BREAKING NEWS
Search

ನಾಳೆ ನಾರಿಯರಿಂದ ಸಂಸದ ಅನಂತಕುಮಾರ್ ಹೆಗಡೆ ಕಚೇರಿ ಮುತ್ತಿಗೆ|ಕಾರಣ ಏನು?

115

ಕಾರವಾರ ,ಜನವರಿ 22:- ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು,ಜನಪರ ಪರ್ಯಾಯ ನೀತಿಗಳನ್ನು ಜಾರಿಗೊಳಿಸಬೇಕು, ದುಡಿಯುವ ವರ್ಗದ ಹಕ್ಕನ್ನು ಸಂರಕ್ಷಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಜನವರಿ 23,24,25ರಂದು ಮೂರು ದಿನಗಳ ಕಾಲ ಸಂಸದರ ಕಚೇರಿ ಚಲೋ ಚಳುವಳಿ ನಡೆಯಲಿದೆ ಎಂದು CITU ಉತ್ತರಕನ್ನಡ ಜಿಲ್ಲಾ ಸಮಿತಿ ಪತ್ರಿಕಾಹೇಳಿಕೆ ಬಿಡುಗಡೆ ಮಾಡಿದೆ.

ದೇಶ ಉಳಿಸಿ,ಜನತೆಯ ಇದು ರಕ್ಷಿಸಿ ಎಂಬ ಘೋಷಣೆಯೊಂದಿಗೆ ಕಾರ್ಮಿಕ ವರ್ಗದ ನೇತ್ರತ್ವದಲ್ಲಿ ಜನವರಿ 12ರಿಂದ ಫೆಬ್ರವರಿ 16ರವರೆಗೆ ದೇಶಾದ್ಯಂತ ಪ್ರಚಾರಾಂದೋಲನ ನಡೆಯಲಿದ್ದು,ಅದರ ಭಾಗವಾಗಿ ಸಹಿಸಂಗ್ರಹ ಚಳುವಳಿ ಸಹ ನಡೆಯಲಿದೆ. ಕಳೆದ 10 ವರ್ಷಗಳಿಂದ ದೇಶದ ಕಾರ್ಮಿಕ ವರ್ಗ ತೀವ್ರ ಸಂಕಷ್ಟದಲ್ಲಿದ್ದು,ಬದುಕು ಸಾಗಿಸಲು ಹರಸಾಹಸಪಡುವಂತಾಗಿದೆ. ದೇಶವನ್ನಾಳುವ ನರೇಂದ್ರ ಮೋದಿ ಸರಕಾರ ನಿರಂತರವಾಗಿ ಕಾರ್ಪೊರೇಟ್ ಪರ ನೀತಿಗಳನ್ನು ಜಾರಿಗೊಳಿಸುತ್ತಿದೆ. ದೇಶದ ಪ್ರಮುಖ ಕಾರ್ಮಿಕ ಕಾನೂನುಗಳನ್ನು ಸಂಹಿತೆಯನ್ನಾಗಿ ರೂಪಿಸಲು ಹೊರಟಿದ್ದು,ಮತ್ತೆ ಕಾರ್ಮಿಕರನ್ನು ಗುಲಾಮರನ್ನಾಗಿ ದುಡಿಸುವ ಷಡ್ಯಂತ್ರ ಅಡಗಿದೆ.

ಇದನ್ನೂ ಓದಿ:-ಬಗರ್ ಹುಕುಂ ಆ್ಯಪ್‌ ಬಿಡುಗಡೆ|ಏನಿದು ಆ್ಯಪ್‌? ಹೇಗೆ ಕೆಲಸ ಮಾಡುತ್ತದೆ? ವಿವರ ನೋಡಿ.

ಕನಿಷ್ಟ ಕೂಲಿ, ಸಾಮಾಜಿಕ ಭದ್ರತೆ ಇಲ್ಲದೆ ಅಸಂಘಟಿತ ಕ್ಷೇತ್ರದ ಕಾರ್ಮಿಕರು ಅತ್ಯಂತ ನಿಕ್ರಷ್ಠವಾಗಿ ಬದುಕುವಂತಾಗಿದೆ. ಕೇಂದ್ರ ಸರಕಾರದ ಯೋಜನೆಯಡಿಯಲ್ಲಿ ದುಡಿಯುವ ಸ್ಕೀಂ ನೌಕರರಾದ ಅಂಗನವಾಡಿ,ಬಿಸಿಯೂಟ, ಆಶಾ ಕಾರ್ಯಕರ್ತೆಯರು ತಮ್ಮ ಅಸ್ತಿತ್ವಕ್ಕಾಗಿ ಹೆಣಗಾಡುವಂತಾಗಿದೆ. ಸಾರ್ವಜನಿಕ ಉದ್ದಿಮೆಗಳನ್ನು ಕಾರ್ಪೊರೇಟ್ ಕಂಪೆನಿಗಳ ಕೈಗೊಪ್ಪಿಸಿ ದೇಶದ ಆರ್ಥಿಕತೆಯನ್ನೇ ದಿವಾಳಿಯೆಬ್ಬಿಸಿದೆ.ಇಂತಹ ಸಂದರ್ಭದಲ್ಲಿ ದೇಶದ ಜನತೆಯ ಬದುಕನ್ನು ಸಂರಕ್ಷಿಸಲು ಕಾರ್ಮಿಕ ವರ್ಗ ಒಂದಾಗಿ ಸಮರಧೀರ ಹೋರಾಟದತ್ತ ಮುನ್ನಡೆಯಲು ಜನವರಿ ಫೆಬ್ರವರಿ ತಿಂಗಳಾದ್ಯಂತ ಪ್ರಚಾರಾಂದೋಲನವನ್ನು ಹಮ್ಮಿಕೊಂಡಿದೆ.

ಇದನ್ನೂ ಓದಿ:-ರಾಜ್ಯದ ಜನರಿಗೆ ಗೃಹ ಜ್ಯೋತಿ ನಿಯಮ ಬದಲಾಯಿಸಿದ ಸರ್ಕಾರ? ಏನು ಬದಲಾವಣೆ ವಿವರ ನೋಡಿ.

ಜನವರಿ 23ರಂದು ಬೆಳಿಗ್ಗೆ 10.30ಕ್ಕೆ ಕಾರವಾರ ನಗರದಲ್ಲಿ ಸಂಸದರ ಕಚೇರಿ ಇರುವ ಡಿ.ಸಿ. ಕಚೇರಿ ಕಟ್ಟಡ ಎದುರು ಸ್ಕೀಂ ನೌಕರರಾದ ಅಂಗನವಾಡಿ, ಬಿಸಿಯೂಟ ಆಶಾ ನೌಕರರಿಂದ ಪ್ರತಿಭಟನಾ ಪ್ರದರ್ಶನ ಜರುಗಲಿದ್ದು,ಜನವರಿ 24ರಂದು ಬೆಳಿಗ್ಗೆ 10.30ಕ್ಕೆ ಪಂಚಾಯತ, ಮುನ್ಸಿಪಲ್, ಪೇಪರಮಿಲ್ಲ, ಗ್ರಾಸೀಂ ಕಾರ್ಮಿಕರಿಂದ ಮತ್ತು 25 ರಂದು ಅಸಂಘಟಿತ ಕಾರ್ಮಿಕರಾದ ಕಟ್ಟಡ, ,ಹಮಾಲಿ, ಮುಂತಾದ ಕಾರ್ಮಿಕರಿಂದ ಪ್ರತಿಭಟನೆ ನಡೆಯಲಿದೆ.ಆದ್ದರಿಂದ ಜಿಲ್ಲೆಯ ವಿವಿಧ ವಿಭಾಗದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು CITU ಜಿಲ್ಲಾಧ್ಯಕ್ಷರಾದ ತಿಲಕ ಗೌಡ್ ಮತ್ತು ಪ್ರಧಾನ ಕಾರ್ಯದರ್ಶಿ ಸಿ,ಆರ್.ಶಾನಭಾಗ ರವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!