶದಲ್ಲಿ ಒಟ್ಟು 12 ಹವಾಮಾನ ಸಂಶೋಧನಾ ಯಂತ್ರ(ಬಾಯ್ )ವನ್ನು ಅಳವಡಿಸಲಾಗಿದ್ದು ,
ಈ ಯಂತ್ರ ಕೋಟ್ಯಾಂತರ ರುಪಾಯಿ ಬೆಲೆಬಾಳುವ ಜೊತೆ ಹಲವು ಸಂಶೋಧನೆಗಳಿಗೆ ಸಹಕಾರಿಯಾಗಿವೆ.

ಹೀಗಿರುವಾಗ ಲಕ್ಷ ದ್ವೀಪದಲ್ಲಿ ಅಳವಡಿಸಿರುವ ಬಾಯ್ ಕಾಣೆಯಾಗಿ ಆತಂಕ ಮೂಡಿಸಿತ್ತು. ಇದೀಗ ಇದನ್ನು ಪತ್ತೆಮಾಡಿ ಕಾರವಾರದ ಸಾಗರ ವಿಜ್ಞಾನ ಕೇಂದ್ರಕ್ಕೆ ರವಾನೆ ಮಾಡಲಾಗಿದ್ದು ನಾಳೆ ಚೆನೈ ಸಂಶೋಧನಾ ಕೇಂದ್ರಕ್ಕೆ ರವಾನೆ ಮಾಡಲಾಗುತ್ತದೆ.
ಎಂದು ಕಡಲ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಜಗ್ನಾಥ್ ರಾಥೋಡ್ ಮಾಹಿತಿ ನೀಡಿದ್ದಾರೆ.