ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಏನು ನಿಯಮ| ಜಿಲ್ಲಾಧಿಕಾರಿ ಹೇಳಿದ್ದೇನು?

262

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ನಾಲ್ಕನೇ ಅಲೆಗೆ ಸಂಬಂಧಿಸಿದಂತೆ ಇಂದು ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯಾಧಿಕಾರಿಗಳು ಒಳಗೊಂಡಂತೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿಯವರು ಸಭೆ ನಡೆಸಿದರು.(DC UTTARAKANNADA)

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ರಾಜ್ಯಸರ್ಕಾರದ ನಿಯಮದಂತೆ ಜಿಲ್ಕೆಯಲ್ಲೂ ಇದೇ ನಿಯಮವನ್ನು ಜಾರಿಮಾಡಲಾಗಿದ್ದು ಸದ್ಯ ಜಿಲ್ಲೆಗೆ ಎಷ್ಟು ಜನ ಪ್ರವಾಸಿಗರು ಆಗಮಿಸಿದ್ದಾರೆ ಎಂಬ ಮಾಹಿತಿ ಇಲ್ಲ. ಆದರೇ ಈಗಾಗಲೇ ರೆಸಾರ್ಟ ,ಹೋಟಲ್ ,ಹೋಮ್ ಸ್ಟೇಗಳಿಗೆ ಕರೋನಾ ನಿಯಮ ಪಾಲಿಸುವಂತೆ ಸೂಚನೆ ನೀಡಲಾಗಿದೆ. ರೆಸಾರ್ಟ ,ಹೋಮ್ ಸ್ಟೇ ಗಳಲ್ಲಿ ಬಂದ ಪ್ರವಾಸಿಗರಲ್ಲಿ ಜ್ವರ ಅಥವಾ ಕರೋನಾ ಲಕ್ಷಣಗಳು ಬಂದಲ್ಲಿ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿ ಐಸೋಲೇಟ್ ಮಾಡಬೇಕು,ಇಂತವರಿಗೆ ಕೋವಿಡ್ ಟೆಸ್ಟ್ ಮಾಡಿಸಬೇಕು, ಹೊಸವರ್ಷದ ಸಂಭ್ರಮಾಚರಣೆ ಮಾಡಲು ರಾತ್ರಿ ಒಂದು ಘಂಟೆ ವರೆಗೆ ಅವಕಾಶ ಮಾಡಿಕೊಡಲಾಗಿದೆ, ಇನ್ ಡೋರ್ ಮತ್ತು ಔಟ್ ಡೋರ್ ನಲ್ಲಿ ಸೆಲಬ್ರೇಷನ್ ಮಾಡುವವರು ಕಡ್ಡಾಯ ಮಾಸ್ಕ ಧರಿಸಬೇಕು ಉಳಿದಂತೆ ಯಾವುದೇ ಕಠಿಣ ನಿಯಮವನ್ನು ಹೊಸದಾಗಿ ಜಾರಿ ಮಾಡಿಲ್ಲ ಎಂದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!