BREAKING NEWS
Search

guarantee scheme side effect:ಉತ್ತರ ಕನ್ನಡ ಜಿಲ್ಲೆಯ ಸಿದ್ದಿಗಳಿಗೆ ಸಿಗದ ಆರು ತಿಂಗಳ ಪೌಷ್ಟಿಕ ಆಹಾರದ ರೇಷನ್!

109

ಕಾರವಾರ: ರಾಜ್ಯ ಸರ್ಕಾರ ತಮ್ಮ ಗ್ಯಾರಂಟಿ ಯೋಜನೆ ( guarantee scheme)ಯನ್ನು ಅನುಷ್ಟಾನ ಮಾಡಲು ಹಣದ ಸಂಗ್ರಹದಲ್ಲಿ ತೊಡಗಿದೆ. ಇದರ ಜೊತೆಗೆ ದರಗಳನ್ನು ಸಹ ಹೆಚ್ಚಳ ಮಾಡಿದೆ.ಆದ್ರೆ ಗ್ಯಾರಂಟಿ ನೀಡುವ ಬರದಲ್ಲಿ ಬೆವರ ಹೊಟ್ಟೆಗೆ ಬರ ಎಳೆಯುತ್ತಿದೆಯೇ ಸರ್ಕಾರ ಎನ್ನುವ ಪ್ರಶ್ನೆಗೆ ಇದೀಗ ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಜನಾಂಗದವರಿಗೆ ವಿಶೇಷ ಗಿರಿಜನ ಯೋಜನೆಯಡಿ ಪೌಷ್ಟಿಕ ಆಹಾರ ವನ್ನು ಆರು ತಿಂಗಳಿಂದ ನೀಡದೇ ಅಲಕ್ಷಿಸಿದೆ.

ಈ ಕುರಿತು ಕರ್ನಾಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘ ರಾಜ್ಯಾಧ್ಯಕ್ಷ ಬೆನೆತ್ ಸಿದ್ದಿ ಆರೋಪಿಸಿದ್ದಾರೆ.

ಕಾರವಾರದ ಪತ್ರಿಕಾಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು 2011 ರಿಂದ ವರ್ಷದ ಪ್ರತಿ ಆರು ತಿಂಗಳು ಗಿರಿಜನರಿಗೆ ಪೌಷ್ಟಿಕ ಆಹಾರ ಕೊಡುವ ಯೋಜನೆ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಾರಂಭವಾಗಿತ್ತು. ಜೂನ್ ನಿಂದ ಡಿಸೆಂಬರ್ ತನಕ ಪ್ರತಿ ತಿಂಗಳು ಜಿಲ್ಲೆಯ ಆರು ಸಾವಿರ ಸಿದ್ದಿ ಬುಡಕಟ್ಟು ಜನಾಂಗಕ್ಕೆ ಪೌಷ್ಟಿಕ ಆಹಾರ ತಲುಪುತ್ತಿತ್ತು. ಆದರೆ 2023 ಜೂನ್ ಜುಲೈ ತಿಂಗಳಿಂದ ಪೌಷ್ಟಿಕ ಆಹಾರ ಸರಬರಾಜಾಗಿಲ್ಲ. ಅಧಿಕಾರಿಗಳು ಆಹಾರ ಸರಬರಾಜಿಗೆ ಟೆಂಡರ್ ಆಗಿಲ್ಲ ಎನ್ನುತ್ತಿದ್ದಾರೆ. ಇದೇ ಮೊದಲ ಬಾರಿಗೆ ಈ ಸಮಸ್ಯೆ ಉಂಟಾಗಿದೆ ಎಂದು ಬೆನತ್ ಸಿದ್ದಿ ಹೇಳಿದರು.

ಪೌಷ್ಟಿಕ ಆಹಾರ ಬಾರದೆ ಆರು ತಿಂಗಳು ತಡವಾಗಿದೆ. ಈ ಸಲ ಮಳೆ ಸರಿಯಾಗಿ ಬಂದಿಲ್ಲ. ಕಾಡಿನ ವಾಸಿಗಳಾದ ನಮಗೆ ಕೂಲಿ ಸಹ ಸಿಕ್ಕಿಲ್ಲ ಎಂದರು.

ಮಳೆಗಾಲದಲ್ಲಿ ಪೌಷ್ಟಿಕ ಆಹಾರದ ಅವಶ್ಯಕತೆ ಇದೆ. ಈ ಬಾರಿ ನಮ್ಮ ಬುಡಕಟ್ಟು ಜನರು ಉಪವಾಸ ಇರುವಂತಾಗಿದೆ. ಪೌಷ್ಟಿಕ ಆಹಾರ ಸಿಗದಿದ್ದರೆ, ಡಿಸೆಂಬರ್ ನಲ್ಲಿ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಸಿದ್ದಿ ಸಮುದಾಯದ ಗೌರವಾಧ್ಯಕ್ಷ ಜಾನ್ ಕೆ. ಸಿದ್ದಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:- uttrakannada ಬಿಜೆಪಿ ಟಿಕೆಟ್ ಆಕಾಂಕ್ಷಿ ಪಟ್ಟಿಯಲ್ಲಿ ಜೆಡಿಎಸ್ ಇಬ್ಬರು ನಾಯಕರು?(ಅಕ್ಷರದ ಮೇಲೆ ಕ್ಲಿಕ್ ಮಾಡಿ)

ಗಿರಿಜನ ಯೋಜನೆ ಅಡಿ, 6000 ಸಿದ್ದಿ ಕುಟುಂಬಗಳಿಗೆ 8 ಕೆಜಿ ಅಕ್ಕಿ, 30 ಕೊಳಿ ಮೊಟ್ಟೆ, 6 ಕೆಜಿ ಬೇಳೆ ಕಾಳು,‌ ಒಂದು ಲೀಟರ್ ನ ಎರಡು ಪ್ಯಾಕೆಟ್ ಅಡುಗೆ ಎಣ್ಣೆ, ಅರ್ಧ ಕೆ.ಜಿ. ತುಪ್ಪ ವಿತರಿಸುತ್ತಿದ್ದರು. ಈ ಬಾರಿ ಟೆಂಡರ್ ಆಗಿಲ್ಲ ಎಂಬ ನೆಪ ಅಧಿಕಾರಿಗಳು ಹೇಳುತ್ತಿದ್ದಾರೆ. ‌ಇದರಿಂದ ಬುಡಕಟ್ಟು ಜನಾಂಗಕ್ಕೆ ತೊಂದರೆಯಾಗಿದೆ‌. ಈ ಸಂಬಂಧ ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಅಧಿಕಾರಿಗೆ ಸೋಮವಾರ ಮನವಿ ನೀಡಿದ್ದೇವೆ ಎಂದು ಬೆನೆತ್ ಸಿದ್ದಿ ವಿವರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಸಹ ಈ ಸಮಸ್ಯೆ ತರಲಾಗಿದೆ. ಸಮಸ್ಯೆ ಬಗೆ ಹರಿಯುವ ವಿಶ್ವಾಸ ಇದೆ ಎಂದು ಸಿದ್ದಿ ಬುಡಕಟ್ಟು ಸಮುದಾಯದ ಮುಖಂಡರು ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಸಿದ್ದಿಗಳು ಎಸ್ ಟಿ ಜನಾಂಗದಡಿ ಬರುತ್ತಾರೆ. ಗಿರಿಜನ ಪೌಷ್ಟಿಕ ಆಹಾರ ಸೌಲಭ್ಯದ ಯೋಜನೆ ಬೆಳಗಾವಿ, ಧಾರವಾಡ ಜಿಲ್ಲೆಯ ಸಿದ್ದಿ ಕುಟುಂಬಗಳಿಗೆ ಸಿಗುತ್ತಿಲ್ಲ ಎಂದು ಸಿದ್ದಿ ಬುಡಕಟ್ಟು ಜನಪರ ಸಂಘದ ಅಧ್ಯಕ್ಷ ಬೆನೆತ್ ಸಿದ್ದಿ ಹೇಳಿದರು.

ಇದನ್ನೂ ಓದಿ:- ಕರಾವಳಿ ಮುಂಜಾವಿನ ಹಿರೇಗುತ್ತಿ “ನನ್ನ ಪಟ ಹರಿಯದಿರಲಿ”? ಅಹಾಂಕಾರಿ ಪತ್ರಿಕಾ ಮಾಲೀಕನ ಸುತ್ತ ಹಲವು ಪ್ರಶ್ನೆಗಳು?( ಅಕ್ಷರದ ಮೇಲೆ ಕ್ಲಿಕ್ ಮಾಡಿ)

ಥೆರೇಜಾ, ಫಾತಿಮಾ, ಬಸ್ಯ್ಯಾವ್ ಸಿದ್ದಿ ಮುಂತಾದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸಧ್ಯ ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಹಣದ ಕೊರತೆ ಇದೆ ಎಂಬುದಕ್ಕೆ ಬಡವರ ಪಾಲಿಗೆ ಅನ್ನದ ಮೂಲವಾದ ಯೋಜನೆಗೆ ಕತ್ತರಿಹಾಕಲು ಸರ್ಕಾರ ಮುಂದಾಗಿದೆ ಎಂಬ ಆರೋಪ ಇದೀಗ ಕೇಳಿಬರುತ್ತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!