BREAKING NEWS
Search

Honnavara: ಆಟೋದ ಮೇಲೆ ಟಿಪ್ಪರ್ ಹರಿಸಿ ಹತ್ಯೆ!ಟಾರ್ಗೆಟ್ ಇಟ್ಟಿದ್ದು ಯಾರಿಗೂ ಬಲಿಪಶುವಾದ ಆಟೋ ಚಾಲಕ!

187

ಇದನ್ನೂ ಓದಿ:-

Uttrakannada:ಅಕ್ರಮ ಚಿನ್ನಾಭರಣ ಸಾಗಾಟಕ್ಕೆKSRTC ಬಸ್ ಡ್ರೈವರ್ ಗಳೇ ಟಾರ್ಗೆಟ್!

ಕಾರವಾರ :- ಹಣಕಾಸಿನ( Finance )ವಿಷಯದಲ್ಲಿ
ಟಿಪ್ಪರ್ ಹಾಯಿಸಿ ವ್ಯಕ್ತಿಯ ಕೊಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅರೇಅಂಗಡಿ ಬಳಿ ನಡೆದಿದೆ.

ಓಲ್ವಿನ್ ಲೋಬೋ ಮೃತಪಟ್ಟ ವ್ಯಕ್ತಿಯಾಗಿದ್ದು , ಘಟನೆಯಲ್ಲಿ ಕೇಶವ ನಾಯ್ಕ ಹಾಗೂ ವಸಂತ ನಾಯ್ಕ ಗಂಭೀರ ಗಾಯಗೊಂಡಿದ್ದಾರೆ.

ವಿನಾಯಕ ನಾರಾಯಣ ಭಟ್ ಎನ್ನುವ ವ್ಯಕ್ತಿಯೇ ಕೃತ್ಯ ಮಾಡಿದವನಾಗಿದ್ದು ಹಣಕಾಸಿನ ವಿಚಾರಕ್ಕೆ ಸಂಭಂದಿಸಿದಂತೆ ಜನಾರ್ಧನ ನಾಯ್ಕನ ಜೊತೆ ವಿನಾಯಕ್ ಭಟ್ ಜಗಳವಾಡಿದ್ದನು.

ನಿನ್ನೆ ರಾತ್ರಿ ವೇಳೆ ಆಟೋದಲ್ಲಿ ಓಲ್ವಿನ್, ಜನಾರ್ದನ ನಾಯ್ಕ ಹಾಗೂ ವಸಂತ ನಾಯ್ಕ ಒಟ್ಟಿಗೆ ಕುಳಿತಿದ್ದರು.
ಆಟೋದ ಮೇಲೆ ಏಕಾ ಏಕಿ ವಿನಾಯಕ್ ಭಟ್ ಟಿಪ್ಪರ್ ತೆಗೆದುಕೊಂಡು ಬಂದು ಹಾಯಿಸಿದ್ದಾನೆ.

ಈ ವೇಳೆ ಆಟೋ ಚಾಲಕನಾಗಿದ್ದ ಓಲ್ವಿನ್ ಸ್ಥಳದಲ್ಲೇ ಸಾವು ಕಂಡಿದ್ದು ,ಜನಾರ್ಧನ ನಾಯ್ಕ ಹಾಗೂ ವಸಂತ್ ನಾಯ್ಕಗೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ( Hospital) ಚಿಕಿತ್ಸೆ ನೀಡಲಾಗುತ್ತಿದೆ.

ಆರೋಪಿ ವಿನಾಯಕ ಭಟ್ ಪತ್ತೆಗೆ ಪೊಲೀಸರ ಕಾರ್ಯಾಚರಣೆ ನಡೆಸಿದ್ದು,ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!