BREAKING NEWS
Search

ರಾಮ್‍ಸರ್ ಪಟ್ಟಿ ಸೇರಿದ ಅಘನಾಶಿನಿ ಅಳಿವೆ? ಅಘನಾಶಿನಿ ಅಳಿವೆಯ ವಿಶೇಷ ಏನು?

128

ಕಾರವಾರ: ಜಿಲ್ಲೆಯ ಮಲೆನಾಡು ಭಾಗದಿಂದ ಹರಿದು ಕರಾವಳಿಯ ಕುಮಟಾದಲ್ಲಿ(kumta) ಅರಬ್ಬಿ ಸಮುದ್ರ (arebiyan sea) ಸೇರುವ ವೇಳೆ ಅಘನಾಶಿನಿ ನದಿ ಸೃಷ್ಟಿಸುವ ಅಳಿವೆ ಪ್ರದೇಶ ‘ರಾಮ್‍ಸರ್’ (ಅಂತರಾಷ್ಟ್ರೀಯ ಮಹತ್ವ ಹೊಂದಿದ ಜೌಗು ಪ್ರದೇಶ) ಪಟ್ಟಿಗೆ ಸೇರಿದೆ. ಈ ಮೂಲಕ ಪಟ್ಟಿಗೆ ಸೇರ್ಪಡೆಗೊಂಡ ಜಿಲ್ಲೆಯ ಮೊದಲ
ತಾಣವಾಗಿದೆ.

ಅಘನಾಶಿನಿ (aganashini river) ಅಳಿವೆಯ 4,801 ಹೆಕ್ಟೇರ್ ವ್ಯಾಪ್ತಿಯನ್ನು ರಾಮ್‍ಸರ್ ಪಟ್ಟಿಗೆ ಸೇರಿಸಲಾಗಿದ್ದು, ಇಲ್ಲಿನ ಅಪರೂಪದ ಕಾಂಡ್ಲಾವನ, (kandlavana)ಮೀನು,(fish) ಏಡಿ ಸೇರಿದಂತೆ ಅಪರೂಪದ ಜೀವವೈವಿಧ್ಯ ಸಂರಕ್ಷಣೆಗೆ ನೆರವಾಗಲಿದೆ.

ಅಘನಾಶಿನಿ ಅಳಿವೆಯು 43 ಸಾವಿರಕ್ಕೂ ಅಧಿಕ 66 ವಿಧದ ನೀರು ಪಕ್ಷಿಗಳಿಗೆ ಆವಾಸ ಒದಗಿಸುತ್ತಿದೆ. ಇಲ್ಲಿನ ಗಜಿನಿ ಭೂಮಿ, ಜಲಚರಗಳು ಸುಮಾರು 6500 ದಿಂದ ಏಳು ಸಾವಿರ ಕುಟುಂಬಗಳಿಗೆ ಜೀವನಾಧಾರವೂ ಆಗಿದೆ. ಇಂತಹ ಸಸ್ಯ, ಜೀವ ಸಂಪತ್ತು ಒಳಗೊಂಡ ಪ್ರದೇಶಕ್ಕೆ ಜಾಗತಿಕ ಜೌಗು ಪ್ರದೇಶದ ಮನ್ನಣೆ ನೀಡಲಾಗುತ್ತಿದೆ ಎಂದು ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆ ತಿಳಿಸಿದೆ.

ಪಶ್ಚಿಮ ಘಟ್ಟ ಸಾಲಿನ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಅಘನಾಶಿನಿ ಅಳಿವೆ ಪ್ರದೇಶ ಸುಮಾರು 4,800 ಹೆಕ್ಟೇರ್ ವ್ಯಾಪ್ತಿಯಲ್ಲಿ ನದಿಮುಖಜ ಭೂಮಿ ಆವರಿಸಿಕೊಂಡಿದೆ. ಗಜಿನಿ ಭೂಮಿ, ಕಾಂಡ್ಲಾ ವನಗಳು ಇವುಗಳಲ್ಲಿ ಸೇರಿದೆ. ಅಲ್ಲದೆ ಸಣ್ಣ ದ್ವೀಪಗಳನ್ನೂ ಒಳಗೊಂಡಿದೆ. ಅಘನಾಶಿನಿ ಅಳಿವೆಯ ಹಲವು ಬಗೆಯ ಬೆಳಚು, ಮೀನು, ಸಿಗಡಿ, ಏಡಿ, ಕಗ್ಗ ಭತ್ತ, ಕಾಂಡ್ಲಾ ವನ, ನೂರಾರು ಜಾತಿಯ ಪಕ್ಷಿಗಳ ಆವಾಸ ಸ್ಥಾನವಾಗಿದೆ.

ಇದನ್ನೂ ಓದಿ:-ಭ್ರೂಣ ಲಿಂಗ ಪತ್ತೆ ಕುರಿತು ಮಾಹಿತಿ ನೀಡಿದ್ರೆ 1 ಲಕ್ಷ ಬಹುಮಾನ: ಸಚಿವ ದಿನೇಶ್ ಗುಂಡೂರಾವ್

ಕುಡಿಯುವ ನೀರು, ಕೃಷಿ, ಮತ್ಸ್ಯೋತ್ಪನ್ನ ಹಾಗೂ ಜೀವ ವೈವಿಧ್ಯಗಳಿಂದಾಗಿ ತಾಲ್ಲೂಕಿನ ಜನತೆಯ ಪಾಲಿನ ಜೀವ ನದಿಯಾಗಿರುವ ಅಘನಾಶಿನಿಯ ಹಿನ್ನೀರು ಹಾಗೂ ಅಳಿವೆ ಪ್ರದೇಶ ಮಾನವರಿಂದ ಹಿಡಿದು ಜಲಚರಗಳಿಗೆ ಜೀವನಾದಾರದ ಮೂಲವಾಗಿದೆ.

ಅಘನಾಶಿನಿ ನದಿಯಲ್ಲಿ ಹಲವು ಜಾತಿಯ ಬೆಳಚು ಬೆಳೆಯುತ್ತಿದ್ದು, ಅವುಗಳಲ್ಲಿ ಉಪ್ಪುನೀರು ಪ್ರಮಾಣ ಹೆಚ್ಚಿರುವ ಅಘನಾಶಿನಿ ಸುತ್ತ ಅಡ್ಡ ಬೆಳಚು, ಮಧ್ಯಮ ಉಪ್ಪಿನಂಶ ಇರುವ ಕೊಡಕಣಿ ಸುತ್ತ ಬಿಳಿ ಬೆಳಚು ಹಾಗೂ ಕಡಿಮೆ ಉಪ್ಪಿನಾಂಶ ಇರುವ ದೀವಗಿ ಬಳಿ ಕರಿ ಬೆಳಚು ಸಿಗುತ್ತಿದ್ದು, ಸುಮಾರು 2,500 ಕುಟುಂಬಗಳು ಇವುಗಳನ್ನು ಆರಿಸಿ ಮಾರಾಟ ಮಾಡುವ ಕೆಲಸ ಮಾಡುತ್ತಿವೆ. 5,000 ಕುಟುಂಬಗಳು ಒಂದಲ್ಲೊಂದು ರೀತಿಯ ಮೀನುಗಾರಿಕೆಯಲ್ಲಿ ತೊಡಗಿದ್ದು, ಅಧ್ಯಯನ ಪ್ರಕಾರ ಒಟ್ಟು 7,500 ಕುಟುಂಬಗಳು ಅಘನಾಶಿನಿಯನ್ನೇ ಅವಲಂಬಿಸಿವೆ.

ಸಾಣಿಕಟ್ಟ ಉಪ್ಪು ಉತ್ಪಾದನೆ.

ಅಘನಾಶಿನಿ ನದಿಯ ನೀರಿನ ಮೂಲ ಬಳಸಿಯೇ ಸಾಣಿಕಟ್ಟಾದಲ್ಲಿ ಸಂಪ್ರದಾಯಿಕ ಉಪ್ಪು ಉತ್ಪಾದನೆ ಮಾಡಲಾಗುತ್ತದೆ. ಈ ಭಾಗದ ವಿಶಿಷ್ಟ ಕೆಂಪು ಉಪ್ಪು ನೈಸರ್ಗಿಕ ಉತ್ಪಾದನೆ ಆಗುವುದರಿಂದ ವಿಶೇಷ ಮಹತ್ವ ಹೊಂದಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!