Spirit ಟ್ಯಾಂಕರ್ ಪ್ರಕರಣ ಯಾರಮೇಲೆ ಪ್ರಕರಣ ದಾಖಲಾಯ್ತು? Karwar ಶಾಸಕರ ಕುರಿತು ಅಬಕಾರಿ ಅಧಿಕಾರಿ ಹೇಳಿದ್ದೇನು? ವಿವರ ನೋಡಿ.

193

ಕಾರವಾರ :-ಕಾರವಾರದ ಮಾಜಾಳಿಯಲ್ಲಿ 80 ಲಕ್ಷ ಮೌಲ್ಯದ ಸ್ಪಿರಿಟ್ ತುಂಬಿದ ಟ್ಯಾಂಕರ್ ನನ್ನು ತನಿಖೆಗಾಗಿ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡ ಪ್ರಕರಣ ಇದೀಗ ರಾಜಕೀಯ ರಂಗು ಪಡೆದು ಏಟು ಎದುರೇಟಿನ ನಡುವೆ ಕೊನೆಗೂ ಅಬಕಾರಿ ಜಿಲ್ಲಾಧಿಕಾರಿ ರೂಪಾ ಎಂ.ರವರು ತಾರ್ಕಿಕ ಅಂತ್ಯ ಹಾಡಿದ್ದು ಕಾರವಾರದ ಶಾಸಕ (karwar Mla) ಸತೀಶ್ ಸೈಲ್ ರವರು ತಮಗೆ ಯಾವುದೇ ಒತ್ತಡ ಹೇರಿಲ್ಲ ,ಯಾರಿಂದಲೂ ಸ್ಪಿರೀಟ್ ಟ್ಯಾಂಕರ್ ಬಿಡುವಂತೆ ಕರೆ ಬಂದಿಲ್ಲ ಎಂದು ಮಂಗಳವಾರ ಸಂಜೆ ಮಾಧ್ಯಮ ಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ಕಾರವಾರ ತಾಲೂಕಿನ ಮಾಜಾಳಿ ಚಕ್ ಪೋಸ್ಟ್ನಲ್ಲಿ ನ.4 ರಂದು ತಪಾಸನೆ ನಡೆಸಿದ್ದ ಸ್ಪಿರಿಟ್(ಮದ್ಯಸಾರ) ತುಂಬಿದ ಟ್ಯಾಕರನ್ನು ಮಂಗಳವಾರ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:-80 ಲಕ್ಷ ಸ್ಪಿರೀಟ್ ಟ್ಯಾಂಕರ್ ಅಬಕಾರಿ ಅಧಿಕಾರಿಗಳಿಂದ ವಶ-ಪ್ರಕರಣ ದಾಖಲಿಸಿಕೊಳ್ಳಿ ಇಲ್ಲವೇ ಬಿಡಿ ಶಾಸಕ ಸತೀಶ್ ಸೈಲ್ ಅಧಿಕಾರಿಗಳಿಗೆ ತರಾಟೆ.(ಅಕ್ಷರದ ಮೇಲೆ ಕ್ಲಿಕ್ ಮಾಡಿ)

ನ.4 ರಂದು ಖಚಿತ ಮಾಹಿತಿಯ ಮೇರೆಗೆ ಸ್ಪಿರಿಟ್ ತುಂಬಿದ ಟ್ಯಾಂಕರನ್ನು ತಪಾಸಣೆ ನಡೆಸಲಾಗಿತ್ತು. ಬಳಿಕ ಅಧಿಕಾರಿಗಳಿಗೆ (officers) ಸಂಶಯ ಬಂದ ಕಾರಣ ಸ್ಪಿರಿಟನ್ನು ಪರೀಕ್ಷೆಗೆಂದು ಧಾರವಾಡಕ್ಕೆ ಕಳುಹಿಸಿಲಾಗುತ್ತು. ಪರೀಕ್ಷೆಯಲ್ಲಿ ಸ್ಪಿರೀಟನ್ನು ಮದ್ಯ ತಯಾರಿಗೆ ಬಳಸಲಾಗುತ್ತದೆ ಎಂದು ತಿಳಿದುಬಂದ ಕಾರಣ ಟ್ಯಾಕರ್(tankar) ಹಾಗೂ ಚಾಲಕನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಟ್ಯಾಂಕರ್‌ನ ಚಾಲಕ ಮಧ್ಯ ಪ್ರದೇಶ ಮೂಲದ ಮಗ್ಗರ್ ಸಿಂಗ್‌ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಲಾಗಿದೆ. ಜತೆಗೆ ಸಾಗಾಟ ಮಾಡುತ್ತಿದ್ದ ಬೀದರಿನ ರವೀಂದ್ರ ಡಿಸ್ಟಲರಿ ಹಾಗೂ ಗೊವಾ (goa)ರಾಜ್ಯಕ್ಕೆ ತರಿಸಿಕೊಳ್ಳುತ್ತಿದ್ದ ಮರಗಾಂವ ಮೂಲದ ಗ್ಲೋಬಲ್ ಕೆಮಿಕಲ್ಸ್ ವಿರುದ್ಧವೂ ಪ್ರಕರಣ ದಾಖಲಿಸಿ ವರದಿಯನ್ನು ನ್ಯಾಯಾಲಯಕ್ಕೆ ನೀಡಲಾಗಿದೆ, ಗೋವಾದಲ್ಲಿ ಗ್ಕೋಬಲ್ ಕೆಮಿಕಲ್ಸ್ ಎಂಬ ಕಂಪನಿ (company )ಮುಚ್ಚಿಹೋಗಿದೆ,ಸುಳ್ಳು ದಾಖಲೆಯಲ್ಲಿ ಸಾಗಾಟ ಮಾಡಲಾಗುತಿತ್ತು, (transport)ಇದರ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದರು.

ಇದನ್ನೂ ಓದಿ:-ಮಾಜಾಳಿ ಎಣ್ಣೆ ಪ್ರಸಂಗ-80 ಲಕ್ಷ ಸ್ಪಿರೀಟ್ ನಾಲ್ಕು ಕೋಟಿ ಬೆಲೆ? ಏನಿದು ಪ್ರಸಂಗ? ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿದ್ದೇನು? (ಅಕ್ಷರದ ಮೇಲೆ ಕ್ಲಿಕ್ ಮಾಡಿ)

ಟ್ಯಾಕರ್‌ನಲ್ಲಿ 18 ಲಕ್ಷ ಮೌಲ್ಯದ ಸ್ಪಿರಿಟ್ ಇದ್ದು ಅದರಿಂದ 3.88 ಕೋಟಿ ಮೌಲ್ಯದ ಮದ್ಯವನ್ನು ತಯಾರಿಸಬಹದು ಎಂದು ಅವರು ಮಾಹಿತಿ ನೀಡಿದರು.
ಮಾಜಾಳಿ ತನಿಖಾ ಠಾಣೆಯ ಉಪ ಇನ್ಸ್ಪೆಕ್ಟರ್ ಸದಾಶಿವ ಕೊರ್ತಿ, ಕಾರವಾರ ಉಪ ವಿಭಾಗದ ಉಪ ಅಧಿಕ್ಷಕ ಬಸವರಾಜ ಹಾಗೂ ಸಿಬ್ಬಂದಿಗಳು ಈ ಸಂದರ್ಭದಲ್ಲಿದ್ದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!