Bhatkal:ಪ್ಯಾಲಿಸ್ತೇನ್ ಮೇಲೆ ಇಸ್ರೇಲ್ ದಾಳಿ ಖಂಡಿಸಿ IPL ಮಾದರಿ Muslim ಕ್ರಿಕೇಟ್ ಪಂಧ್ಯಾವಳಿ ರದ್ದು!

100

ಕಾರವಾರ :- ಪ್ಯಾಲಿಸ್ತೇನ್ (palestine )ಮೇಲೆ ಇಸ್ರೇಲ್ (ISRAEL)ದಾಳಿ ಖಂಡಿಸಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ IPL ಮಾದರಿಯಲ್ಲಿ ನಡೆಯುತ್ತಿರುವ ಕ್ರಿಕೇಟ್ ಲೀಗ್ ಪಂದ್ಯಾವಳಿ( Cricket League tournament) ರದ್ದು ಮಾಡಿದೆ. ಇದರ ಜೊತೆಗೆ ಯುದ್ಧ ಮುಗಿಯುವ ವರೆಗೆ ಭಟ್ಕಳದ ಮುಸ್ಲೀಮರಿಗೆ ಮದುವೆ ,ಮನೋರಂಜನೆ ಖರ್ಚಿಗೆ ಮಿತಿ ಹೇರುವಂತೆ ಮುಸ್ಲೀಮ್ ಯೂಥ್ ಫೆಡರೇಶನ್ ಕರೆಕೊಟ್ಟಿದೆ.
ಈ ಕುರಿತು ಭಟ್ಕಳದಲ್ಲಿ ಮುಸ್ಲೀಮ್ ಯೂಥ್ ಫೆಡರೇಶನ್ ನ ಅಧ್ಯಕ್ಷ ಆಝೀಜ್ ಉರ್ರೆಹಮಾನ್ ಪತ್ರಿಕಾ ಹೇಳಿಕೆ ನೀಡಿದ್ದು ಪ್ಯಾಲಿಸ್ತೇನ್ ನಲ್ಲಿ ಇಸ್ರೇಲ್ ನಲ್ಲಿ ನಮ್ಮ ಸಹೋದರ ಮುಸ್ಲೀಮರನ್ನು ಹತ್ಯೆ ಮಾಡುತಿದ್ದಾರೆ.

ಈ ದುಃಖದ ಸಂದರ್ಭದಲ್ಲಿ ನಾವು ಮೋಜು ಮಾಡುವುದು ಸರಿಯಲ್ಲ,ಅವರಿಗೆ ಸಹಾಯ ಮಾಡಬೇಕಿದೆ ಎಂದು ಅವರು ಹೇಳಿದ್ದು ಭಟ್ಕಳದಲ್ಲಿ ಮುಸ್ಲೀಮರು ಮದುವೆ,ಮನೋರಂಜನೆಗೆ ಕರ್ಚು ಮಾಡುವುದನ್ನು ಕಡಿಮೆ ಮಾಡಿ ಅವರಿಗೆ ಸಹಾಯ ಮಾಡಬೇಕೆಂದು ಕೇಳಿಕೊಂಡಿದ್ದಾರೆ.

ಭಟ್ಕಳದಲ್ಲಿ ಪ್ರತಿ ವರ್ಷ IPL ಮಾದರಿಯಲ್ಲಿ ಕ್ರಿಕೇಟ್ ಪಂಧ್ಯಾವಳಿಯನ್ನು ಮುಸ್ಲೀಮ್ ಯೂಥ್ ಪೆಡರೇಷನ್ ಆಯೋಜನೆ ಮಾಡಿಕೊಂಡು ಬರುತ್ತಿದೆ.

ನವಂಬರ್ 3 ರಿಂದ ಒಂದು ತಿಂಗಳ ಕಾಲ ಐ.ಪಿ.ಎಲ್ ಮಾದರಿಯಲ್ಲಿ ನಡೆಯಬೇಕಿದ್ದ ಅವುಝ ಭಟ್ಕಳ ಕ್ರಿಕೆಟ್ ಲೀಗ್ -5 ಪಂಧ್ಯಾವಳಿಗಾಗಿ ಕಳೆದ ತಿಂಗಳು 200 ಆಟಗಾರರನ್ನು ತಾಲೂಕಿನಲ್ಲಿ ಗುರುತಿಸಿ ಹರಾಜು ಹಾಕಿ 12 ತಂಡ ವನ್ನು ಮುಸ್ಲೀಮ್ ಯೂಥ್ ಫೆಡರೇಶನ್ ಆಯ್ಕೆ ಮಾಡಿತ್ತು.ಇದಕ್ಕಾಗಿ ಭಟ್ಕಳ ತಾಲೂಕು ಕ್ರೀಡಾಂಗಣವನ್ನು ಆಯ್ಕೆ ಮಾಡಿ ಸಕಲ ಸಿದ್ದತೆ ಮಾಡಿಕೊಂಡಿತ್ತು.

ಆದ್ರೆ ಇದೀಗ ಇಸ್ರೇಲ್ ದಾಳಿ ಖಂಡಿಸಿ ಈ ಪಂಧ್ಯಾವಳಿಯನ್ನು ರದ್ದುಮಾಡಿದ್ದು ಪ್ಯಾಲಿಸ್ತೇನ್ ಪರ ನಿಂತಿದೆ. ಹೀಗಾಗಿ ಪ್ಯಾಲಿಸ್ತೇನ್ ಮುಸ್ಲಿಂ ಜನರಿಗೆ ಸಹಾಯ ಮಾಡಲು ಭಟ್ಕಳದ ಮುಸ್ಲೀಮರು ಸಿದ್ದವಾಗಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!